Coffee Side Effects: ಪ್ರತಿದಿನ ಕಾಫಿ ಕುಡಿಯುವವರು ಇವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು

Coffee Side Affects
Published on

ಕಾಫಿಯ ಸುವಾಸನೆ ಮೂಗಿಗೆ ಬಡಿದರೆ ಸಾಕು ನಿಮ್ಮ ನಾಲಿಗೆ ಒಮ್ಮೆಯಾದರೂ ಅದರ ರುಚಿ ನೋಡಲು ಬಯಸುತ್ತದೆ. ಕಾಫಿ ಅತ್ಯದ್ಭುತ ರುಚಿ ಹೊಂದಿದೆ. ಮನಸ್ಸಿನ ಭಾರವನ್ನು ಇಳಿಸಲು ಅನೇಕ ಜನರು ಕಾಫಿ ಮೇಲೆ ಅವಲಂಬಿತರಾಗಿದ್ದಾರೆ. ಇಂದು ಕಾಫಿ ನಮ್ಮ ಜೀವನದ ಒಂದು ಭಾಗವೇ ಆಗಿದೆ. ಯಾವುದೇ ಆಯಾಸ ಅಥವಾ ಒತ್ತಡದ ಬಗ್ಗೆ ಯೋಚಿಸದೆ ಕಾಫಿ ಕುಡಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಕಾಫಿ ಕುಡಿಯುವುದು ಒಳ್ಳೆಯದು ಆದರೆ, ಹೆಚ್ಚು ಕಾಫಿ ಕುಡಿಯುವುದು ದೀರ್ಘಕಾಲದ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈಗ ಕಾಫಿ ಎಷ್ಟು ಹಾನಿಕಾರಕ ಎಂದು ತಿಳಿದುಕೊಳ್ಳೋಣ.

ಕಾಫಿಯ ಅಡ್ಡಪರಿಣಾಮಗಳು

ರಕ್ತದ ಒತ್ತಡ: ಅಧಿಕ ರಕ್ತದೊತ್ತಡ ಅಥವಾ ಬಿಪಿ ಇರುವವರು ಕಾಫಿ ಕುಡಿಯುವುದು ತುಂಬಾ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ಬಿಪಿ ದ್ವಿಗುಣಗೊಳ್ಳುವ ಸಾಧ್ಯತೆಗಳೂ ಇವೆ. ಅಲ್ಲದೇ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆಯೂ ಇದೆ.

ಹೊಟ್ಟೆಯ ಸಮಸ್ಯೆ: ಕಾಫಿ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ ನಿಜ. ಆದರೆ, ಅತಿಯಾಗಿ ಸೇವಿಸುವುದರಿಂದ ಹೊಟ್ಟೆಗೆ ತೊಂದರೆಯಾಗುವ ಅಪಾಯವೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಅತಿಯಾದ ಕಾಫಿ ಸೇವನೆಯು ದೇಹದಲ್ಲಿ ಗ್ಯಾಸ್ಟ್ರಿಕ್ ಹಾರ್ಮೋನ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಇದು ಸುಲಭವಾಗಿ ಗ್ಯಾಸ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ನಿದ್ರಾಹೀನತೆ: ನಿದ್ರಾಹೀನತೆ ಇರುವವರು ಹೆಚ್ಚು ಕಾಫಿ ಕುಡಿಯುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನಿದ್ರೆಯ ಕೊರತೆಯು ಗಂಭೀರವಾದ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು.

ಮೂಳೆಗಳಿಗೆ ಹಾನಿ: ಕಾಫಿಯಲ್ಲಿರುವ ಕೆಫೀನ್ ಎಂಬ ರಾಸಾಯನಿಕವು ಕೆಲವು ಜನರಲ್ಲಿ ಮೂಳೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಹೊಂದಿದೆ. ಇದರಿಂದಾಗಿ ದೇಹದ ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆಗಳೂ ಇವೆ. ಹೆಚ್ಚು ಕಾಫಿ ಕುಡಿಯುವುದರಿಂದ ಆಸ್ಟಿಯೊಪೊರೋಸಿಸ್ ಅಪಾಯವೂ ಹೆಚ್ಚಾಗುತ್ತದೆ.

ಆತಂಕ: ಇತ್ತೀಚಿನ ದಿನಗಳಲ್ಲಿ ಒತ್ತಡದಲ್ಲಿರುವ ಅನೇಕ ಜನರು ಹೆಚ್ಚು ಕಾಫಿ ಕುಡಿಯುತ್ತಾರೆ. ಆದರೆ ಪ್ರತಿದಿನ ಕಾಫಿ ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಾಗುವುದು, ಆತಂಕದಂತಹ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಎದೆಯುರಿ: ಹೆಚ್ಚು ಕಾಫಿ ಸೇವನೆ ಮಾಡುವುದರಿಂದ ಎದೆಯುರಿಯಂತಹ ಮುಂತಾದ ಸಮಸ್ಯೆಗಳೂ ಉಂಟಾಗಬಹುದು. ಈಗಾಗಲೇ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಕಾಫಿ ಸೇವಿಸಬಾರದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net