ಚಾಣಕ್ಯನ ಪ್ರಕಾರ ಈ ಅಪಾಯಕಾರಿ ಅಭ್ಯಾಸಗಳು ನಿಮ್ಮ ಸೌಂದರ್ಯವನ್ನೇ ಕಸಿದುಕೊಳ್ಳುತ್ತೆ!

Chanakya Niti
Published on

ವೃದ್ಧಾಪ್ಯವು ಸಾಮಾನ್ಯವಾಗಿ ನಾವು ಒಪ್ಪಿಕೊಳ್ಳಲಾಗದ ಕಟುವಾದ ವಾಸ್ತವವಾಗಿದೆ. ಹೆಚ್ಚಿನ ಜನರು ಅದನ್ನು ಮರೆಮಾಡಲು ಮತ್ತು ಮರೆತುಬಿಡಲು ಬಯಸುತ್ತಾರೆ. ಹಿಂದಿನ ಕಾಲದಲ್ಲಿ ವಯಸ್ಸಾದವರು ಮಾತ್ರ ಮುದುಕರಂತೆ ಕಾಣುತ್ತಿದ್ದರು. ಆದರೆ, ಈಗಿನ ಕೆಟ್ಟ ಜೀವನಶೈಲಿ ಯುವಕರನ್ನು ವಯಸ್ಸಾದಂತೆ ಕಾಣುವಂತೆ ಮಾಡುತ್ತಿದೆ.

ಕೂದಲು ಅಕಾಲಿಕವಾಗಿ ಬಿಳಿಯಾಗುವುದು, ದುರ್ಬಲತೆ ಮತ್ತು ಆಗಾಗ ಅನಾರೋಗ್ಯಕ್ಕೀಡಾವುದು ಯುವ ಜನಾಂಗದಲ್ಲಿನ ವಯಸ್ಸಾದ ಚಿಹ್ನೆಗಳಾಗಿವೆ. ಕೆಲವು ಕೆಟ್ಟ ಅಭ್ಯಾಸಗಳಿಂದ ಇಂತಹ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ಚಾಣಕ್ಯ. ಅಂತಹ ಅಭ್ಯಾಸಗಳು ಯಾವುವು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಅಂದಹಾಗೆ ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಯೌವ್ವನದಲ್ಲಿ ವಯಸ್ಸಾದಂತೆ ಕಾಣುವಂತೆ ಮಾಡುವ ಅಭ್ಯಾಸಗಳು

* ಯಾವಾಗಲೂ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು ಎಂದು ಚಾಣಕ್ಯ ಹೇಳುತ್ತಾನೆ. ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸದಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿದ್ದರೆ ಅವರು ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸುತ್ತಾರೆ.

* ಪ್ರಯಾಣದ ಆಯಾಸ ಮತ್ತು ಅನಿಯಮಿತ ಚಟುವಟಿಕೆಗಳು ಯೌವನದಲ್ಲಿ ವೃದ್ಧಾಪ್ಯವನ್ನು ಉಂಟುಮಾಡುತ್ತವೆ. ಗಂಡನಿಂದ ದೈಹಿಕ ಸುಖ ಸಿಗದ ಹೆಂಗಸರು ಕೂಡ ಬೇಗ ಯೌವನ ಕಳೆದುಕೊಳ್ಳುತ್ತಾರೆ ಎನ್ನುತ್ತಾರೆ ಚಾಣಕ್ಯ.

* ಸಾಕಿದ ಕುದುರೆಗೆ ಬೇಗನೆ ವಯಸ್ಸಾಗುತ್ತದೆ ಎಂದು ಹೇಳಲಾಗುತ್ತದೆ. ಕುದುರೆಯ ಮೂಲ ಕಾರ್ಯವು ಓಟವಾಗಿರುವುದರಿಂದ ಅದನ್ನು ಕಟ್ಟಿಹಾಕಿದರೆ ಮತ್ತು ಅದಕ್ಕೆ ಅವಕಾಶ ನೀಡದಿದ್ದರೆ, ಯೌವನ ಕುಂದುತ್ತದೆ. ಅದೇ ರೀತಿ ಪ್ರತಿಯೊಬ್ಬರಿಗೂ ದೈಹಿಕ ಶಕ್ತಿ ಅತ್ಯಗತ್ಯವಾಗಿದೆ. ಅದನ್ನು ಕಟ್ಟಿ ಹಾಕಿದರೆ, ಶೀಘ್ರದಲ್ಲೇ ದೈಹಿಕವಾಗಿ ದುರ್ಬಲರಾಗುತ್ತಾರೆ.

* ಬೆಳಿಗ್ಗೆಯಿಂದ ಸಂಜೆಯವರೆಗೆ ಮಲಗುವವರಿಗೆ ಲಕ್ಷ್ಮಿ ದೇವಿಯ ಕೃಪೆ ಇರುವುದಿಲ್ಲ. ಅವರು ಶೀಘ್ರದಲ್ಲೇ ವಯಸ್ಸಾದವರಂತೆ ಕಾಣುತ್ತಾರೆ. ಜೀವನದಲ್ಲಿ ಯಾವುದೇ ಪ್ರಗತಿ ಇರುವುದಿಲ್ಲ. ಚಾಣಕ್ಯ ಹೇಳುವಂತೆ ಈ ಅಭ್ಯಾಸವಿದ್ದರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಜೀವನಕ್ಕೆ ತೊಂದರೆಯಾಗುತ್ತದೆ.

* ಅಗತ್ಯಕ್ಕಿಂತ ಹೆಚ್ಚು ತಿಂದರೂ ಯೌವನದ ಮೇಲೆ ಪರಿಣಾಮ ಬೀರುತ್ತದೆ. ನೀವು ಆರೋಗ್ಯವಂತರಾಗಿದ್ದರೆ ನಿಮ್ಮ ವಯಸ್ಸು ಯಾವಾಗಲೂ 18 ಆಗಿರುತ್ತದೆ. ಅತಿಯಾಗಿ ತಿನ್ನುವವರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net