ಮುಂಬೈ: ಇಬ್ಬರು ಸ್ಟಾರ್ ಹೀರೋಯಿನ್ಗಳ ಜೊತೆ ಡೇಟ್ ಮಾಡಿದ್ದಕ್ಕೆ ನನಗೆ ಮೋಸಗಾರ ಎಂಬ ಟ್ಯಾಗ್ ನೀಡಿದರು. ಮೋಸಗಾರ ಎಂಬ ಮುದ್ರೆಯೊಂದಿಗೆ ನನ್ನ ಅರ್ಧ ಜೀವನವನ್ನು ಕಳೆದೆ ಎಂದು ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ತೀವ್ರ ಬೇಸರ ಹೊರಹಾಕಿದ್ದಾರೆ.
ಅಂದಹಾಗೆ ರಣಬೀರ್ ಕಪೂರ್ ಅವರು ಬಾಲಿವುಡ್ನ ಸ್ಫುರದ್ರೂಪಿ ನಾಯಕರಲ್ಲಿ ಒಬ್ಬರು. ರಣಬೀರ್ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದೆ. ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ ತಮ್ಮ ನಟನೆಯಿಂದಲೇ ವಿಶೇಷ ಮನ್ನಣೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಗಳಿಸಿದರು. ಸದ್ಯ ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಮತ್ತು ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ನಿಖಿಲ್ ಕಾಮತ್ ಅವರ ಪೀಪಲ್ ಬೈ ಡಬ್ಲ್ಯುಟಿಎಫ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಣಬೀರ್, ಹಲವು ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಹಿಂದಿನ ಲವ್ ಲೈಫ್ ಮತ್ತು ಬ್ರೇಕಪ್ಗಳು ತಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನಾನು ಇಬ್ಬರು ಸ್ಟಾರ್ ಹೀರೋಯಿನ್‌ಗಳೊಂದಿಗೆ ಡೇಟ್ ಮಾಡಿದ್ದೇನೆ. ಅದು ಕೂಡ ನನ್ನ ಜೀವನದಲ್ಲಿ ನನಗೆ ನೆಗಿಟಿವ್ ಆಗಯಿತು. ಅನೇಕರು ನನ್ನನ್ನು ಅವರ ಮಾಜಿ ಬಾಯ್‌ಫ್ರೆಂಡ್ ಎಂದು ಕರೆದರು. ಅಲ್ಲದೆ, ನನಗೆ ಕ್ಯಾಸಿನೋವಾ (ಅನೇಕ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ) ಮತ್ತು ಮೋಸಗಾರ ಎಂಬ ವಿವಿಧ ಹೆಸರುಗಳಿಂದ ಕರೆಯುತ್ತಿದ್ದರು. ನನ್ನ ಜೀವನದ ಅರ್ಧದಷ್ಟು ನಾನು ಮೋಸಗಾರನೆಂಬ ಪಟ್ಟದೊಂದಿಗೆ ಬದುಕಿದ್ದೇನೆ. ಇಂದಿಗೂ ಅದು ಮುಂದುವರಿದಿದೆ ಎಂದು ಬೇಸರ ಹೊರಹಾಕಿದರು.
ನನ್ನ ಮಗಳು ರಾಹಾ ಅಂದರೆ ನನಗೆ ಪ್ರಾಣ. ನನ್ನ ತಂದೆ ರಿಷಿ ಕಪೂರ್ ಶಾರ್ಟ್ ಟೆಂಪರ್ ವ್ಯಕ್ತಿ. ಆದರೂ ತುಂಬಾ ಒಳ್ಳೆಯ ಮನುಷ್ಯ. ನಾನೆಂದಿಗೂ ಅವರ ಕಣ್ಣಿನ ಬಣ್ಣವನ್ನೇ ನೋಡಿಲ್ಲ. ನಾನು ಯಾವಾಗಲೂ ಅವರ ಮುಂದೆ ತಲೆ ತಗ್ಗಿಸಿ ನಿಲ್ಲುತ್ತೇನೆ ಎಂದು ಸಂದರ್ಶನದಲ್ಲಿ ರಣಬೀರ್ ಹೇಳಿಕೊಂಡಿದ್ದಾರೆ.
ಅಂದಹಾಗೆ ರಣಬೀರ್ ಅವರು ಈ ಹಿಂದೆ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಜೊತೆ ಡೇಟಿಂಗ್ ಮಾಡಿದ್ದು ಗೊತ್ತೇ ಇದೆ. ಆ ಸಮಯದಲ್ಲಿ ಇವರ ಕುರಿತಾಗಿ ಹಲವು ಸುದ್ದಿಗಳು ವೈರಲ್ ಆಗಿದ್ದವು. (ಏಜೆನ್ಸೀಸ್)
ಮೂಗುತಿ ಸುಂದರಿ ಸಾನಿಯಾ ಜತೆ ಮದುವೆ: ಕೊನೆಗೂ ಮೌನ ಮುರಿದ ಮೊಹಮ್ಮದ್ ಶಮಿ!
ರೀಲ್ಸ್ ಮಾಡಲು ದುಬಾರಿ ಕ್ಯಾಮೆರಾ ಖರೀದಿಸುವ ಆಸೆ: ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಖತರ್ನಾಕ್ ಲೇಡಿ!