ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರು ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಎಬಿ ಡಿವಿಲಿಯರ್ಸ್ ಅವರನ್ನು ತಮ್ಮ ವೃತ್ತಿಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಬ್ಯಾಟರ್ ಎಂದು ಕೊಂಡಾಡಿದ್ದಾರೆ.
ಇತ್ತೀಚೆಗೆ ಡಿವಿಲಿಯರ್ಸ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಬಾಬರ್ ಈ ಮಾತುಗಳನ್ನು ಆಡಿದ್ದಾರೆ. ನಿಮ್ಮ ಪ್ರಕಾರ ಅತ್ಯುತ್ತಮ ಬ್ಯಾಟರ್ ಯಾರು ಎಂಬುದನ್ನು ಆಯ್ಕೆ ಮಾಡಲು ಡಿವಿಲಿಯರ್ಸ್ ಕೇಳಿದರು. ಈ ವೇಳೆ ತಕ್ಷಣ ಉತ್ತರಿಸಿದ ಬಾಬರ್, ಸಕ್ರಿಯ ಕ್ರಿಕೆಟಿಗರಿಗಿಂತ ನಿವೃತ್ತಿ ಘೋಷಣೆ ಮಾಡಿರುವ ಡಿವಿಲಿಯರ್ಸ್ ಹೆಸರು ತೆಗೆದುಕೊಂಡರು. ತಮ್ಮ ಹೆಸರನ್ನು ಕೇಳಿ ಡಿವಿಲಿಯರ್ಸ್ ಒಂದು ಕ್ಷಣ ನಗೆಗಡಲಲ್ಲಿ ತೇಲಿದರು. ನನ್ನನ್ನು ಬಿಟ್ಟು ಬೇರೊಬ್ಬರನ್ನು ಆಯ್ಕೆ ಮಾಡುವಂತೆ ಕೇಳಿದಾಗ ನನ್ನ ಆಯ್ಕೆ ಒಂದೇ ಆದು ಎಬಿ ಡಿವಿಲಿಯರ್ಸ್ ಎಂದು ಬಾಬು ಮರು ಉತ್ತರಿಸಿದರು.
ಇದೇ ಸಂದರ್ಭದಲ್ಲಿ ತನ್ನ ವೃತ್ತಿ ಜೀವನದಲ್ಲಿ ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂಬುದನ್ನು ಬಾಬರ್ ಬಹಿರಂಗಪಡಿಸಿದರು. ಅವರ ಪ್ರಕಾರ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಬೌಲಿಂಗ್ ಎದುರಿಸುವುದು ಕಷ್ಟ ಎಂದರು.
ಫೋನ್ಬುಕ್ನಲ್ಲಿರುವ ಪ್ರಖ್ಯಾತ ವ್ಯಕ್ತಿ ಯಾರು ಎಂದು ಡಿವಿಲಿಯರ್ಸ್ ಪ್ರಶ್ನಿಸಿದರು. ಅಲ್ಲದೆ, ಈ ಬಾರಿಯೂ ನನ್ನ ಹೆಸರನ್ನು ತೆಗೆದುಕೊಳ್ಳಬೇಡಿ ಎಂದು ನಗೆಚಟಾಕಿ ಹಾರಿಸಿದರು. ಈ ವೇಳೆ ಮುಗುಳ್ನಕ್ಕ ಬಾಬರ್, ಫೋನ್ಬುಕ್ನಲ್ಲಿ ಪಾಕಿಸ್ತಾನಿ ಸಿಂಗರ್ ಅತಿಫ್ ಅಸ್ಲಾಂ ಹೆಸರಿದೆ ಎಂದರು.
ಗ್ಲೋಬಲ್ ಟಿ20 ಕ್ರಿಕೆಟ್ನಲ್ಲಿ ಭಾಗವಹಿಸಲು ಎನ್ಒಸಿ ಕೋರಿ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ವಿನಂತಿಸಿದ್ದರು. ಆದರೆ, ಮುಂಬರುವ ದಿನಗಳಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯಗಳು ಮತ್ತು ಮುಂದಿನ ವರ್ಷದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿವೆ. ಆಗಸ್ಟ್ 2024 ರಿಂದ ಮಾರ್ಚ್ 2025 ರ ಅವಧಿಯಲ್ಲಿ ಪಾಕಿಸ್ತಾನ ಸರಣಿ ಪಂದ್ಯಗಳನ್ನು ಎದುರಿಸುವುದರಿಂದ ರಾಷ್ಟ್ರೀಯ ಆಯ್ಕೆ ಸಮಿತಿಯೊಂದಿಗೆ ಸಮಾಲೋಚಿಸಿ, ಈ ಮೂವರು ಆಟಗಾರರಿಗೆ ಎನ್ಒಸಿ ನೀಡುವುದನ್ನು ನಿರಾಕರಿಸಲಾಗಿದೆ. (ಏಜೆನ್ಸೀಸ್)
ರೀಲ್ಸ್ ಮಾಡಲು ದುಬಾರಿ ಕ್ಯಾಮೆರಾ ಖರೀದಿಸುವ ಆಸೆ: ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಖತರ್ನಾಕ್ ಲೇಡಿ!
ಆ ಇಬ್ಬರು ಸ್ಟಾರ್ ಹೀರೋಯಿನ್ ಜತೆ ಡೇಟ್ ಮಾಡಿದ್ದಕ್ಕೆ ಮೋಸಗಾರ ಪಟ್ಟ ಕಟ್ಟಿದರು! ರಣಬೀರ್ ಕಪೂರ್ ಬೇಸರ
ಒಂದೇ ಪಂದ್ಯದಲ್ಲಿ ಇಬ್ಬರು ಬೆನ್ ಸ್ಟೋಕ್ಸ್! ಒಂದು ಕ್ಷಣ ನಮ್ಮ ಕಣ್ಣುಗಳನ್ನೇ ನಂಬಲಾಗದ ದೃಶ್ಯವಿದು