ಸರ್ವಿಕಲ್‌ ಕ್ಯಾನ್ಸರ್‌ ಅರಿವು ಮಾಸ; ವರದಾನವಾದ ಎಚ್‌ಪಿವಿ ಚುಚ್ಚುಮದ್ದು

Cervical cancer
Published on

ಬೆಂಗಳೂರು: ಕರೊನಾ ಸಾಂಕ್ರಾಮಿಕ ರೋಗದಿಂದ ನಿಧಾನವಾಗಿ ಜಗತ್ತು ಹೊರಬರುತ್ತಿರುವ ಹಂತದಲ್ಲಿ, Cervical cancer ಅರಿವು ಮಾಸ ನಡೆಯುತ್ತಿದೆ. ಕ್ಯಾನ್ಸರ್‌ ರೋಗ ಇಂದಿಗೂ ಆರೋಗ್ಯಸೇವಾ ಕ್ಷೇತ್ರದಲ್ಲಿ ಸವಾಲಾಗಿದೆ. ಹೀಗಿರುವಾಗ ಎಚ್‌ಪಿವಿ ಚುಚ್ಚುಮದ್ದನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕಿದೆ. ಇದರಿಂದ ರೋಗ ಪತ್ತೆ ಪರೀಕ್ಷೆ, ಕ್ಯಾನ್ಸರ್‌ ಪೂರ್ವ ಚಿಕಿತ್ಸೆ ಮತ್ತು ಸರ್ವಿಕಲ್‌ ಕ್ಯಾನ್ಸರ್‌ ನಿರ್ವಹಣೆಯ ಮೂಲಕ ಕ್ಯಾನ್ಸರ್​ನ್ನು ನಿಯಂತ್ರಿಸಬಹುದಾಗಿದೆ.

ಮನುಷ್ಯನ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಹ್ಯೂಮನ್‌ ಪಾಪಿಲೋಮಾವೈರಸ್‌ ಅಥವಾ ಎಚ್‌ಪಿವಿ ಹೆಚ್ಚು ಸಾಮಾನ್ಯವಾಗಿ ಕಾಣಿಸುವ ವೈರಸ್‌. ಎಚ್‌ಪಿವಿ ಸೋಂಕು ಯಾವುದೇ ಹಸ್ತಕ್ಷೇಪವಿಲ್ಲದೇ ಕೆಲವೇ ತಿಂಗಳಲ್ಲಿ ಕಣ್ಮರೆಯಾಗುತ್ತದೆ. ಕೆಲ ಪ್ರಕರಣಗಳಲ್ಲಿ ಸೋಂಕು ದೇಹದಲ್ಲಿಯೇ ಉಳಿದು ಸರ್ವಿಕಲ್‌ ಕ್ಯಾನ್ಸರ್‌ಗೆ ಕಾರಣವಾಗಬಹುದು. ಲೈಂಗಿಕ ಸಂಪರ್ಕದಿಂದ ಹರಡುವ ಈ ಕ್ಯಾನ್ಸರ್​ನ್ನು ತಡೆಗಟ್ಟಬಹುದಾದರೂ ಅರಿವಿನ ಕೊರತೆಯಿಂದಾಗಿ ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ಸಾವಿರಾರು ಮಹಿಳೆಯರು ಇದರಿಂದ ತೊಂದರೆಗೊಳಗಾಗುತ್ತಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಪ್ರತಿ ವರ್ಷ ಸುಮಾರು 12,000 ಮಹಿಳೆಯರಲ್ಲಿ ಸರ್ವಿಕಲ್‌ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಚಿಕಿತ್ಸೆಯ ಬಳಿಕವೂ ಸುಮಾರು 4,000 ಮಹಿಳೆಯರು ಮರಣ ಹೊಂದುತ್ತಿದ್ದಾರೆ.

ಡಬ್ಲ್ಯುಎಚ್‌ಒ ಬಡತನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಸರ್ವಿಕಲ್‌ ಕ್ಯಾನ್ಸರನ್ನು ಆದ್ಯತೆಯ ಒಬ್ಬರಿಂದ ಒಬ್ಬರಿಗೆ ಹರಡದ ಕಾಯಿಲೆಯಾಗಿ ಪರಿಗಣಿಸಬೇಕು. ಪರಿಣಾಮಕಾರಿ ತಪಾಸಣಾ ವಿಧಾನಗಳು ಮತ್ತು ಚುಚ್ಚುಮದ್ದುಗಳು ಇದಕ್ಕೆ ಲಭ್ಯವಿದೆ. ಅನೇಕ ರಾಷ್ಟ್ರಗಳಲ್ಲಿ ಚುಚ್ಚುಮದ್ದು ಬಳಕೆಯಿಂದಾಗಿ ಸರ್ವಿಕಲ್‌ ಕ್ಯಾನ್ಸರ್‌ ಮರಣಗಳು ಇಳಿಮುಖವಾಗಿವೆ. ಈ ಕ್ಯಾನ್ಸರ್‌ನ ನಿರ್ಮೂಲನೆಗಾಗಿ 2030ರ ಹೊತ್ತಿಗೆ ಎಲ್ಲರಿಗೂ ಚುಚ್ಚುಮದ್ದು, ತಪಾಸಣೆ ಮತ್ತು ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಡಬ್ಲ್ಯುಎಚ್‌ಒ ನಿರ್ದೇಶನ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net