More

    ಬಾದಾಮಿ ತಿನ್ನುವಾಗ ಈ ತಪ್ಪುಗಳನ್ನು ಮಾಡಲೇಬೇಡಿ… ಮಾಡಿದ್ರೆ ಅಪಾಯ ಗ್ಯಾರಂಟಿ!

    ಆರೋಗ್ಯ ಕಣಜ ಬಾದಾಮಿಯ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಬಾದಾಮಿಯನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳು ನಮ್ಮ ದೇಹಕ್ಕೆ ಸಿಗುತ್ತವೆ. ಹಾಗಂತ ಬಾದಾಮಿಯನ್ನು ಯದ್ವಾತದ್ವಾ ತಿನ್ನುವಂತಿಲ್ಲ. ಇದನ್ನು ಸೇವಿಸುವಾಗ ನಾವು ಮಾಡುವ ಕೆಲವೊಂದು ಮಿಸ್ಟೇಕ್ಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡಿಬಿಡುತ್ತವೆ. ಹೀಗಾಗಿ ಬಾದಾಮಿಯನ್ನು ನಿಯಮಿತವಾಗಿ ಸೇವಿಸಬೇಕು. ಹಾಗಾದರೆ ಒಂದು ದಿನಕ್ಕೆ ಎಷ್ಟು ಬಾದಾಮಿ ಸೇವನೆ ಮಾಡಬೇಕು? ಬಾದಾಮಿ ತಿನ್ನುವಾಗ ಯಾವ ಕ್ರಮ ಅನುಸರಿಸಬೇಕು? ಮತ್ತು ಬಾದಾಮಿಯ ಅತಿಯಾದ ಸೇವನೆಯಿಂದ ದೇಹಕ್ಕಾಗುವ ತೊಂದರೆಗಳೇನು? ಮುಂತಾದ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ಕಂಡುಕೊಳ್ಳೋಣ.

    ಬಾದಾಮಿ ಬೀಜಗಳು ನಮ್ಮ ದೇಹದಲ್ಲಿ ಒಂದು ದೊಡ್ಡ ಚಮತ್ಕಾರವನ್ನೇ ಮಾಡಿಬಿಡುತ್ತದೆ. ಇದರಲ್ಲಿ ವಿಟಮಿನ್ ಇ ಮತ್ತು ಫೈಬರ್ ಅಂಶವು ಯಥೇಚ್ಚವಾಗಿದೆ. ಹೀಗಾಗಿ ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಯಾವುದೇ ರೋಗಕ್ಕೂ ಕೂಡ ನಾವು ಗುಡ್ ಬೈ ಹೇಳಬಹುದು. ಆದರೆ, ಬಾದಾಮಿ ಸೇವನೆಯಲ್ಲಿ ಸ್ಮಾಲ್ ಮಿಸ್ಟೇಕ್ ಆದ್ರೂ ಕೂಡ ಆರೋಗ್ಯದ ಬದಲು ಅನಾರೋಗ್ಯ ನಮ್ಮನ್ನು ಆವರಿಸಿಬಿಡುತ್ತದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಯಾವುದೇ ಆಹಾರವನ್ನು ಅತಿಯಾಗಿ ತಿನ್ನಬಾರದು. ಅದೇ ರೀತಿ ಬಾದಾಮಿಯನ್ನೂ ಹೆಚ್ಚಾಗಿ ಸೇವನೆ ಮಾಡುವಂತಿಲ್ಲ. ಏಕೆಂದರೆ, ಹೆಚ್ಚು ಪೌಷ್ಟಿಕಾಂಶ ಇರುವ ಆಹಾರಗಳನ್ನು ಅತಿಯಾಗಿ ತಿನ್ನುವುದು ಜೀರ್ಣಕಾರಿ ಅಸ್ವಸ್ಥತೆಗೆ ಮತ್ತು ಪೌಷ್ಟಿಕಾಂಶದ ಅಸಮತೋಲನಕ್ಕೆ ಕಾರಣವಾಗಬಹುದು. ಹಾಗಾದರೆ ಬಾದಾಮಿಯನ್ನು ಅತಿಯಾಗಿ ಸೇವನೆ ಮಾಡಿದ್ರೆ ಏನೆಲ್ಲಾ ಸೈಡ್ ಎಫೆಕ್ಟ್ ಅನುಭವಿಸಬೇಕಾಗುತ್ತದೆ ಎಂಬುದನ್ನು ನಾವೀಗ ತಿಳಿಯೋಣ.

    ವಿಟಮಿನ್ ಇ ಹೆಚ್ಚಾದ್ರೆ ಸಮಸ್ಯೆ
    ಬಾದಾಮಿಯಲ್ಲಿ ವಿಟಮಿನ್‌ ಇ ಸಮೃದ್ಧವಾಗಿದೆ. ಇದು ಕೊಬ್ಬನ್ನೇ ಕರಗಿಸಬಲ್ಲ ವಿಟಮಿನ್ ಆಗಿದೆ. ಇದು ನಿಮ್ಮ ಚರ್ಮ, ಕಣ್ಣುಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯವಾಗಿದೆ. ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಒಂದು ವೇಳೆ ನೀವು ಮಿತಿಮೀರಿ ಸೇವನೆ ಮಾಡಿದರೆ ಅದು ವಿಷವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಹೊಟ್ಟೆ ಸೆಳೆತ, ಅತಿಸಾರ ಮತ್ತು ಇತರೆ ಜೀರ್ಣಕಾರಿ ಸಮಸ್ಯೆಗಳಂತಹ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ವಿಟಮಿನ್ ಇ ರಕ್ತ ಹೆಪ್ಪುಗಟ್ಟುವಿಕೆಗೆ ತಡೆಯಾಗುವುದರಿಂದ ಇದು ರಕ್ತಸ್ರಾವದ ಅಪಾಯವನ್ನು ಕೂಡ ಹೆಚ್ಚಿಸಬಹುದು. ಅದಲ್ಲದೆ, ಸೋಂಕುಗಳನ್ನು ಸಹ ಉಲ್ಬಣಗೊಳಿಸುವ ಸಾಧ್ಯತೆ ಹೆಚ್ಚಿದೆ.

    ತೂಕ ಹೆಚ್ಚಾಗುತ್ತದೆ
    ಅಂದಹಾಗೆ ತೂಕ ಕಳೆದುಕೊಳ್ಳಲು ಜನರು ಬಾದಾಮಿ ಜೀಜಗಳನ್ನು ತಮ್ಮ ಆಹಾರಗಳಲ್ಲಿ ಸೇರಿಸುತ್ತಾರೆ. ಹಾಗೆಯೇ, ನೀವು ಹೆಚ್ಚೆಚ್ಚು ಬಾದಾಮಿಯನ್ನು ಸೇವನೆ ಮಾಡುವುದರಿಂದ ನಿಮ್ಮ ತೂಕ ಕಡಿಮೆಯಾಗುವ ಬದಲು ಗಣನೀಯವಾಗಿ ಹೆಚ್ಚಾಗುತ್ತದೆ. ಏಕೆಂದರೆ, ಬಾದಾಮಿಗಳು ಸಾಕಷ್ಟು ಕ್ಯಾಲೊರಿಗಳನ್ನು ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ನಿಮ್ಮ ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಿನಂತೆ ಸಂಗ್ರಹಿಸುತ್ತದೆ. ಇದರಿಂದ ಸಹಜವಾಗಿಯೇ ನಿಮ್ಮ ತೂಕ ಹೆಚ್ಚಾಗುತ್ತದೆ.

    ಕಿಡ್ನಿ ಕಲ್ಲುಗಳ ರಚನೆ
    ಇದು ನಿಜಕ್ಕೂ ಹೆದರುವ ಸಂಗತಿ. ಹೌದು, ಬಾದಾಮಿಗಳು ಕಿಡ್ನಿ ಕಲ್ಲುಗಳಿಗೆ ಕಾರಣವಾಗಬಹುದು. ಇದು ಆಕ್ಸಲೇಟ್‌ಗಳನ್ನು ಹೊಂದಿದೆ. ನೀವು ಹೆಚ್ಚು ಬಾದಾಮಿಯನ್ನು ಸೇವಿಸಿದರೆ, ನೀವು ಈ ಆಕ್ಸಲೇಟ್‌ಗಳನ್ನು ಹೆಚ್ಚು ಪಡೆಯುತ್ತೀರಿ. ಈ ಸಂಯುಕ್ತಗಳು ನಿಮ್ಮ ಮೂತ್ರಪಿಂಡದಲ್ಲಿ ಒಟ್ಟಿಗೆ ಅಂಟಿಕೊಳ್ಳಬಹುದು ಮತ್ತು ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಬಹುದು. ಹಾಗಾಗಿ ಬಾದಾಮಿಯನ್ನು ಮಿತವಾಗಿ ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

    ಪೋಷಕಾಂಶಗಳನ್ನು ತಡೆಯುತ್ತದೆ
    ಹೆಚ್ಚಿನ ಬಾದಾಮಿ ಬೀಜಗಳ ಸೇವನೆಯು ದೇಹದಲ್ಲಿರುವ ಇತರೆ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಏಕೆಂದರೆ ಇದರಲ್ಲಿ ಫೈಟಿಕ್ ಆಸಿಡ್ ಎಂಬ ಸಂಯುಕ್ತವಿದೆ. ಇದು ಎಲ್ಲಾ ಸಸ್ಯ ಆಧಾರಿತ ಆಹಾರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುಗಳಂತಹ ಅಗತ್ಯ ಖನಿಜಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಫೈಟಿಕ್ ಆಮ್ಲವು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಈ ಖನಿಜಗಳನ್ನು ಬಂಧಿಸುತ್ತದೆ. ಇದರಿಂದ ನಿಮ್ಮ ದೇಹವು ಅವುಗಳನ್ನು ಹೀರಿಕೊಳ್ಳಲು ಮತ್ತು ಶಕ್ತಿಗಾಗಿ ಬಳಸಿಕೊಳ್ಳಲು ಕಷ್ಟವಾಗುತ್ತದೆ.

    ಅಲರ್ಜಿ ಭೀತಿ
    ಒಂದೊಂದು ದೇಹವು ವಿಭಿನ್ನವಾಗಿರುತ್ತದೆ. ಕೆಲವರಿಗೆ ಕೆಲವೊಂದು ಆಹಾರಗಳು ಆಗಿ ಬರುವುದಿಲ್ಲ. ಅದನ್ನು ಮೀರಿ ಏನಾಗುತ್ತೆ ಅಂತಾ ಸೇವಿಸಿದ್ರೆ ಆರೋಗ್ಯದಲ್ಲಿ ಕಿರಿಕಿರಿ ಉಂಟಾಗುತ್ತದೆ. ಇದನ್ನೆ ನಾವು ಅಲರ್ಜಿ ಎನ್ನುತ್ತೇವೆ. ಅತಿಯಾದ ಬಾದಾಮಿ ಸೇವನೆ ಕೂಡ ಅಲರ್ಜಿಯನ್ನು ಉಂಟು ಮಾಡುತ್ತದೆ. ಮುಖದ ಊತ, ಉಸಿರಾಟದ ತೊಂದರೆಗಳು ಉಂಟಾಗಬಹುದು. ಅಲ್ಲದೆ, ಅನಾಫಿಲ್ಯಾಕ್ಸಿಸ್ ರೋಗಕ್ಕೆ ಕಾರಣವಾಗಬಹುದು, ಇದು ಜೀವಕ್ಕೆ ಅಪಾಯಕಾರಿ.

    ಉಳಿದಂತೆ ಚಿಕ್ಕ ಮಕ್ಕಳು ಮತ್ತು ಕೆಲವು ವೃದ್ಧರು, ನುಂಗಲು ಕಷ್ಟಪಡುವವರು ಇದರ ಸೇವನೆಯನ್ನು ತಪ್ಪಿಸಬೇಕು ಏಕೆಂದರೆ ಇದು ಉಸಿರುಗಟ್ಟಿಸುವ ಅಪಾಯವನ್ನು ಹೊಂದಿದೆ. ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಮತ್ತು ಕಡಿಮೆ ಚಲನಶೀಲತೆಯಿಂದ ಬಳಲುತ್ತಿರುವ ಜನರಿಗೂ ಬಾದಾಮಿ ಹೆಚ್ಚು ಅಪಾಯಕಾರಿ. ಬಾದಾಮಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಇ ಇರುತ್ತದೆ. 28 ಗ್ರಾಂ ಬಾದಾಮಿಯಲ್ಲಿ 7.4 ಮಿಲಿಗ್ರಾಂ ವಿಟಮಿನ್ ಇ ಇರುತ್ತದೆ . ಹಾಗಾಗಿ ವಿಟಮಿನ್ ಇ ಮಾತ್ರೆಗಳನ್ನು ತೆಗೆದುಕೊಳ್ಳುವವರು ಅಧಿಕ ಬಾದಾಮಿಯನ್ನು ಸೇವಿಸುವುದರಿಂದ ಆಲಸ್ಯ, ದೃಷ್ಟಿ ಮಂದವಾಗುವುದು, ತಲೆನೋವು, ಅತಿಸಾರ ಮತ್ತು ವಾಯು ಸಮಸ್ಯೆಗೆ ಕಾರಣವಾಗಬಹುದು. ನಿಮಗೆ ಮಲಬದ್ದತೆ ಸಮಸ್ಯೆ ಇದ್ದು, ನೀವು ಬಹಳಷ್ಟು ಬಾದಾಮಿಯನ್ನು ಸೇವಿಸುತ್ತಿದ್ದರೆ, ಇದು ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಏಕೆಂದರೆ ಬಾದಾಮಿಯಲ್ಲಿ ಬಹಳಷ್ಟು ಫೈಬರ್ ಇದ್ದು, ಹೆಚ್ಚಿನ ಸೇವನೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

    ಬಾದಾಮಿಯನ್ನು ಎಷ್ಟು ತಿನ್ನಬೇಕು?
    ಬಾದಾಮಿಯಿಂದ ಗರಿಷ್ಠ ಆರೋಗ್ಯ ಪ್ರಯೋಜನಗಳನ್ನು ಪಡೆಯಲು, ಬೀಜಗಳನ್ನು ರಾತ್ರಿಯಿಡೀ ನೆನೆಸಿ, ಮರುದಿನ ಸಿಪ್ಪೆಯನ್ನು ತೆಗೆದುಹಾಕಿ ಬೆಳಗಿನ ಸಮಯದಲ್ಲಿ ಸೇವಿಸಬೇಕು. ಬೇಕಾದರೆ ನೀವು ಬಾದಾಮಿಯನ್ನು ತುಪ್ಪದೊಂದಿಗೆ ಹುರಿದು ತಿಂಡಿಗಳಾಗಿ ಸಹ ಸೇವಿಸಬಹುದು. ದಿನಕ್ಕೆ 6 ರಿಂದ 8 ಬಾದಾಮಿಗಳನ್ನು ಮಾತ್ರ ತಿನ್ನಬಹುದು. ಅದಕ್ಕಿಂತ ಹೆಚ್ಚಿಗೆ ಸೇವಿಸಬೇಡಿ. ಒಂದು ವೇಳೆ ನೀವು ಮಿತಿಮೀರಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಕಾರಕ.

    ಯಾಕೆ ಬಾದಾಮಿ ಸಿಪ್ಪೆ ತೆಗೆಯಬೇಕು?
    ಬಾದಾಮಿಯ ಬಹುತೇಕ ಎಲ್ಲಾ ಪೋಷಕಾಂಶಗಳು ಒಳಗಿನ ತಿರುಳಿನಲ್ಲಿದೆ ಹಾಗೂ ಸಿಪ್ಪೆಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿವೆ. ಮತ್ತು ಸಿಪ್ಪೆಯಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ, ಸಿಪ್ಪೆ ಸಹಿತ ತಿನ್ನುವುದು ಉತ್ತಮವೇ ಆದರೂ ಅದು ಕಡ್ಡಾಯವಲ್ಲ. ಸಿಪ್ಪೆ ನಿವಾರಿಸಿ ತಿನ್ನುವುದರಿಂದ ಹೆಚ್ಚಿನ ನಷ್ಟವೇನೂ ಇಲ್ಲದ ಕಾರಣ ಹಾಗೂ ಸಿಪ್ಪೆಯ ಮೂಲಕ ಸಿಗಬಹುದಾದ ಕರಗದ ನಾರಿನ ಅಂಶ ಬೇರೆ ಆಹಾರದ ಮೂಲಕವೂ ಸಿಗುವ ಸಾಧ್ಯತೆ ಇರುವ ಕಾರಣ ಸಿಪ್ಪೆಯನ್ನು ತೆಗೆದು ತಿನ್ನಿ ಎಂದು ಹೇಳುತ್ತಾರೆ.

    ಬಾದಾಮಿ ಸೈಡ್ ಎಫೆಕ್ಟ್ ಬಗ್ಗೆ ತಿಳಿದುಕೊಂಡ್ರಿ ಇದೀಗ ಬಾದಾಮಿಯ ಹೆಲ್ತ್ ಬೆನಿಫಿಟ್ಸ್ ಬಗ್ಗೆ ತಿಳಿಯೋಣ. ಬಾದಾಮಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ಅಗತ್ಯ ಪೋಷಕಾಂಶಗಳು ಭಂಡಾರವೆಂದು ಕರೆಯುತ್ತಾರೆ. ಏಕೆಂದರೆ ಬಾದಾಮಿಯಲ್ಲಿ ಫೈಬರ್, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಯಂತಹ ಅನೇಕ ಪೊಷಕಾಂಶಗಳಿವೆ. ಇದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವುದರ ಜತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಕೂದಲು ಮತ್ತು ತ್ವಚೆಗೆ ವರದಾನವಾಗಿದೆ. ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟಗಳನ್ನು ಉತ್ತಮಗೊಳಿಸುತ್ತದೆ. ಹೀಗೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಬಾದಾಮಿ ಹೊಂದಿದ್ದು, ನಿಯಮಿತವಾಗಿ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು.

    ಈ ನಟಿ ಅಂಡರ್‌ವರ್ಲ್ಡ್​ ಡಾನ್‌ ಗೆಳತಿ, ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದವರು ಈಗ ಎಲ್ಲಿ, ಹೇಗಿದ್ದಾರೆ?

    ಯುವತಿಯರು ನಿಮ್ಮಿಂದ ಕೇಳ ಬಯಸುವ ಮಾತುಗಳಿವು! ಈ ರೀತಿ ಮಾತಾಡಿದ್ರಂತೂ ಹತ್ರಾನೂ ಸುಳಿಯಲ್ಲ

    ಮದ್ವೆ ಎಂಬುದು ಕಷ್ಟ ಡಿವೋರ್ಸ್ ಅಂದ್ರೆ​… ಸಾನಿಯಾ ಮಿರ್ಜಾ ನೋವಿನ ಮಾತು, ಮಲಿಕ್ ಮೇಲೆ ಮುನಿಸು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts