More

    ಯುವತಿಯರು ನಿಮ್ಮಿಂದ ಕೇಳ ಬಯಸುವ ಮಾತುಗಳಿವು! ಈ ರೀತಿ ಮಾತಾಡಿದ್ರಂತೂ ಹತ್ರಾನೂ ಸುಳಿಯಲ್ಲ

    ಪ್ರಾಚೀನ ಕಾಲದಿಂದಲೂ ಮಹಿಳೆಯರ ಬಗ್ಗೆ ಆಡುವ ಕೆಲವೊಂದಿಷ್ಟು ಸಾಮಾನ್ಯ ಮಾತುಗಳನ್ನು ನಾವೆಲ್ಲ ಕೇಳಿದ್ದೇವೆ. ಮಹಿಳೆಯೆಂದರೆ ಸಾಧಾರಣವಾಗಿರಬೇಕು, ವಿನಮ್ರತೆ, ತಾಳ್ಮೆ ಮತ್ತು ಸಹಾನುಭೂತಿ ಹೊಂದಿರಬೇಕು. ಅಡುಗೆ ಮತ್ತು ಮನೆಗೆಲಸ ಚೆನ್ನಾಗಿ ಗೊತ್ತಿರಬೇಕು. ತಂದೆ ಮತ್ತು ಪತಿಗೆ ವಿಧೇಯರಾಗಿರಬೇಕು. ಒಬ್ಬಂಟಿಯಾಗಿ ಹೊರಗೆ ಹೋಗದಿರುವುದು, ಮೈಮಾಟ ಕಾಣಿಸುವಂತೆ ಬಟ್ಟೆಗಳನ್ನು ಧರಿಸದಿರುವುದು, ಜೋರಾಗಿ ಮಾತನಾಡದಿರುವುದು ಹೀಗೆ ಪಟ್ಟಿ ಮುಂದುವರಿಯುತ್ತದೆ.

    ಆದರೆ ಮಹಿಳೆಯರು ನಿಜವಾಗಿಯೂ ಅಂತಹ ವಿಷಯಗಳನ್ನು ಕೇಳಲು ಬಯಸುತ್ತಾರೆಯೇ? ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಖಂಡಿತವಾಗಿಯೂ ಈ ವಿಷಯಗಳನ್ನು ಕೇಳಲು ಬಯಸುವುದಿಲ್ಲ.

    ಮಹಿಳೆಯರನ್ನು ಅವರ ಸೌಂದರ್ಯ ಮತ್ತು ಅಡುಗೆ ಕೌಶಲ್ಯ ವಿಚಾರವಾಗಿ ಸದಾ ಹೊಗಳುತ್ತಾರೆ. ಆದಾಗ್ಯೂ, ಕೆಲವೇ ಮಹಿಳೆಯರು ಅಂತಹ ಹೊಗಳಿಕೆಯನ್ನು ಕೇಳಲು ಬಯಸುತ್ತಾರೆ. ಆದರೆ, ಇಂದು ಹೆಚ್ಚು ಹೆಚ್ಚು ಮಹಿಳೆಯರು ತಮ್ಮ ಸಾಮರ್ಥ್ಯಗಳು ಮತ್ತು ಅವರ ಮೌಲ್ಯಗಳನ್ನು ಗುರುತಿಸಬೇಕೆಂದು ಬಯಸುತ್ತಾರೆ. ಇಂದು ಅನೇಕ ಮಹಿಳೆಯರು ತಮ್ಮ ಕಾರ್ಯಗಳು ಗುರುತಿಸಬೇಕು ಮತ್ತು ಶ್ಲಾಘಿಸಬೇಕು ಎಂದು ಬಯಸುತ್ತಾರೆ. ಸದೃಢ ಮನಸ್ಸಿನ ಮಹಿಳೆಯರು ಕೇಳಲು ಬಯಸುವ ಮಾತುಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

    * ನೀನು ತುಂಬಾ ಪ್ರಾಮಾಣಿಕ ಮತ್ತು ಪಾರದರ್ಶಕ. ನಾನು ನಿನ್ನನ್ನು ನಂಬಬಹುದೆಂದು ನನಗೆ ಖಾತ್ರಿಯಿದೆ.
    * ನಿನ್ನಲ್ಲಿ ಅನೇಕ ಪ್ರತಿಭೆಗಳಿವೆ.
    * ನೀನು ಬಹಳ ಬುದ್ಧಿವಂತೆ ಮತ್ತು ಬಹಳ ಒಳನೋಟವುಳ್ಳವಳು.
    * ನೀನು ತುಂಬಾ ಕಾಳಜಿಯುಳ್ಳವಳಾದ್ದೀಯ ಮತ್ತು ಇತರರನ್ನು ಹೆಚ್ಚು ಪರಿಗಣಿಸುತ್ತೀಯ.
    * ನೀವು ತುಂಬಾ ಧೈರ್ಯಶಾಲಿ ಮತ್ತು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧಳಿದ್ದೀಯ.
    * ನೀನು ತುಂಬಾ ಸ್ಪೂರ್ತಿದಾಯಕ.
    * ನೀನು ಎಲ್ಲರನ್ನೂ ನಗಿಸುತ್ತೀಯ.
    * ನೀನು ತುಂಬಾ ವಿಶ್ವಾಸಾರ್ಹಳು ಮತ್ತು ಯಾವಾಗಲೂ ಲಭ್ಯವಿರುತ್ತೀಯ. ನೀನು ನನ್ನ ಪರವಾಗಿ ನಿಲ್ಲುತ್ತೀಯ.
    * ನೀನು ಕಠಿಣ ಪರಿಶ್ರಮಿ.
    * ನಿನ್ನ ಸ್ನೇಹ ನನಗೆ ಬಹಳ ಅಮೂಲ್ಯವಾದುದು.

    ನೆನಪಿಡಿ, ಹೆಚ್ಚಿನ ಮಹಿಳೆಯರು ಕೇಳಲು ಬಯಸುವ ವಿಷಯಗಳು ಇವು. ಪದೇ ಪದೇ ಟೀಕೆಗಳು, ಆರೋಪಗಳು ಮತ್ತು ಅಪಹಾಸ್ಯಗಳನ್ನು ಕೇಳಲು ಯಾರೂ ಬಯಸುವುದಿಲ್ಲ. (ಏಜೆನ್ಸೀಸ್​)

    ಭಾರತದ ಈ ಗ್ರಾಮದಲ್ಲಿ ಬಾಡಿಗೆಗೆ ಸಿಗ್ತಾರೆ ಪತ್ನಿಯರು! 1 ವರ್ಷಕ್ಕೆ ಒಪ್ಪಂದ, ಇಷ್ಟ ಆಗ್ಲಿಲ್ಲ ಅಂದ್ರೆ ಸಂಬಂಧ ಕಟ್

    ಅಕ್ಕ- ತಂಗಿ ಇಬ್ಬರು ಪ್ರೆಗ್ನೆಂಟ್​; ನಟಿ ಮನೆಯಲ್ಲಿ ಡಬಲ್ ಸಂಭ್ರಮ​

    ಪಂದ್ಯಕ್ಕೆ ತಿರುವು ಕೊಟ್ಟ ಸೂಪರ್​ಮ್ಯಾನ್​ ಕೊಹ್ಲಿ ಫೀಲ್ಡಿಂಗ್​: ವಿರಾಟ್​ ಜಿಗಿತ ಬೂಮ್ರಾ ಬೌಲಿಂಗ್​ ಮ್ಯಾಚಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts