More

    ಪಂದ್ಯಕ್ಕೆ ತಿರುವು ಕೊಟ್ಟ ಸೂಪರ್​ಮ್ಯಾನ್​ ಕೊಹ್ಲಿ ಫೀಲ್ಡಿಂಗ್​: ವಿರಾಟ್​ ಜಿಗಿತ ಬೂಮ್ರಾ ಬೌಲಿಂಗ್​ ಮ್ಯಾಚಿಂಗ್​!

    ಬೆಂಗಳೂರು: ನಾಯಕನಾಟ ಆಡಿದ ರೋಹಿತ್ ಶರ್ಮ (121 ರನ್, 69 ಎಸೆತ, 11 ಬೌಂಡರಿ, 8 ಸಿಕ್ಸರ್) ಸಿಡಿಸಿದ ದಾಖಲೆಯ 5ನೇ ಟಿ20 ಶತಕ ಹಾಗೂ ರಿಂಕು ಸಿಂಗ್ (69 ರನ್, 39 ಎಸೆತ, 2 ಬೌಂಡರಿ, 6 ಸಿಕ್ಸರ್) ನೀಡಿದ ಸಮರ್ಥ ಬೆಂಬಲದ ಬಲದಿಂದ ಭಾರತ ತಂಡ ಆರಂಭಿಕ ಆಘಾತದಿಂದ ಪುಟಿದೆದ್ದಿದ್ದು ಮಾತ್ರವಲ್ಲದೆ, ಅವಳಿ ಸೂಪರ್ ಓವರ್‌ನಲ್ಲೂ ವೀರೋಚಿತ ನಿರ್ವಹಣೆ ತೋರುವ ಮೂಲಕ ಅಫ್ಘಾನಿಸ್ತಾನದ ವಿರುದ್ಧ 3-0 ಅಂತರಲ್ಲಿ ಸರಣಿ ಕ್ಲೀನ್‌ ಸ್ವೀಪ್ ಸಂಭ್ರಮ ಕಂಡಿದೆ.

    ಸೂಪರ್​ ಮ್ಯಾನ್​ ಕೊಹ್ಲಿ ಬೌಂಡರಿ ಗೆರೆಯ ಬಳಿ ಆ ಒಂದು ಸಿಕ್ಸರ್​ ತಡೆಯದೇ ಹೋಗಿದ್ದರೆ ಬಹುಶಃ ಸೂಪರ್​ ಓವರ್​ ಆಡುವ ಸಂಭವವೇ ಇರುತ್ತಿರಲಿಲ್ಲ. ಏಕೆಂದರೆ, ಆಫ್ಘಾನ್​ ಗೆಲ್ಲುವ ಸಾಧ್ಯತೆ ಇತ್ತು. 17ನೇ ಓವರ್​ನ 5 ಎಸೆತ ವೇಳೆ ಆಫ್ಘಾನ್​ಗೆ 20 ಎಸೆತದಲ್ಲಿ 48 ರನ್​ ಬೇಕಿತ್ತು. ಈ ವೇಳೆ ವಾಷಿಂಗ್ಟನ್​ ಸುಂದರ್​ ಎಸೆತದಲ್ಲಿ ಬ್ಯಾಟರ್​ ಕರೀಮ್​ ಜನತ್​ ಬಲವಾಗಿ ಹೊಡೆದರು. ಗಾಳಿಯಲ್ಲಿ ಹಾರಿದ ಚೆಂಡು ಬೌಂಡರಿ ಗೆರೆಯಿಂದ ಆಚೆಗೆ ಹಾರುತ್ತಿತ್ತು. ಆದರೆ, ಬೌಂಡರಿ ಗೆರೆ ಬಳಿ ನಿಂತಿದ್ದ ಕೊಹ್ಲಿ ತಾಳ್ಮೆಯಿಂದ ಬಾಲ್​ ಅನ್ನೇ ಗಮನಿಸಿ, ಚೆಂಡು ಬರುವ ಸಮಯಕ್ಕೆ ಸರಿಯಾಗಿ ಮೇಲಕ್ಕೆ ಜಿಗಿದು ಸಿಕ್ಸರ್​ ಆಗಬೇಕಿದ್ದ ಚೆಂಡನ್ನು ತಡೆದರು. ಈ ಮೂಲಕ ಕೇವಲ 1 ರನ್​ ಕೊಟ್ಟು ಐದು ರನ್​ ಉಳಿಸಿದರು. ಒಂದು ವೇಳೆ ಸಿಕ್ಸರ್​ ಆಗಿದ್ದರೆ, ಆಫ್ಘಾನ್ ಸುಲಭವಾಗಿ​ ಗೆಲ್ಲುವ ಸಾಧ್ಯತೆ ಇತ್ತು.

    ಕೊಹ್ಲಿ ಮಾಡಿದ ಅದ್ಭುತ ಫೀಲ್ಡಿಂಗ್ ನೋಡಿ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೊಹ್ಲಿ ಮೇಲಕ್ಕೆ ಜಿಗಿದು ಚೆಂಡನ್ನು ಹಿಡಿದು ಎಸೆಯುತ್ತಿರುವ ಪರಿ ಹಾಗೂ ಜಸ್​ಪ್ರೀತ್​ ಬೂಮ್ರಾ ಬೌಲಿಂಗ್​ ಶೈಲಿಯನ್ನು ಹೋಲುತ್ತಿದ್ದು, ಇಬ್ಬರ ಫೋಟೋಗಳನ್ನು ಒಂದೇ ಚೌಕಟ್ಟಿನಲ್ಲಿ ಹಾಕಿ ಐಸಿಸಿ ಜಾಲತಾಣದಲ್ಲಿ ಹಂಚಿಕೊಂಡಿದೆ. ಒಂದು ಫರ್ಪೆಕ್ಟ್​ ಫೋಟೋ ಎಂದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಹ ಖುಷಿಯಾಗಿದ್ದಾರೆ.

    ಪಂದ್ಯದ ವಿಚಾರಕ್ಕೆ ಬಂದರೆ, ನಾಯಕನಾಟ ಆಡಿದ ರೋಹಿತ್ ಶರ್ಮ (121 ರನ್, 69 ಎಸೆತ, 11 ಬೌಂಡರಿ, 8 ಸಿಕ್ಸರ್) ಸಿಡಿಸಿದ ದಾಖಲೆಯ 5ನೇ ಟಿ20 ಶತಕ ಹಾಗೂ ರಿಂಕು ಸಿಂಗ್ (69 ರನ್, 39 ಎಸೆತ, 2 ಬೌಂಡರಿ, 6 ಸಿಕ್ಸರ್) ನೀಡಿದ ಸಮರ್ಥ ಬೆಂಬಲದ ಬಲದಿಂದ ಭಾರತ ತಂಡ ಆರಂಭಿಕ ಆಘಾತದಿಂದ ಪುಟಿದೆದ್ದಿದ್ದು ಮಾತ್ರವಲ್ಲದೆ, ಅವಳಿ ಸೂಪರ್ ಓವರ್‌ನಲ್ಲೂ ವೀರೋಚಿತ ನಿರ್ವಹಣೆ ತೋರುವ ಮೂಲಕ ಉದ್ಯಾನನಗರಿಯಲ್ಲಿ 3-0ಯಿಂದ ಸರಣಿ ಕ್ಲೀನ್‌ ಸ್ವೀಪ್ ಸಂಭ್ರಮ ಕಂಡಿದೆ. ಮುರಿಯದ 5ನೇ ವಿಕೆಟ್‌ಗೆ 95 ಎಸೆತಗಳಲ್ಲಿ 190 ರನ್ ಸೇರಿಸುವ ಮೂಲಕ 22 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ದುಸ್ಥಿತಿಯಿಂದ ಟೀಮ್ ಇಂಡಿಯಾವನ್ನು ಮೇಲೆತ್ತಿದ ರೋಹಿತ್ ರಿಂಕು ಜೋಡಿ ಪ್ರವಾಸಿ ಆಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಒದಗಿಸಿತು. ಆಫ್ರನ್ ದಿಟ್ಟ ಪ್ರತಿಹೋರಾಟದಿಂದ ಕೈಗೊಂಡ ಪಂದ್ಯ, ಮೊದಲ ಸೂಪರ್ ಓವರ್‌ನಲ್ಲೂ ಮತ್ತೆ ಟೈಗೊಂಡಿತು. ಕೊನೆಗೂ 2ನೇ ಸೂಪರ್ ಓವರ್‌ನಲ್ಲಿ ಭಾರತ 10 ರನ್‌ಗಳಿಂದ ಗೆದ್ದು ಬೀಗಿತು. ಮತ್ತು ಆಫ್ಘನ್ ವಿರುದ್ಧ ಟಿ20ಯಲ್ಲಿ ಅಜೇಯ ದಾಖಲೆ ಉಳಿಸಿಕೊಂಡಿತು. ಈ ಮೂಲಕ ಟಿ20 ವಿಶ್ವಕಪ್‌ಗೆ ಮುನ್ನ ಆಡಿದ ಕೊನೇ ಚುಟುಕು ಕ್ರಿಕೆಟ್ ಸರಣಿಯಲ್ಲಿ ಭಾರತ ಭರ್ಜರಿ ಸಿದ್ಧತೆಯನ್ನೇ ನಡೆಸಿದಂತಾಗಿದೆ. (ಏಜೆನ್ಸೀಸ್​)

    ಪ್ರಧಾನಿ ಮೋದಿಯವರು ಮೇವು ತಿನ್ನಿಸಿದ ಈ ಹಸುಗಳಿಗೆ ‘ಚಿನ್ನದ ಗಣಿ’ ಎಂದು ಏಕೆ ಕರೆಯುತ್ತಾರೆ?

    ಮದ್ವೆ ಎಂಬುದು ಕಷ್ಟ ಡಿವೋರ್ಸ್ ಅಂದ್ರೆ​… ಸಾನಿಯಾ ಮಿರ್ಜಾ ನೋವಿನ ಮಾತು, ಮಲಿಕ್ ಮೇಲೆ ಮುನಿಸು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts