ಅಕ್ಕ- ತಂಗಿ ಇಬ್ಬರು ಪ್ರೆಗ್ನೆಂಟ್​; ನಟಿ ಮನೆಯಲ್ಲಿ ಡಬಲ್ ಸಂಭ್ರಮ​

1 Min Read
ಅಕ್ಕ- ತಂಗಿ ಇಬ್ಬರು ಪ್ರೆಗ್ನೆಂಟ್​; ನಟಿ ಮನೆಯಲ್ಲಿ ಡಬಲ್ ಸಂಭ್ರಮ​

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ‘ರಾಧಾ ರಮಣ’ ಸೀರಿಯಲ್​​ ಮೂಲಕವಾಗಿ ಕಾವ್ಯಾ ಗೌಡ ಮನೆಮಾತಾಗಿದ್ದರು. ಕಾವ್ಯಾ ಗೌಡ ಅವರ ಅಕ್ಕ ಭವ್ಯಾ ಗೌಡ. ಇಬ್ಬರು ಸಹೋದರಿಯಾಗಿದ್ದರೂ ಕೂಡ ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದಾರೆ. ಸಹೋದರಿಯರಿಬ್ಬರು ಒಟ್ಟಿಗೆ ತಾಯಿ ಆಗುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

ನಟಿ ಕಾವ್ಯಾ ಗೌಡ ಅವರು ತಾಯಿಯಾಗುತ್ತಿರುವ ವಿಷಯವನ್ನು ಈಗಾಗಲೇ ಹಂಚಿಕೊಂಡಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಸೋಮಶೇಖರ್, ಕಾವ್ಯಾ ಗೌಡ ಅವರು ಬಂಗಾರದ ಬಣ್ಣದ ಉಡುಗೆ ಧರಿಸಿದ್ದರು.

ಅಕ್ಕ- ತಂಗಿ ಇಬ್ಬರು ಪ್ರೆಗ್ನೆಂಟ್​; ನಟಿ ಮನೆಯಲ್ಲಿ ಡಬಲ್ ಸಂಭ್ರಮ​

ಕಾವ್ಯ ಗೌಡ ಅವರ ಅಕ್ಕ ಭವ್ಯಾ ಗೌಡ ಕೂಡ ಮತ್ತೊಮ್ಮೆ ತಾಯಿ ಆಗುತ್ತಿದ್ದಾರಂತೆ.ಭವ್ಯಾ, ಮಹೇಶ್ ದಂಪತಿಗೆ ಆದ್ಯಾ ಎಂಬ ಮಗಳಿದ್ದಾಳೆ. ತಂಗಿಯ ಸೀಮಂತದ ಫೋಟೋಗಳನ್ನು ಹಂಚಿಕೊಂಡು, ತಾವು ತಾಯಿ ಆಗುತ್ತಿರುವ ವಿಷಯವನ್ನು ಅವರು ಹೇಳಿದ್ದಾರೆ. ಭವ್ಯಾ ಗೌಡ ಅವರು ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

Bhavya

ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಅವರನ್ನು 2021ರಲ್ಲಿ ಮದುವೆಯಾದರು. ಇದು ಅರೇಂಜ್ ಮ್ಯಾರೇಜ್ ಆಗಿತ್ತು. ಮದುವೆ ಬಳಿಕ ಕಾವ್ಯಾ ಅವರು ನಟನೆಯಿಂದ ದೂರ ಇದ್ದಾರೆ. ಈಗ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕಾವ್ಯಾ ಗೌಡ ಅವರು ‘ಗಾಂಧಾರಿ’, ‘ಶುಭ ವಿವಾಹ’, ‘ರಾಧಾ ರಮಣ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು, ಇದರ ಜೊತೆಗೆ ‘ಬಕಾಸುರ’ ಎನ್ನುವ ಸಿನಿಮಾ ಕೂಡ ಮಾಡಿದ್ದರು. ಕಾವ್ಯಾ ಗೌಡ, ಭವ್ಯಾ ಗೌಡ ಅವರು ಸಹೋದರಿಯಾಗಿದ್ದರೂ ಕೂಡ ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದಾರೆ.

ಅವಿನಾಶ್​ ಹಾಗೂ ಮಾಳವಿಕಾ ಮಧ್ಯೆ ಇದೆ ಅಧಿಕೃತವಾದ ಒಂದು ಒಪ್ಪಂದ..

See also  ತಾಯಿ ಇಲ್ಲದ ಮಗುವಿಗೆ ಕಿರಾತಕರಾದ ಬಂಧುಗಳು ... ಹೀಗೂ ಇರ್ತಾರಾ ?!
Share This Article