

ಬರೇಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಣಿಗಳಿಗೆ 'ಪಶು' ಎಂಬ ಪದವನ್ನು ಬಳಸುವುದು "ಅನುಚಿತ" ಎಂದು ಕರೆದಿದ್ದು, ಅವುಗಳನ್ನು 'ಜೀವನದ ಧನ' ಅಥವಾ ಜೀವನದ ಸಂಪತ್ತು ಎಂಬುವುದಾಗಿ ಬಣ್ಣಿಸಿದ್ದಾರೆ.
ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (IVRI) 11 ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಮುರ್ಮು, ಪ್ರಾಣಿಗಳಿಲ್ಲದ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ, ನಿಜವಾಗಿಯೂ ಹೇಳುವುದಾದರೆ ಪ್ರಾಣಿಗಳು ಮತ್ತು ಮನುಷ್ಯರು ಸಂಬಂಧವನ್ನು ಹಂಚಿಕೊಳ್ಳುತ್ತಾರೆ. ಇಂದು ನಮ್ಮಲ್ಲಿ ತಂತ್ರಜ್ಞಾನವಿದೆ, ಆದರೆ ಹಿಂದೆ ಪ್ರಾಣಿಗಳು ನಮ್ಮ ಸಾರಿಗೆಗಾಗಿ ಮತ್ತು ರೈತರಿಗೆ ಬಲ ಆಗಿದ್ದವು ಎಂದು ಹೇಳಿದ್ದಾರೆ.
ಮುರ್ಮು ಇಂದು (30) ಬೆಳಗ್ಗೆ ಉತ್ತರ ಪ್ರದೇಶದ ಬರೇಲಿಗೆ ಆಗಮಿಸಿದರು ಮತ್ತು ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಬರಮಾಡಿಕೊಂಡರು. ಇನ್ನೂ ಬರೇಲಿಯಲ್ಲಿ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೃತ್ಪೂರ್ವಕ ಸ್ವಾಗತ ಮಾಡಲಾಯ್ತು.
(ಏಜೆನ್ಸೀಸ್)
ಮಾನವರು ಮತ್ತು ಪ್ರಾಣಿಗಳ ನಡುವಿನ ಸಹಜೀವನದ ಬಾಂಧವ್ಯವನ್ನು ಎತ್ತಿ ತೋರಿಸುತ್ತಾ, ತ್ವರಿತ ತಾಂತ್ರಿಕ ಪ್ರಗತಿಯ ಹೊರತಾಗಿಯೂ, ಮಾನವ ಜೀವನೋಪಾಯವನ್ನು ಬೆಂಬಲಿಸುವಲ್ಲಿ ಪ್ರಾಣಿಗಳ ಪಾತ್ರ, ವಿಶೇಷವಾಗಿ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗಳಲ್ಲಿ ಪ್ರಮುಖವಾಗಿದೆ ಎಂದು ಮುರ್ಮು ತಿಳಿಸಿದರು. ಅವರ ಹೇಳಿಕೆಗಳನ್ನು ಸಂಶೋಧಕರು, ವಿದ್ವಾಂಸರು ಮತ್ತು ಪಶುವೈದ್ಯಕೀಯ ವಿಜ್ಞಾನದ ವಿದ್ಯಾರ್ಥಿಗಳು ಒಳಗೊಂಡ ಪ್ರೇಕ್ಷಕರು ಚೆನ್ನಾಗಿ ಆಲಿಸಿದರು.
ಹಾಗಾಗಿ, ಪ್ರಾಣಿಗಳಿಗೆ 'ಪಶು' ಎಂಬ ಪದ ಸೂಕ್ತವೆಂದು ನಾನು ಭಾವಿಸುವುದಿಲ್ಲ ಏಕೆಂದರೆ ಅವು 'ಜೀವನದ ಧನ'. ಅವುಗಳಿಲ್ಲದೆ ನಾವು ಜೀವನವನ್ನು ಯೋಚಿಸಲು ಸಾಧ್ಯವಿಲ್ಲ, ಭಾರತೀಯ ಸಂಸ್ಕೃತಿಯಲ್ಲಿ, ದೇವರ ಸಾನಿಧ್ಯವು ಎಲ್ಲಾ ಜೀವಿಗಳಲ್ಲಿಯೂ ಕಂಡುಬರುತ್ತದೆ, ಎಂದು ಮುರ್ಮು ತಿಳಿಸಿದ್ದಾರೆ.