ಇತಿಹಾಸದಲ್ಲೇ ಹೆಚ್ಚು ನವೀಕರಣ ಇಂಧನ ಉತ್ಪಾದನೆ; ದಾಖಲೆ ಬರೆದ ಅದಾನಿ ಗ್ರೀನ್ ಎನರ್ಜಿ| Adani Green

Adani Green
Published on

ಗ್ರೀನ್‌ಫೀಲ್ಡ್ ಯೋಜನೆಗಳ ಮೂಲಕ ಈ ಹೆಗ್ಗುರುತು ಸಾಧನೆಯನ್ನು ಸಾಧಿಸಿದ ಭಾರತದ ಮೊದಲ ಮತ್ತು ಏಕೈಕ ನವೀಕರಿಸಬಹುದಾದ ಇಂಧನ ಕಂಪನಿ AGEL ಆಗಿದೆ ಎಂದು ಕಂಪನಿ ಹೇಳಿದೆ.

ಮುಂಬೈ: ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಇಂದು (30) ತನ್ನ ಕಾರ್ಯಾಚರಣೆಯ ಸಾಮರ್ಥ್ಯವು 15.53 GW ತಲುಪಿದೆ ಎಂದು ಹೇಳಿಕೊಂಡಿದೆ.

ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಒಟ್ಟು ನವೀಕರಣ ಉತ್ಪಾದನಾ ಸಾಮರ್ಥ್ಯ 15,539.9 ಮೆಗಾ ವ್ಯಾಟ್​​ಗೆ ಏರಿದೆ.

ಗುಜರಾತ್​​ನ ಖಾವಡಾದಲ್ಲಿ ಅದಾನಿ ಗ್ರೀನ್ ಸಂಸ್ಥೆ ವಿಶ್ವದಲ್ಲೇ ಅತಿದೊಡ್ಡ ರಿನಿವಬಲ್ ಎನರ್ಜಿ ಘಟಕ ಸ್ಥಾಪಿಸುತ್ತಿದೆ. ಈ ಪ್ರಾಜೆಕ್ಟ್ ಪೂರ್ಣಗೊಂಡರೆ ಅಲ್ಲಿ 30,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಈ ಘಟಕ ಬರೋಬ್ಬರಿ 538 ಚದರ ಕಿಮೀಯಷ್ಟು ವಿಸ್ತೀರ್ಣದಲ್ಲಿದೆ. ಇದು ಎಷ್ಟು ಬೃಹತ್ ಎಂದರೆ ಪ್ಯಾರಿಸ್ ನಗರಕ್ಕಿಂತ ಐದು ಪಟ್ಟು ಹೆಚ್ಚು. ಬಾಹ್ಯಾಕಾಶದಿಂದಲೂ ಇದನ್ನು ನೋಡಬಹುದು. ಈ ಯೋಜನೆ ಪೂರ್ಣಗೊಂಡರೆ ವಿಶ್ವದಲ್ಲೇ ಅತಿದೊಡ್ಡ ವಿದ್ಯುತ್ ಉತ್ಪಾದನಾ ಘಟಕವಾಗಲಿದೆ.

ಅದಾನಿ ಗ್ರೂಪ್ ಮುಖ್ಯಸ್ಥರಾದ ಗೌತಮ್ ಅದಾನಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಾನಿ ಗ್ರೀನ್ ಸಂಸ್ಥೆ 15,000 ಮೆಗಾವ್ಯಾಟ್ ರಿನಿವಬಲ್ ಎನರ್ಜಿ ಕೆಪಾಸಿಟಿ ದಾಟಿದೆ. ಅತಿಹೆಚ್ಚು ರಿನಿವಬಲ್ ಎನರ್ಜಿ ಹೊಂದಿರುವ ಮತ್ತು ಅತಿವೇಗವಾಗಿ ಸಾಮರ್ಥ್ಯ ಹೆಚ್ಚಿಸಿದ ದಾಖಲೆ ಸ್ಥಾಪಿಸಿದೆ ಎಂದು ಹೇಳಲು ಬಯಸುತ್ತೇನೆ. ಈ ಭೂಮಿ ಮೇಲೆ ಇರುವ ನಮ್ಮ ಬದ್ಧತೆ ಮತ್ತು ಭಾರತದ ಗ್ರೀನ್ ಎನರ್ಜಿ ಸಾಮರ್ಥ್ಯ ಹೆಚ್ಚಿಸುವ ನಮ್ಮ ಸಂಕಲ್ಪಕ್ಕೆ ಇದು ಕನ್ನಡಿ ಹಿಡಿದಿದೆ ಎಂದು ಗೌತಮ್ ಅದಾನಿ ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

2030 ರ ವೇಳೆಗೆ 15,000 ಮೆಗಾವ್ಯಾಟ್ ನಿಂದ 50,000 ಮೆಗಾವ್ಯಾಟ್ ಗೆ ಇನ್ನಷ್ಟು ವೇಗಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ, ಸುಸ್ಥಿರ ಇಂಧನ ಪರಿಹಾರಗಳೊಂದಿಗೆ ಭಾರತ ಮತ್ತು ಜಗತ್ತಿಗೆ ಶಕ್ತಿ ತುಂಬುವ ನಮ್ಮ ಧ್ಯೇಯ ಹೊಂದಿದ್ದೇವೆ ಎಂದು ಸಿಇಒ ಆಶಿಶ್ ಖನ್ನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net