ಮುಂದಿನ ವಾರದೊಳಗೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ|India-US trade

India America
Published on

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಒಂದು ವಾರದೊಳಗೆ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳು ಹೇಳುವಂತೆ ಎಲ್ಲಾ ಷರತ್ತುಗಳನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹಿರಿಯ ಅಧಿಕಾರಿಗಳ ಪ್ರಕಾರ, ಕೃಷಿ ಮತ್ತು ಆಟೋಮೊಬೈಲ್‌ನಂತಹ ವಲಯಗಳಲ್ಲಿ ಪ್ರಮುಖ ರಿಯಾಯಿತಿಗಳಿಗೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಭಾರತದ ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ಮತ್ತು ಪ್ರಸ್ತುತ ವಾಷಿಂಗ್ಟನ್‌ನಲ್ಲಿ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ರಾಜೇಶ್ ಅಗರ್ವಾಲ್, ಭಾರತವು ತನ್ನ ಪ್ರಮುಖ ಕೃಷಿ ಹಿತಾಸಕ್ತಿಗಳನ್ನು, ವಿಶೇಷವಾಗಿ ಅಕ್ಕಿ, ಗೋಧಿ, ಹಣ್ಣುಗಳು ಮತ್ತು ರಾಗಿಗಳಂತಹ ಪ್ರಧಾನ ವಸ್ತುಗಳ ರಕ್ಷಣೆಯನ್ನು ಮುಂದುವರಿಸುತ್ತದೆ ಎಂದು ದೃಢಪಡಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಬೀಡು ಬಿಟ್ಟಿರುವ ಭಾರತದ ವ್ಯಾಪಾರ ನಿಯೋಗವು ಗಡುವಿನ ಮೊದಲು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಅಂತಿಮ ಪ್ರಯತ್ನವನ್ನು ಮಾಡುತ್ತಿದೆ. ಅದರೆ ಹೆಚ್ಚುವರಿ ಜಾಗತಿಕ ಸುಂಕಗಳ ಮೇಲಿನ 90 ದಿನಗಳ ವಿರಾಮವನ್ನು ಜುಲೈ 9ರ ನಂತರ ವಿಸ್ತರಿಸುವ ಯೋಜನೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಅಮೆರಿಕದ ವ್ಯಾಪಾರ ಒಪ್ಪಂದದ ಮೇಲೆ ಎಲ್ಲರ ಗಮನ ನೆಟ್ಟಿದೆ.

ಮುಖ್ಯ ಸಮಾಲೋಚಕ ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ನೇತೃತ್ವದ ಭಾರತೀಯ ತಂಡವು ಮಾತುಕತೆಗಳನ್ನು ಅಂತಿಮಗೊಳಿಸಲು ವಾಷಿಂಗ್ಟನ್‌ಗೆ ತೆರಳಿದೆ. ವಿಶ್ವಾದ್ಯಂತ ದೇಶಗಳ ಮೇಲೆ ಪರಸ್ಪರ ಸುಂಕ ವಿಧಿಸಲು ಟ್ರಂಪ್ ನೀಡಿದ್ದ ಗಡುವು ಜುಲೈ 9 ರಂದು ಕೊನೆಗೊಳ್ಳುವುದರಿಂದ, ಈ ಒಪ್ಪಂದವು ಜಾರಿಗೆ ಬಂದಿದೆ.

(ಏಜೆನ್ಸೀಸ್)

ಈ ಒಪ್ಪಂದವು ನಿರೀಕ್ಷೆಯಂತೆ ನಡೆದರೆ, ಇದು ಇತ್ತೀಚಿನ ವರ್ಷಗಳಲ್ಲಿ ಎರಡು ಪ್ರಜಾಪ್ರಭುತ್ವಗಳ ನಡುವಿನ ಅತ್ಯಂತ ಸಮಗ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವಾಗಿದೆ ಮತ್ತು ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಅಲೆಗಳ ನಡುವೆ ಜಾಗತಿಕ ವ್ಯಾಪಾರ ಪುನರ್​ರಚನೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಗುರುತಿಸುತ್ತದೆ.

ಅಮೆರಿಕ ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದದ ನಿರೀಕ್ಷೆ ಹೊಂದಿದ್ದು, ತೈಲ, ದ್ರವೀಕೃತ ನೈಸರ್ಗಿಕ ಅನಿಲ (LNG), ವಿಮಾನಗಳು ಮತ್ತು ಪರಮಾಣು ರಿಯಾಕ್ಟರ್‌ಗಳು ಸೇರಿದಂತೆ ವ್ಯಾಪಕ ವಾಣಿಜ್ಯ ಖರೀದಿಗಳನ್ನು ಭಾರತದ ಮೇಲೆ ಒತ್ತಡ ಹೇರುತ್ತಿದೆ. ಜೊತೆಗೆ, ಬಹು-ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಎಫ್‌ಡಿಐ ನಿಯಮಗಳನ್ನು ಸಡಿಲಗೊಳಿಸಲು ಪ್ರಚೋದನೆ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net