ತಮಿಳು ನಾಡಗೀತೆ ನಿಲ್ಲಿಸಿ ಕನ್ನಡ ನಾಡಗೀತೆ ಹಾಕಿಸಿದ ಶಾಸಕ ಕೆ.ಎಸ್.ಈಶ್ವರಪ್ಪ

kseshwarappa
Published on

ಶಿವಮೊಗ್ಗ : ಶಿವಮೊಗ್ಗದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಸಮಾಜದ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ಲೇ ಮಾಡಿದ ಆಯೋಜಕರು. ಈ ಮೂಲಕವಾಗಿ ಶಿವಮೊಗ್ಗದಲ್ಲಿ ಬಿಜೆಪಿ‌ ನಾಯಕರು ಎಡವಟ್ಟು ಮಾಡಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಸಮಾಜದ ಸಮಾವೇಶದಲ್ಲಿ ಆಯೋಜಕರು ತಮಿಳು ನಾಡಗೀತೆ ಪ್ಲೇ ಮಾಡಿದ್ದಾರೆ. ಸಮಾವೇಶ ಆರಂಭಕ್ಕೂ ಮುನ್ನ ಸಂಘಟಕರು ತಮಿಳು ನಾಡಗೀತೆ ಆಡಿಯೋ ಪ್ಲೇ ಮಾಡಿದ್ದಾರೆ. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮಿಳು ನಾಡಗೀತೆಗೆ ಎದ್ದುನಿಂತು ಗೌರವ ಸೂಚಿಸಿದ್ದಾರೆ. ವಿಧಾನಸಭಾ ಚುನಾವಣಾ ಕರ್ನಾಟಕ ಸಹ ಪ್ರಭಾರಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಈ ಘಟನೆ ನಡೆದಿದೆ.

ಕೆಲಕಾಲ ನಾಡಗೀತೆ ಪ್ಲೇ ಆಗುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚೆತ್ತುಕೊಂಡಿದ್ದು, ಕೂಡಲೇ ಡಯಾಸ್ ಬಳಿ ತೆರಳಿ ತಮಿಳು ನಾಡಗೀತೆ ನಿಲ್ಲಿಸುವಂತೆ ಸಂಘಟಕರಿಗೆ ಸೂಚನೆ ನೀಡಿದ್ದಾರೆ. ಬಳಿಕ ಕನ್ನಡ ನಾಡಗೀತೆ ಹಾಕಿಸಿ ಈಶ್ವರಪ್ಪ ಡ್ಯಾಮೇಜ್ ಕಂಟ್ರೋಲ್​​ಗೆ ಮುಂದಾಗಿದ್ದಾರೆ. ಸಮಾವೇಶದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ‌ ಭಾಗಿಯಾಗಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net