More

    ಬೆಂಗಳೂರಿನಲ್ಲಿ 66 ಕೋಟಿ ರೂ. ಮನೆ ಖರೀದಿಸಿದ ಡೋಲೋ 650 ಸಿಇಒ..

    ಬೆಂಗಳೂರು: ಭಾರತದ ಪ್ರತಿ ಮನೆಯಲ್ಲೂ ಡೋಲೋ 650 ಮಾತ್ರೆ ಜನಪ್ರಿಯವಾಗಿದೆ. ಡೋಲೋ 650 ಮಾತ್ರೆ ಕಂಪನಿ ಮುಖ್ಯಸ್ಥ ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ.

    ಕೋವಿಡ್ ಕಾಲದಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟಗೊಂಡ ಮಾತ್ರೆ ಡೋಲೋ 650. ಇದರ ಪರಿಣಾಮ 2020ರಲ್ಲಿ ಡೋಲೋ ಕಂಪನಿ 400 ಕೋಟಿ ರೂಪಾಯಿ ಆದಾಯ ಗಳಿಸಿತ್ತು. 2019ರಿಂದ 2021ರ ವರೆಗೆ ಡೋಲೋ ಆದಾಯದಲ್ಲಿ ಶೇಕಡಾ 244ರಷ್ಟು ಏರಿಕೆಯಾಗಿತ್ತು.

    ಇದನ್ನೂ ಓದಿ: ಬೋರ್ನ್​​ವೀಟಾದಲ್ಲಿ ಸಕ್ಕರೆ ಅಂಶ ವಿವಾದ; ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆಯುವಂತೆ ಸೂಚನೆ

    ಮನೆ ವಿಶೇಷತೆ: ಕೋಟಿ ಕೋಟಿ ಆದಾಯಗಳಿಸುತ್ತಿರುವ ಡೋಲೋ ಕಂಪನಿ ಸಿಇಒ ದಿಲೀಪ್ ಸುರಾನ ಇದೀಗ ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿರುವ ಈ ಮನೆ ಹಾಗೂ ನಿವೇಷನ ಜಾಗ 12,043 ಚದರ ಅಡಿ ವಿಸ್ತಾರವಾಗಿದೆ. ಇದರಲ್ಲಿ 8,373 ಚದರ ಅಡಿಯಲ್ಲಿ ಭವ್ಯ ಬಂಗಲೆ ಇದೆ. ಡೋಲೋ 650 ಮಾತ್ರೆ ಭಾರಿ ವ್ಯಾಪಾರದಿಂದ ದಿಲೀಪ್ ಸುರಾನಾ ಒಟ್ಟು ಆಸ್ತಿ ಇದೀಗ 26,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

    ಬೆಂಗಳೂರು, ಕರ್ನಾಟಕದಲ್ಲಿ ಸೀಮಿತವಾಗಿದ್ದ ಮೈಕ್ರೋ ಲ್ಯಾಬ್ಸ್‌ನ ಡೋಲೋ 650 ಹಾಗೂ ಇತರ ಔಷಧಿಗಳು ಭಾರತದಲ್ಲಿ ವ್ಯಾಪಾರ ವಹಿವಾಟು ಆರಂಭಿಸಿತು.

    ಕಾಂಗ್ರೆಸ್ ಒಡೆದ ಮನೆಯಂತಾಗಿದೆ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts