More

    ಕಾಂಗ್ರೆಸ್ ಒಡೆದ ಮನೆಯಂತಾಗಿದೆ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್

    ಮೈಸೂರು: ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಲಿಲ್ಲ. ಕೇವಲ ಪಿಎಫ್‌ಐ ಮಾತ್ರ ಅಭಿವೃದ್ಧಿ ಆಯಿತು ಎಂದು ಮೈಸೂರಿನಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

    ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜನರ ಹಿತ ದೇಶದ ಹಿತಕ್ಕೆ ಡಬಲ್‌ ಇಂಜಿನ್ ಸರ್ಕಾರ ಬರಬೇಕಿದೆ. ಕರ್ನಾಟಕದ ವಿಕಾಸದ ಜತೆ ದೇಶದ ವಿಕಾಸ ಸೇರಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ ಎಂದಿದ್ದಾರೆ.

    ರಾಮದಾಸ್ ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಶ್ರೀವತ್ಸ ಅವರಿಗೆ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳುತ್ತಾ ರಾಮದಾಸ್ ಅವರನ್ನು ಅರುಣ್ ಸಿಂಗ್ ಹಾಡಿ ಹೊಗಳಿದ್ದಾರೆ.

    ಕಾಂಗ್ರೆಸ್ ಕಾಲದಲ್ಲಿ ಹಿಂದೂಗಳ ಹತ್ಯೆಯಾಗಿತ್ತು. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಅದೇ ಸ್ಥಿತಿ ಇತ್ತು. ಒಂದು ರೀತಿ ನೆಗೆಟಿವ್ ವಾತಾವರಣ ಇತ್ತು. ಪಿಎಫ್‌ಐ ಹಾವಳಿ ಹೆಚ್ಚಾಗಿತ್ತು. ಕಾಂಗ್ರೆಸ್ ಇಷ್ಟು ವರ್ಷ ಸಾಮಾಜಿಕ ನ್ಯಾಯಕ್ಕಾಗಿ ಏನು ಮಾಡಿಲ್ಲ ಎಂದು ಕಾಂಗ್ರೆಸ್​ ಕುರಿತಾಗಿ ಸಾಲುಸಾಲು ಆರೋಪ ಮಾಡಿದ್ದಾರೆ.

    ಇದನ್ನೂ ಓದಿ: ಬೋರ್ನ್​​ವೀಟಾದಲ್ಲಿ ಸಕ್ಕರೆ ಅಂಶ ವಿವಾದ; ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆಯುವಂತೆ ಸೂಚನೆ

    ಮೀಸಲಾತಿ ಹೆಚ್ಚಿಸಿದ ಬಗ್ಗೆ ಮಾತನಾಡಿ, 4% ಅಂಸವಿಧಾನತ್ಮಕವಾಗಿ ಮುಸ್ಲಿಂರಿಗೆ ನೀಡಲಾಗಿತ್ತು. ಲಿಂಗಾಯತ ಒಕ್ಕಲಿಗರಿಗೆ ತಲಾ 2% ನೀಡಲಾಗಿದೆ. ನೀವು ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ. ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ಬೂತ್​ ಮಟ್ಟದ ಕಾರ್ಯಕರ್ತರೊಂದಿಗೆ ಮೋದಿ ಮಾತುಕತೆ! ಚುನಾವಣೆಯ ಮುನ್ನ ಶಕ್ತಿ ತುಂಬಿದ ಪ್ರಧಾನಿ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಾಸ್​​ ಪಡೆಯುವ ವಿಚಾರವಾಗಿ ಮಾತನಾಡಿ, ಯಾರಿಂದ ಕಾಂಗ್ರೆಸ್ ವಾಪಸ್ಸು ಪಡೆಯುತ್ತದೆ ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಲಿಲ್ಲ. ಕೇವಲ ಪಿಎಫ್‌ಐ ಮಾತ್ರ ಅಭಿವೃದ್ಧಿ ಆಯಿತು ಎಂದು ವಾಗ್ದಾಳಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಬ್ಯಾಚುಲರ್ಸ್​​ಗೆ ಯಾಕೆ ಬಾಡಿಗೆಗೆ ಮನೆ ಕೊಡಲ್ಲ?:ಈ ಸುದ್ದಿ ಓದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts