ಬೆಂಗಳೂರು: ಮನೆ ಬಾಡಿಗೆ ನೀಡುವಾಗ ಮಾಲೀಕರು ನೂರು ಬಾರಿ ಯೋಚನೆ ಮಾಡುತ್ತಾರೆ. ಬಹುತೇಕ ಮನೆ, ಫ್ಲಾಟ್ ಮನೆ ಮಾಲೀಕರು ಹುಡುಗರಿಗೆ, ಹುಡುಗಯರಿಗೆ ಮದುವೆ ಆಗಿಲ್ಲಾಂದ್ರೆ ಮನೇನೆ ಕೊಡಲ್ಲ. ಯಾಕೆ ಬ್ಯಾಚುಲರ್ಸ್‌ಗೆ ಮನೆ ಕೊಡಲ್ಲ ಎಂಬುದಕ್ಕೆ ಮನೆ ಮಾಲೀಕರೊಬ್ಬರು ಒಂದು ಉತ್ತಮ ಉದಾಹರಣೆಯನ್ನು ಹಂಚಿಕೊಂಡಿದ್ದಾರೆ.
ಇಲ್ಲೊಂದೆಡೆ ಬ್ಯಾಚುಲರ್ಸ್ ಖಾಲಿ ಮಾಡಿ ಬಿಟ್ಟು ಹೋಗಿರುವ ಫ್ಲಾಟ್, ಶೋಚನೀಯ ಸ್ಥಿತಿಯ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮನೆ ಮಾಲೀಕ ಬೇಸರ ಹೊರ ಹಾಕಿದ್ದಾರೆ.
This is why people don’t like renting to bachelors.
An “educated” bachelor working in a “large MNC” did this in Bangalore.
Got these pics from Reddit. pic.twitter.com/LbYhEk9hx5
— Ravi Handa (@ravihanda) April 26, 2023
ಫ್ಲ್ಯಾಟ್ ಮಾಲೀಕ, 2 BHK ಫ್ಲಾಟ್‌ನ್ನು ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ನೀಡಿದ್ದೆ. ಆತ 3-4 ತಿಂಗಳ ಬಾಡಿಗೆ ಪಾವತಿಸಿದ ನಂತರ, ಇದ್ದಕ್ಕಿದ್ದಂತೆ ಹೊರಟು ಹೋದ. ವ್ಯಕ್ತಿ ಡೆಪಾಸಿಟ್ ಹಣವನ್ನು ಹಿಂತಿರುಗಿಸಬೇಕೆಂದು ತಿಳಿಸಲು ಕರೆದನು. ಆದರೆ ಅಲ್ಲಿ ಹೋಗಿ ನೋಡಿದಾಗ ರೂಮ್ ಸ್ಥಿತಿ ಅಸ್ತವ್ಯಸ್ಥವಾಗಿತ್ತು.
ಇದನ್ನೂ ಓದಿ: ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಮೋದಿ ಮಾತುಕತೆ! ಚುನಾವಣೆಯ ಮುನ್ನ ಶಕ್ತಿ ತುಂಬಿದ ಪ್ರಧಾನಿ
ಫ್ಲಾಟ್‌ಗೆ ಭೇಟಿ ನೀಡಲು ಹೋದಾಗ, ಲಿವಿಂಗ್ ರೂಮಿನಲ್ಲಿ ಖಾಲಿ ಬಿಯರ್ ಬಾಟಲ್‌ಗಳು, ಕೊಳಕು ಹಾಸಿಗೆ ಕೂಡ ಬಿದ್ದಿತ್ತು ಮತ್ತು ಅಡುಗೆಮನೆ ಮತ್ತು ಶೌಚಾಲಯವು ಅವ್ಯವಸ್ಥೆಯಲ್ಲಿತ್ತು. ರೂಮನ್ನು ನೋಡಿದರೆ ಬಹುದಿನಗಳ ವರೆಗೆ ಕ್ಲೀನ್ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುವಂತೆ ಮನೆ ಇದೆ ಎಂದು ಮಾಲೀಕರು ತಿಳಿಸಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಬೋರ್ನ್ವೀಟಾದಲ್ಲಿ ಸಕ್ಕರೆ ಅಂಶ ವಿವಾದ; ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆಯುವಂತೆ ಸೂಚನೆ