More

    VIDEO| ಸಫಾರಿಗೆ ಹೋದ ಪ್ರವಾಸಿಗರ ಮೇಲೆ ಎಗರಿದ ಹುಲಿ!

    ಉತ್ತರಾಖಂಡ: ಸಫಾರಿ ಹೋಗುವುದೇ ಪ್ರಾಣಿಗಳನ್ನು ನೋಡಲು. ಕೆಲವೊಮ್ಮೆ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ನಿರಾಸೆಯಾಗುವುದುಂಟು. ಹಲವು ಬಾರಿ ಪ್ರಾಣಿಗಳು ಸಪಾರಿ ವಾಹನಗಳ ಮೇಲೆ ಅಟ್ಯಾಕ್​ ಮಾಡಿರುವ ಸುದ್ದಿ ಓದಿದ್ದೇವೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಪ್ರವಾಸಿಗರ ವಾಹನದ ಮೇಲೆ ಎಗರಿರುವ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ವಿಡಿಯೋ ಹಂಚಿಕೊಂಡಿದ್ದಾರೆ.

    ಈ ವಿಡಿಯೋ ಜತೆಗೆ ಶೀರ್ಷಿಕೆಯನ್ನು ನೀಡಿದ್ದಾರೆ. “ಸನ್ಯಾಸಿ ಕಿರಿಕಿರಿಗೊಂಡಿದ್ದಾರೆ. ಪ್ರತಿ ದಿನ ಗೊತ್ತುಪಡಿಸಿದ ಸಮಯದಲ್ಲಿ ಜನರು ನಿಮ್ಮ ಮನೆಗೆ ನುಗ್ಗಿದರೆ ನೀವು ಏನು ಮಾಡುತ್ತೀರಿ?” ಎಂದು ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಹುಲಿ ಪೊದೆಗಳ ಹಿಂದೆ ಅಡಗಿಕೊಂಡಿರುತ್ತದೆ. ಸಪಾರಿ ವಾಹನ ನೋಡುತ್ತಿದಂತೆ ಹುಲಿ ಜೋರಾಗಿ ಘರ್ಜಿಸುತ್ತಾ ವಾಹನದ ಬಳಿ ಬರುವಾಗ ಪ್ರವಾಸಿಗರು ಕಂಗಾಲಾಗಿ ಚೀರಿಕೊಂಡಿದ್ದಾರೆ. ಸಫಾರಿ ವಾಹನದ ಚಾಲಕ ಸ್ಮಾರ್ಟ್ ಆಗಿ ವಾಹನ ಚಲಾಯಿಸಿಕೊಂಡು ಬಂದಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.

    ನೆಟ್ಟಿಗರು ಈ ವಿಡಿಯೋಗೆ ಕೆಮೆಂಟ್ ಮಾಡಿದ್ದು, ಪ್ರವಾಸಿಗರು ಸಫಾರಿಗೆ ಹೋಗುವುದನ್ನು ತಡೆಯಬೇಕು. ಕಾಡಿನಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದೆಲ್ಲಾ ಕಾಮೆಂಟ್​​ ಮಾಡುತ್ತಾ ಪರ-ವಿರೋಧ ಚರ್ಚೆಯನ್ನು ಸೋಶಿಯಲ್​​ ಮೀಡಿಯಾದಲ್ಲಿ ಮಾಡುತ್ತಿದ್ದಾರೆ.

    ಅಮಿತ್​​ ಷಾಗೆ ಅಮಿತ ಜನಸ್ಪಂದನೆ; ಕಾಂಗ್ರೆಸ್ ವಿಚಲಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts