More

    #BBK8: ಖುಲಾಯಿಸಿದ ಲಕ್, ಫಿನಾಲೆಗೂ ಮೊದಲೇ ಹಣ ಗೆದ್ದ ಅರವಿಂದ್​

    ವೀಕ್ಷಕರಿಗೆ ತುಂಬಾ ಕುತೂಹಲ ಮೂಡಿಸಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​​ಬಾಸ್ ಸೀಸನ್-08ರ ಫಿನಾಲೆ ಇದೇ ಭಾನುವಾರ ಅದ್ದೂರಿಯಾಗಿ ನಡೆಯಲಿದೆ. ಫಿನಾಲೆ ಮುಗಿಯುವ ಮೊದಲೇ ಬಿಗ್​ಬಾಸ್ ಸ್ಪರ್ಧಿ, ಅಂತರಾಷ್ಟ್ರೀಯ ಬೈಕ್ ರೇಸರ್ ಕೆ.ಪಿ. ಅರವಿಂದ್ ಹಣ ಗೆದ್ದಿದ್ದಾರೆ. ಏನಪ್ಪ ಆ ಸುದ್ದಿ ಅಂತೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

    ವೀಕ್ಷಕರಿಂದ ಅತಿ ಹೆಚ್ಚು ಮತ ಪಡೆಯುವ ಮೂಲಕ ಅರವಿಂದ್ ಮೊದಲ ಸ್ಪರ್ಧಿಯಾಗಿ ಫಿನಾಲೆ ಪ್ರವೇಶಿಸಿದ್ದಾರೆ. ಅಲ್ಲದೇ ಬಿಗ್​​ಬಾಸ್ ನೀಡುವ ಎಲ್ಲಾ ಟಾಸ್ಕ್​ಗಳಲ್ಲಿ ಭಾಗವಹಿಸುವ ಮೂಲಕ ಹಲವು ಗೆಲುವುಗಳನ್ನು ದಾಖಲಿಸಿದ್ದಾರೆ.

    ಇದನ್ನೂ ಓದಿ: #BBK8: ಒಂದು ವೇಳೆ ಅರವಿಂದ್​-ಮಂಜು ನಡುವೆ ಟೈ ಆದ್ರೆ ಏನಾಗಲಿದೆ? 3ನೇ ವ್ಯಕ್ತಿಗೂ ಹೊಡೆಯುತ್ತಾ ಬಂಪರ್​?

    ಅಲ್ಲದೇ ಬಿಗ್​​​ಬಾಸ್ ನೀಡಿದ ಫಿನಾಲೆ ವಾರದ ಟಾಸ್ಕ್​ನಲ್ಲಿ ಅತಿ ಹೆಚ್ಚು ಅಂಕ ಪಡೆದ ಅರವಿಂದ್ ಎರಡು ಲಕ್ಷ ರೂಪಾಯಿ ಪಡೆದಿದ್ದಾರೆ. ಫಿನಾಲೆ ವಾರದ ಟಾಸ್ಕ್​​ನಲ್ಲಿ ಅರವಿಂದ್ 32 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಗಳಿಸಿದ್ದರು. ಲ್ಯಾಗ್ ಮಂಜು ಮತ್ತು ದಿವ್ಯಾ ಉರುಡುಗ 13 ಅಂಕ ಪಡೆಯುವ ಮೂಲಕ ಜಂಟಿಯಾಗಿ 2ನೇ ಸ್ಥಾನ ಪಡೆದರು. ಅರವಿಂದ್ ಗೆದ್ದ 2 ಲಕ್ಷ ಹಣವನ್ನು ಭಾನುವಾರ ನಡೆಯುವ ಫಿನಾಲೆ ವೇದಿಕೆ ಮೇಲೆ ನಟ ಕಿಚ್ಚ ಸುದೀಪ್ ನೀಡಲಿದ್ದಾರೆ.


    ಅರವಿಂದ್​ ಜತೆ ಸಂಬಂಧ ಮುರಿದಿಕೋ ಎಂದ ಪ್ರಶಾಂತ್​ಗೆ ದಿವ್ಯಾ ಉರುಡುಗ ಕೊಟ್ಟ ಉತ್ತರವಿದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts