More

    ಮಂಜು ಆಸೆ ಈಡೇರಿಸಿದ ಶಿವರಾಜಕುಮಾರ್

    ಬೆಂಗಳೂರು: ‘ನನಗೆ ಶಿವರಾಜ್​ಕುಮಾರ್ ಅಂದರೆ ಬಹಳ ಇಷ್ಟ. ಅವರ ಕಡೆಯಿಂದ ಒಂದೇ ಒಂದು ಆಶೀರ್ವಾದ ಬೇಕಾಗಿತ್ತು. ಒಂದೇ ಒಂದು ವಿಡಿಯೋ ಸಿಕ್ಕರೆ ಬಹಳ ಖುಷಿಯಾಗುತ್ತದೆ. ಇದು ನನ್ನ ಆಸೆ …’- ಹಾಗಂತ ‘ಬಿಗ್ ಬಾಸ್’ನ ಸೋಮವಾರದ ಎಪಿಸೋಡ್​ನಲ್ಲಿ ಮಂಜು ಪಾವಗಡ ಹೇಳಿಕೊಂಡಿದ್ದರು. ಮನೆಯಲ್ಲಿ ಈಡೇರದ ಒಂದು ಆಸೆಯನ್ನು ಹೇಳಿಕೊಂಡರೆ, ಅವರ ಆಸೆ ನೆರವೇರಿಸಲಾಗುತ್ತದೆ ಎಂದು ‘ಬಿಗ್ ಬಾಸ್’ ಹೇಳಿದ್ದರು. ಅದರಂತೆ, ಎಲ್ಲ ಸ್ಪರ್ಧಿಗಳು ತಮ್ಮ ಆಸೆ ಹೇಳಿಕೊಂಡಿದ್ದರು. ಸುದೀಪ್ ಅಡುಗೆ ಮಾಡಿ ಕಳುಹಿಸಬೇಕೆಂದು ದಿವ್ಯಾ ಉರುಡುಗ ಕೇಳಿಕೊಂಡರೆ, ತಮ್ಮ ಬೈಕನ್ನು ಗಾರ್ಡನ್ ಏರಿಯಾದಲ್ಲಿ ನೋಡಬೇಕು ಎಂದು ಅರವಿಂದ್ ಆಸೆ ಪಟ್ಟಿದ್ದರು. ಹೀಗೆ ಪ್ರತಿ ಎಪಿಸೋಡ್​ನಲ್ಲೂ ಒಬ್ಬೊಬ್ಬರ ಆಸೆಯನ್ನು ‘ಬಿಗ್ ಬಾಸ್’ ಈಡೇರಿಸಿದ್ದರು.

    ಶಿವರಾಜ್​ಕುಮಾರ್ ತಮಗೆ ಆಶೀರ್ವಾದ ಮಾಡಬೇಕೆಂಬ ಮಂಜು ಆಸೆ ಬಾಕಿ ಉಳಿದಿತ್ತು. ಶುಕ್ರವಾರದ ಕಂತಿನಲ್ಲಿ ಅದೂ ಈಡೇರಿದೆ. ಮಂಜು ಆಸೆಯಂತೆ ಶಿವರಾಜ್​ಕುಮಾರ್ ಒಂದು ವಿಡಿಯೋ ಮಾಡಿ ಕಳುಹಿಸಿದ್ದಾರೆ. ‘ಮಂಜು ನೀವು ‘ಬಿಗ್ ಬಾಸ್’ ಫೈನಲ್ಸ್​ಗೆ ಬಂದಿದ್ದು ಬಹಳ ಖುಷಿಯಾಯಿತು. ಒಳ್ಳೆಯದಾಗಲಿ, ಗೆದ್ದು ಬನ್ನಿ. ಯಾರ್ಯಾರು ಫೈನಲ್ಸ್​ಗೆ ಬಂದಿದ್ದಾರೋ, ಅವರೆಲ್ಲರಿಗೂ ಆಲ್ ದಿ ಬೆಸ್ಟ್’ ಎಂದು ಹಾರೈಸಿದ್ದಾರೆ. ತಮ್ಮ ಮೆಚ್ಚಿನ ನಟ ಹೀಗೆ ಆಶೀರ್ವಾದ ಮಾಡಿದ್ದು ನೋಡಿ ಮಂಜು ಸಹ ಫುಲ್ ಖುಷಿಯಾಗಿದ್ದಾರೆ.

    ಇಂದು ಇಬ್ಬರು ಔಟ್: ‘ಬಿಗ್ ಬಾಸ್’ ಕೊನೆಯ ಹಂತಕ್ಕೆ ಬಂದಿದ್ದು, ಶನಿವಾರ ಮತ್ತು ಭಾನುವಾರ ಗ್ರಾಂಡ್ ಫಿನಾಲೆ ನಡೆಯಲಿದೆ. ಕೊನೆಯ ಹಂತದಲ್ಲಿ ಐವರು ಸ್ಪರ್ಧಿಗಳು ಮಾತ್ರ ಇದ್ದು, ಶನಿವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬರಲಿದ್ದಾರೆ. ಮೂವರ ಪೈಕಿ ಭಾನುವಾರ ಮೊದಲು ಒಬ್ಬರು ಹೊರಬರಲಿದ್ದು, ಆ ನಂತರ ಉಳಿದ ಇಬ್ಬರಲ್ಲಿ, ವಿಜೇತರು ಯಾರು ಎಂದು ವೇದಿಕೆಯ ಮೇಲೆ ಸುದೀಪ್ ಘೋಷಿಸಲಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ; ಶಾಸಕರ ಬೆಂಬಲಿಗರ ಕಿರುಕುಳ ಆರೋಪ

    ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾರೆ; ಪ್ರಾಧ್ಯಾಪಕನ ಕಾಮಪುರಾಣವನ್ನು ಬಿಚ್ಚಿಟ್ಟ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts