Delhi Ganesh : ತಮಿಳು ಚಿತ್ರರಂಗದ ಜನಪ್ರಿಯ ಹಿರಿಯ ನಟ ಡೆಲ್ಲಿ ಗಣೇಶ್ ಕೊನೆಯುಸಿರೆಳೆದಿದ್ದಾರೆ. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಗಣೇಶ್ ಅವರು ವಯೋಸಹಜ ಕಾಯಿಲೆಯಿಂದ ನಿನ್ನೆ (ನ.09) ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಡೆಲ್ಲಿ ಗಣೇಶ್ ಅವರ ಸಾವು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಗಣೇಶ್ ಅವರ ಪಾರ್ಥಿವ ಶರೀರವನ್ನು ಚೆನ್ನೈನ ರಾಮಾವರಂನಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಣೇಶ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿ 11.30ರ ಸುಮಾರಿಗೆ ಚೆನ್ನೈನ ರಾಮಪುರಂನ ಸೆಂತಮಿಲ್ ನಗರದಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಇದನ್ನೂ ಓದಿ: ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep
1944ರಲ್ಲಿ ನೆಲ್ಲೈನಲ್ಲಿ ಜನಿಸಿದ ಡೆಲ್ಲಿ ಗಣೇಶ್, 1976ರಲ್ಲಿ ಪ್ರಶವಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಗಣೇಶ್ ಅವರು ದೆಹಲಿ ರಂಗಭೂಮಿ ತಂಡವಾದ ದಕ್ಷಿಣ ಭಾರತ ನಾಟಕ ಸಭಾದ ಸದಸ್ಯರಾಗಿದ್ದರು. ಚಲನಚಿತ್ರಗಳಲ್ಲಿ ನಟಿಸುವ ಮೊದಲು 1964 ರಿಂದ 1974 ರವರೆಗೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದರು. ಪೋಷಕ ಪಾತ್ರ ಮತ್ತು ವಿಲನ್ ಎರಡರಲ್ಲೂ ನಟಿಸುವ ಮೂಲಕ ಡೆಲ್ಲಿ ಗಣೇಶ್ ಅವರು ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು. ಪೋಷಕ ಪಾತ್ರವಲ್ಲದೆ, ಕಾಮಿಡಿ ಪಾತ್ರದಲ್ಲೂ ಗಣೇಶ್ ಅವರು ತಮ್ಮದೇ ಛಾಪು ಮೂಡಿಸಿದ್ದರು. ಅವ್ವೈ ಷಣ್ಮುಖಿ ಚಿತ್ರದಲ್ಲಿ ಗಣೇಶ್ ಮತ್ತು ಕಮಲ್ ಹಾಸನ್ ಅವರ ದೃಶ್ಯಗಳು ಇನ್ನೂ ಅಭಿಮಾನಿಗಳಲ್ಲಿ ಜನಪ್ರಿಯವಾಗಿವೆ.
ಕಮಲ್ ಹಾಸನ್, ರಜನಿಕಾಂತ್ ಹಾಗೂ ವಿಜಯಕಾಂತ್ರಿಂದ ಹಿಡಿದು ಈಗಿನ ಯುವ ನಟರು ಸೇರಿದಂತೆ ಅನೇಕ ಖ್ಯಾತ ನಟರೊಂದಿಗೆ ಡೆಲ್ಲಿ ಗಣೇಶ್ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಮತ್ತು ಇತರ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಲ್ಲದೆ, ಅನೇಕ ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
ಡೆಲ್ಲಿ ಗಣೇಶ್ ಅವರ ಪಾರ್ಥಿವ ಶರೀರವನ್ನು ಚೆನ್ನೈನ ರಾಮಾವರಂನಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ದೆಹಲಿ ಗಣೇಶ್ ಅವರಿಗೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗದವರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್)
ಅಂತಿಮ ವಿಧಿವಿಧಾನ ನೆರವೇರಿಸಿ ಕಾರನ್ನು ಸಮಾಧಿ ಮಾಡಿದ ಕುಟುಂಬ! ಕಾರಣ ಕೇಳಿದ್ರೆ ಮನಕಲಕುತ್ತೆ | Car Samadhi
ಓಯೋ ರೂಮ್ ಬುಕ್ ಮಾಡೋ ಮುನ್ನ ಈ ವಿಷಯಗಳು ತಿಳಿದಿರಲಿ! ಹಣದ ಜತೆ ಮರ್ಯಾದೆ ಹೋಗುತ್ತೆ ಎಚ್ಚರ | Oyo Room
ನೋ ಜಿಮ್, ನೋ ಡಯಟ್… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss