Weight Loss : ಇತ್ತೀಚೆಗೆ ತೂಕ ಇಳಿಕೆ ತುಂಬಾ ಸುಲಭವಾಗಿದೆ. ಏಕೆಂದರೆ, ತೂಕ ಇಳಿಕೆಗೆ ಹಲವು ಮಾರ್ಗಗಳಿವೆ. ನಾವು ಪ್ರಯತ್ನಿಸಬೇಕಷ್ಟೇ. ಹೀಗಾಗಿಯೇ ಸೆಲೆಬ್ರಿಟಿಗಳು ಬೇಕಾದಾಗ ತೂಕ ಹೆಚ್ಚಿಸಿಕೊಂಡು ಸುಲಭವಾಗಿ ತೂಕ ಇಳಿಸಿಕೊಳ್ಳುತ್ತಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದ ಫೋಟೋ ಅಥವಾ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ, ಫಿಟ್ನೆಸ್ ಇನ್ಫ್ಲುಯೆನ್ಸರ್ ರಿಧಿ ಶರ್ಮಾ ಯಾವುದೇ ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸದೆ ಮತ್ತು ಜಿಮ್ ಮಾಡದೇ ಯಶಸ್ವಿಯಾಗಿ 20 ಕೆಜಿ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬಳಿಕ ಸಖತ್ ವೈರಲ್ ಆಗಿದೆ.
ರಿಧಿ ಶರ್ಮಾ ನೀಡಿರುವ ಮಾಹಿತಿ ಪ್ರಕಾರ, ಅವರು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿದ್ದರೂ ಜಿಮ್‌ಗೆ ಹೋಗದೆ, ಮನೆಯಲ್ಲೇ ವ್ಯಾಯಾಮ ಮಾಡುವ ಮೂಲಕ ತಮ್ಮ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ. ರಿಧಿ ಶರ್ಮಾ ಅನುಸರಿಸುತ್ತಿರುವ ಕಠಿಣ ನಿಯಮಗಳ ಮತ್ತೊಂದು ಪ್ರಮುಖ ಅಂಶವೆಂದರೆ ಮನೆಯಲ್ಲಿ ಬೇಯಿಸಿದ ಆಹಾರಕ್ಕೆ ಒತ್ತು ನೀಡುವುದು.
ಫಾಸ್ಟ್ ಫುಡ್ಗೆ ನೋ, ಹೋಮ್ ಮೇಡ್ ಫುಡ್ಗೆ ಯೆಸ್
ತೂಕ ಇಳಿಸಿಕೊಳ್ಳಲು ಸಕ್ಕರೆ, ಸಂಸ್ಕರಿಸಿದ ಆಹಾರಗಳಿಂದ ದೂರ ಇರಬೇಕು. ದೈನಂದಿನ ನಡಿಗೆ ಮತ್ತು ನಿದ್ರೆಗೆ ಆದ್ಯತೆ ನೀಡುವಂತಹ ಆರೋಗ್ಯಕರ ಜೀವನಶೈಲಿಯ ಬದಲಾವಣೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ತನ್ನ ತೂಕವನ್ನು ಇಳಿಸಿಕೊಂಡಿದ್ದಾಗಿ ರಿಧಿ ಶರ್ಮಾ ಹೇಳಿದ್ದಾರೆ. ಅನಗತ್ಯ ಕ್ಯಾಲೋರಿಗಳನ್ನು ಸೇವಿಸದೆ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. ಪ್ರೋಟೀನ್ ಹೆಚ್ಚಿರುವ ಪನೀರ್, ಸೋಯಾ, ದ್ವಿದಳ ಧಾನ್ಯಗಳು ಹಾಗೂ ನಟ್ಸ್ ತಿಂದರೆ ಶಕ್ತಿ ಹೆಚ್ಚಿ, ಹೊಟ್ಟೆ ತುಂಬಿದ ಅನುಭವವಾಗುತ್ತದೆ ಎನ್ನುತ್ತಾರೆ ರಿಧಿ ಶರ್ಮಾ.
ಮನೆಯಲ್ಲಿ ವ್ಯಾಯಾಮ ಮಾಡಿ
ರಿಧಿ ಶರ್ಮಾ ಅವರು ಜಿಮ್ ಕಡೆ ಮುಖ ಮಾಡದೇ ಮನೆಯಲ್ಲೇ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಿದ್ದಾರೆ. ವಾರಾಂತ್ಯವನ್ನು ಹೊರತುಪಡಿಸಿ ಪ್ರತಿದಿನ ಮನೆಯಲ್ಲಿ 30 ರಿಂದ 40 ನಿಮಿಷಗಳ ವ್ಯಾಯಾಮ ಮಾಡುತ್ತಾರೆ. ಯೋಗ ಮ್ಯಾಟ್, ಎರಡು ಡಂಬ್ಬೆಲ್ಸ್ ಮತ್ತು ರೆಸಿಸ್ಟೆನ್ಸ್ ಬ್ಯಾಂಡ್‌ನೊಂದಿಗೆ ಇದನ್ನು ಸಾಧಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಅವರ ವ್ಯಾಯಾಮದಲ್ಲಿ ಪೈಲೇಟ್ಸ್ (ಸ್ನಾಯುಗಳನ್ನು ಬಲಪಡಿಸುವ ಆಸನಗಳು), ಶಕ್ತಿ ತರಬೇತಿ ಸೇರಿವೆ.
ನಿದ್ರೆಗೆ ಆದ್ಯತೆ
ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಅವಶ್ಯಕ ಎಂದು ರಿಧಿ ಶರ್ಮಾ ಹೇಳಿದ್ದಾರೆ. ನಿದ್ರೆಯು ತನ್ನ ತೂಕ ಇಳಿಸುವ ಪ್ರಯಾಣ ಮತ್ತು ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿರುವ ಶರ್ಮಾ, ತನ್ನ ಪ್ರಯಾಣದಲ್ಲಿ ವಾಕಿಂಗ್ ಒಂದು ದೊಡ್ಡ ಬದಲಾವಣೆ ತಂದಿದೆ ಎಂದಿದ್ದಾರೆ. ಅವರು ದಿನಕ್ಕೆ 7,000 ರಿಂದ 10,000 ಹೆಜ್ಜೆಗಳನ್ನು ನಡೆಯುತ್ತಿದ್ದರು.
ಈ ಎಲ್ಲ ಅಭ್ಯಾಸಗಳಿಗೆ ಅಂಟಿಕೊಳ್ಳುವ ಮೂಲಕ, ನಾನು ನಿಜವಾದ ಪ್ರಗತಿಯನ್ನು ಸಾಧಿಸಿದೆ ಎಂದು ರಿಧಿ ಶರ್ಮಾ ಹೇಳಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೋ ಈವರೆಗೂ 1.7 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, 21 ಸಾವಿರಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ. ತೂಕ ಇಳಿಸುವಲ್ಲಿ ರಿಧಿ ಶರ್ಮಾ ಅವರ ಬದ್ಧತೆಯನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಮನಿಸಿ: ತೂಕ ನಷ್ಟವು ದೇಹದ ಪರಿಸ್ಥಿತಿಗಳು, ಆರೋಗ್ಯ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ ಉಪವಾಸ ಒಂದೇ ಪರಿಹಾರವಲ್ಲ. ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ತೂಕ ಏಕೆ ಹೆಚ್ಚಾಗಿದೆ ಎಂಬುದನ್ನು ವಿಶ್ಲೇಷಿಸಬೇಕು ಮತ್ತು ತಜ್ಞರ ಸಲಹೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ತಕ್ಕಂತೆ ತೂಕ ಇಳಿಸುವ ಯೋಜನೆಯನ್ನು ರೂಪಿಸಿಕೊಳ್ಳಬೇಕು.
ಈ ಆಹಾರಗಳನ್ನು ಸೇವಿಸಿದ ಬಳಿಕ ಅಪ್ಪಿತಪ್ಪಿ ಹಲ್ಲು ಉಜ್ಜಬೇಡಿ! ಉಜ್ಜಿದರೆ ಏನಾಗುತ್ತೆ ಗೊತ್ತಾ? Teeth Health
ಹಾವೇರಿ ರೈತನ ಸಾವಿನ ಬಗ್ಗೆ ಸುಳ್ಳು ಸುದ್ದಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್ ದಾಖಲು | Tejasvi Surya