blank

ಈ ಆಹಾರಗಳನ್ನು ಸೇವಿಸಿದ ಬಳಿಕ ಅಪ್ಪಿತಪ್ಪಿ ಹಲ್ಲು ಉಜ್ಜಬೇಡಿ! ಉಜ್ಜಿದರೆ ಏನಾಗುತ್ತೆ ಗೊತ್ತಾ? Teeth Health

Teeth Health

Teeth Health : ನಿಯಮಿತವಾಗಿ ಹಲ್ಲುಗಳನ್ನು ಉಜ್ಜುವುದು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಿದರೆ ಒಳ್ಳೆಯದು ಎಂದು ದಂತವೈದ್ಯರು ಹೇಳುತ್ತಾರೆ. ಆದರೆ, ಹಲ್ಲು ಉಜ್ಜುವಾಗಲೂ ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಹಲ್ಲಿನ ಆರೋಗ್ಯ ಹಾಳಾಗುತ್ತದೆ ಎಂಬುದು ನೆನಪಿರಲಿ.

ಮನುಷ್ಯನ ಸೌಂದರ್ಯಕ್ಕೆ ಹಲ್ಲುಗಳು ಕೂಡ ತುಂಬಾ ಮುಖ್ಯ. ಹಲ್ಲುಗಳು ಚೆನ್ನಾಗಿದ್ದರೆ ಮತ್ತು ಯಾವುದೇ ದುರ್ನಾತ ಬೀರದಿದ್ದರೆ ಆತ್ಮವಿಶ್ವಾವೂ ಹೆಚ್ಚಾಗುತ್ತದೆ. ಅದೇ ಹಲ್ಲುಗಳು ಹುಕುಳು ಬಿದ್ದರೆ ಮತ್ತು ಬಣ್ಣ ಬದಲಾಯಿಸಿ, ಕೊನೆಗ ಒಂದೆರೆಡು ಹಲ್ಲುಗಳು ಬಿದ್ದು ಹೋದರೆ ಕೆಲವರಲ್ಲಿ ಆತ್ಮವಿಶ್ವಾಸವೇ ಕಳೆದುಹೋಗುತ್ತದೆ. ಹಾಗಾಗಿ ಹಲ್ಲುಗಳನ್ನು ಉಜ್ಜುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಹಲ್ಲುಗಳು ಗಟ್ಟಿಯಾಗಿವೆ ಎಂಬ ಕಾರಣಕ್ಕೆ ಮನಬಂದಂತೆ ಉಜ್ಜುವಂತಿಲ್ಲ ಮತ್ತು ಜಾಸ್ತಿ ಸಮಯ ತಿಕ್ಕುವಂತಿಲ್ಲ.

ಈ ಆಹಾರಗಳನ್ನು ಸೇವಿಸಿದ ಬಳಿಕ ಅಪ್ಪಿತಪ್ಪಿ ಹಲ್ಲು ಉಜ್ಜಬೇಡಿ! ಉಜ್ಜಿದರೆ ಏನಾಗುತ್ತೆ ಗೊತ್ತಾ? Teeth Health

ನಿಮ್ಮ ಹಲ್ಲುಗಳನ್ನು ಅತಿಯಾಗಿ ಉಜ್ಜುವುದು ಅಥವಾ ನಿಮ್ಮ ಹಲ್ಲುಗಳನ್ನು ತಪ್ಪಾಗಿ ಉಜ್ಜುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಅಂದರೆ, ಇದು ಹಲ್ಲಿನ ದಂತಕವಚ ಮತ್ತು ಹಲ್ಲುಗಳ ಸೂಕ್ಷ್ಮತೆಯ ನಷ್ಟದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅದೇ ರೀತಿ ಹೆಚ್ಚು ಆಮ್ಲೀಯ ಆಹಾರ ಮತ್ತು ಪಾನೀಯಗಳನ್ನು ಸೇವಿಸಿದ ಬೆನ್ನಲ್ಲೇ ಹಲ್ಲು ಉಜ್ಜಿದರೆ ಗಂಭೀರ ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಓಯೋ ರೂಮ್ ಬುಕ್ ಮಾಡೋ ಮುನ್ನ ಈ ವಿಷಯಗಳು ತಿಳಿದಿರಲಿ! ಹಣದ ಜತೆ ಮರ್ಯಾದೆ ಹೋಗುತ್ತೆ ಎಚ್ಚರ | Oyo Room

ಆಮ್ಲೀಯ ಆಹಾರವನ್ನು ಸೇವಿಸಿದಾಗ ಹಲ್ಲಿನ ದಂತಕವಚವನ್ನು ಹಾನಿಗೊಳಿಸಬಹುದು. ದಂತಕವಚ ಸಡಿಲಗೊಂಡರೆ, ಹಲ್ಲಿನ ರಚನೆಯು ಸ್ವತಃ ಹಾನಿಗೊಳಗಾಗುತ್ತದೆ. ಹಲ್ಲುಗಳು ಕುಗ್ಗುತ್ತವೆ, ಹೆಚ್ಚು ಸೂಕ್ಷ್ಮ ಮತ್ತು ನೋವಿನಿಂದ ಕೂಡಿರುತ್ತವೆ ಎಂದು ವೈದ್ಯರು ಎಚ್ಚರಿಸುತ್ತಾರೆ.

ಇನ್ನು ಸಿಟ್ರಸ್ ಹಣ್ಣುಗಳು, ಸೋಡಾ ಮತ್ತು ಸಿಟ್ರಸ್ ಜ್ಯೂಸ್​ಗಳನ್ನು ಆಗಾಗ ಸೇವನೆ ಮಾಡುವುದರಿಂದ ಬಾಯಿಯಲ್ಲಿ pH ಮಟ್ಟವನ್ನು ಕಡಿಮೆ ಮಾಡಬಹುದು. ಇದು ಹಲ್ಲುಗಳ ಬಣ್ಣ ಮತ್ತು ಆಕಾರವನ್ನು ಬದಲಾಯಿಸಬಹುದು ಮತ್ತು ಶಾಶ್ವತ ಹಾನಿಯನ್ನು ಉಂಟುಮಾಡಬಹುದು.

ಈ ಆಹಾರಗಳನ್ನು ಸೇವಿಸಿದ ಬಳಿಕ ಅಪ್ಪಿತಪ್ಪಿ ಹಲ್ಲು ಉಜ್ಜಬೇಡಿ! ಉಜ್ಜಿದರೆ ಏನಾಗುತ್ತೆ ಗೊತ್ತಾ? Teeth Health

ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯ ವಿಷಯವೆಂದರೆ ಆಮ್ಲೀಯ ಆಹಾರಗಳ ಪ್ರತಿಕ್ರಿಯೆಗಳನ್ನು ತಪ್ಪಿಸುವುದು. ಅಂದರೆ, ಸಿಟ್ರಸ್ ಆಹಾರವನ್ನು ಸೇವಿಸಿದ ತಕ್ಷಣ ನಿಮ್ಮ ಹಲ್ಲುಗಳನ್ನು ಹಲ್ಲುಜ್ಜುವುದನ್ನು ತಪ್ಪಿಸಿ. ಆಮ್ಲೀಯ ಆಹಾರಗಳು, ಪಾನೀಯಗಳು ಮತ್ತು ಹಣ್ಣುಗಳನ್ನು ಸೇವಿಸಿದ ನಂತರ ಎರಡು ಗಂಟೆಗಳ ವಿರಾಮದ ನಂತರ ಮಾತ್ರ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಹಲ್ಲಿನ ಆರೋಗ್ಯಕ್ಕೆ 7 ಪಿಹೆಚ್ ಮಟ್ಟವನ್ನು ಹೊಂದಿರುವ ಆಹಾರಗಳು ಉತ್ತಮವೆಂದು ನೆನಪಿಡಿ. ಅಂತೆಯೇ, ಹಲ್ಲಿನ ದಂತಕವಚವನ್ನು ಸಂರಕ್ಷಿಸಲು ಗಟ್ಟಿಯಾದ ಬ್ರಷ್‌ನಿಂದ ಹಲ್ಲುಜ್ಜುವುದನ್ನು ತಪ್ಪಿಸುವುದು ಉತ್ತಮ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.

ಕೃತಕ ಬುದ್ಧಿಮತ್ತೆ ವರವೋ ಶಾಪವೋ? ಸೈಬರ್ ಖದೀಮರ AI ಅಸ್ತ್ರ! ಇಲ್ಲಿದೆ ಪೊಲೀಸರ ಉಪಯುಕ್ತ ಸಲಹೆ… Artificial intelligence

ಮೆಡಿಕಲ್​ ಲ್ಯಾಬ್​ನಿಂದ 43 ಕೋತಿ ಪರಾರಿ! ಇಂಗ್ಲಿಷ್​ ಸಿನಿಮಾ ನೆನಪಿಸಿ ಹೋದ ಮಂಗಗಳ ಸೈನ್ಯ

Share This Article

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…