ಮತ್ತೊಂದು ದಾಖಲೆ ಬರೆದ ಕೊಹ್ಲಿ; ಟಿ-20ಯಲ್ಲಿ 4000 ರನ್ ಪೂರ್ಣ

Kohli
Published on

ಅಡಿಲೇಡ್: ಟಿ-20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಅಧ್ಭುತ ನಿರ್ವಹಣೆಯನ್ನೇ ತೋರಿದ್ದಾರೆ. 6 ಪಂದ್ಯಗಳಲ್ಲಿ 4 ಅರ್ಧ ಶತಕ ಸಿಡಿಸಿ, 296 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ-20 ಕ್ರಿಕೆಟ್​​ನಲ್ಲಿ ಹೊಸದೊಂದು ದಾಖಲೆಯನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಟಿ-20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಕೊಹ್ಲಿ ಅರ್ಧ ಶತಕ ಸಿಡಿಸ ಮಿಂಚಿದರು. 40 ಬಾಲ್ ಎದುರಿಸಿ 50 ರನ್​ ಗಳಿಸಿ ಔಟ್ ಆದರು. ಕೊಹ್ಲಿ ಇನ್ನಿಂಗ್ಸ್​​ನಲ್ಲಿ ಒಂದು ಸಿಕ್ಸ್​ ಹಾಗೂ ನಾಲ್ಕು ಫೋರ್ ಒಳಗೊಂಡಿತ್ತು. ಇದೀಗ ಈ ಪಂದ್ಯದ ಮೂಲಕ ಕೊಹ್ಲಿ ಟಿ-20 ಕ್ರಿಕೆಟ್​ನಲ್ಲಿ ಒಟ್ಟು 4000 ರನ್ ಕಲೆಹಾಕಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಈವರೆಗೆ 115 ಟಿ-20 ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 4008 ರನ್ ಕಲೆಹಾಕಿದ್ದಾರೆ. ಒಂದು ಶತಕ ಸಹಿತ 122 ರನ್ ಗಳಿಸಿರುವುದು ಇದುವರೆಗಿನ ಕೊಹ್ಲಿಯ ಉತ್ತಮ ಪ್ರದರ್ಶನ ಆಗಿದೆ. ಜತೆಗೆ 36 ಅರ್ಧ ಶತಕ ಸಿಡಿಸಿದ್ದಾರೆ.
(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net