ಟಿ-20 ವಿಶ್ವಕಪ್​ನಲ್ಲಿ ವಿರಾಟ್ ಬ್ಯಾಟಿಂಗ್ ನೋಡಿ ಭಯವಾಗುತ್ತಿದೆ; ಕೊಹ್ಲಿಯನ್ನು ಶ್ಲಾಘಿಸಿದ ಆಸ್ಟ್ರೇಲಿಯಾದ ಮಾಜಿ ಆಟಗಾರ

King Kohli
Published on

ಮೆಲ್ಬೋರ್ನ್​: ವಿರಾಟ್ ಕೊಹ್ಲಿ ಶತಕ ಸಿಡಿಸುತ್ತಿಲ್ಲ. ಕೊಹ್ಲಿ ಬ್ಯಾಟ್ ಮಂಕಾಗಿದೆ, ಕಳಪೆ ಫಾರ್ಮ್​ನಲ್ಲಿದ್ದಾರೆ. ಟಿ-20 ಕ್ರಿಕೆಟ್​​ನಲ್ಲಿ ವಿರಾಟ್ ಆಡದಿರುವುದೇ ಒಳಿತು... ಎಂದೆಲ್ಲಾ ತಮ್ಮದೇ ಶೈಲಿಯಲ್ಲಿ ವಿಮರ್ಶಿಸಿ ಕೊಹ್ಲಿಯನ್ನು ಟೀಕಿಸುತ್ತಿದ್ದವರು ಅನೇಕರು. ಹಿರಿಯ ಆಟಗಾರರಿಂದ ಹಿಡಿದು ಅನೇಕರು ಕಳೆದ ಎರಡು ವರ್ಷದಿಂದ ವಿರಾಟ್ ಫಾರ್ಮ್​ ಬಗ್ಗೆ ವಿಮರ್ಶಿಸುತ್ತಿದ್ದರು.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಕೊಹ್ಲಿ, ಟೀಕೆಗಳಿಗೆ ಉತ್ತರಿಸುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 82 ರನ್ ಸಿಡಿಸಿ, ನನ್ನ ಆಟ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದರು. ನಂತರ ನೆದರ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮುಂಚಿದರು. ಸದ್ಯ ಮೂರು ಅರ್ಧಶತಕದ ನೆರವಿನಿಂದ ಟೂರ್ನಿಯಲ್ಲಿ 220 ರನ್ ದಾಖಲಿಸಿ ಅಧಿಕ ರನ್ ಸ್ಕೋರರ್ ಆಗಿದ್ದಾರೆ. ಜತೆಗೆ ಟಿ-20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್ ದಾಖಲಿಸಿದವರಲ್ಲಿ ಕೊಹ್ಲಿ ಮೊದಲಿಗರಾಗಿದ್ದಾರೆ.

ಇದೀಗ ವಿರಾಟ್ ಕೊಹ್ಲಿಯ ಟಿ-20 ವಿಶ್ವಕಪ್ ಬ್ಯಾಟಿಂಗ್ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾಟ್ಸನ್ ಮಾತನಾಡಿದ್ದಾರೆ. ನನಗೆ ಕೊಹ್ಲಿಯ ಆಟ ಬ್ಯಾಟಿಂಗ್ ನೋಡುತ್ತಿದ್ದರೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.

ಟಿ-20 ವಿಶ್ವಕಪ್ ಆಡುವ ಸಂದರ್ಭದಲ್ಲಿ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಅತಿಯಾದ ಒತ್ತಡದಲ್ಲಿ ಆಡುವುದು ಸವಾಲಿನ ಕೆಲಸ. ಆದರೆ ವಿರಾಟ್ ಕೊಹ್ಲಿ ಮಾತ್ರ ಅದ್ಭುತ ನಿರ್ವಹಣೆ ತೋರಿಸುತ್ತಿದ್ದಾರೆ. ಅದರಲ್ಲೂ ಟಿ-20 ವಿಶ್ವಕಪ್​ನಲ್ಲಿ ಅಧಿಕ ರನ್ ಸಿಡಿಸಿದ್ದಾರೆ. ಕೊಹ್ಲಿಯ ಅಂಕಿಅಂಶಗಳನ್ನು ಗಮನಿಸಿದಾಗ ಸಂತಸವಾಗುತ್ತದೆ ಎಂದು ಖಾಸಗಿ ಸಂದರ್ಶನದಲ್ಲಿ ಶೇನ್ ವಾಟ್ಸನ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net