More

  ಬಾಬರ್​ನನ್ನು ಸಚಿನ್​ ಅವರೊಂದಿಗೆ ಹೋಲಿಸಬೇಡಿ; ಪಾಕ್​ ಕ್ರಿಕೆಟ್ ತಜ್ಞ ಹೀಗಂದಿದ್ಯಾಕೆ

  ನವದೆಹಲಿ: ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರು ಹಾಗೂ ಸೇನೆ ಅಧಿಕಾರಿಗಳು ಭಾರತದ ಬಗ್ಗೆ ಹೇಳಿಕೆಗಳನ್ನು ನೀಡಿ ಟ್ರೋಲ್​ ಆಗುತ್ತಿರುವುದು ಹೊಸ ವಿಚಾರವೇನಲ್ಲ.

  ಇದೀಗ ಪಾಕಿಸ್ತಾನ ಮೂಲದ ಯೂಟ್ಯೂಬರ್ ಮತ್ತು ಕ್ರಿಕೆಟ್ ತಜ್ಞ ಒಬ್ಬ ಕ್ರಿಕೆಟ್​ ದಿಗ್ಗಜ, ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​ ಕುರಿತು ಮಾತನಾಡುವ ಮೂಲಕ ಸುದ್ದಿಯಾಗಿದ್ದು, ಈತ ಎಲ್ಲರ ಗಮನ ಸೆಳೆದಿದ್ದಾನೆ.

  ಇದನ್ನೂ ಓದಿ: ಮಗು ಹೆರಬೇಕೆಂದರೆ ತಿಂಗಳಿಗೆ 2.5 ಕೋಟಿ ರೂ. ಕೊಡು ಎಂದು ಡಿಮ್ಯಾಂಡ್​ ಮಾಡಿದ ಪತ್ನಿ

  ಖಾಸಗಿ ಸುದ್ದಿ ವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿದ ವಸೇ ಹಬೀಬ್ ಮಾತನಾಡುವ ವೇಲೆ ನಿರೂಪಕಿ ಸಚಿನ್​ ತೆಂಡುಲ್ಕರ್ ಹಾಗೂ ಬಾಬರ್​ ಆಜಂ ನಡುವೆ ಹೋಲಿಕೆ ಮಾಡಿ ಮಾತನಾಡಿದರು. ಈ ವೇಳೆ ಇದಕ್ಕೆ ಆಕ್ಷೇಪಿಸಿದ ಹಬೀಬ್​ ನೀವು ಯಾರ ಜೊತೆ ಯಾರನ್ನೂ ಹೋಲಿಕೆ ಮಾಡುತ್ತಿದ್ದೀರಾ. ಸಚಿನ್​ ತೆಂಡುಲ್ಕರ್ ಒಬ್ಬ ಲೆಜೆಂಡರಿ ಆಟಗಾರ ಅವರನ್ನು ಬಾಬರ್​ ಅಜಂನೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

  ಜನರು ಮೊದಲು ಬಾಬರ್ ಆಜಂನನ್ನು ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಅವರೊಂದಿಗೆ ಹೋಲಿಸುತ್ತಿದ್ದರು. ಈಗ ನೀವು ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಕ್ರಿಕೆಟಿಗನೊಂದಿಗೆ ಹೋಲಿಸುತ್ತಿದ್ದೀರಿ. ನೀವು ಎಂದಾದರು ಸಚಿನ್ ಆಟವನ್ನು ನೋಡಿದ್ದೀರಾ ಇಂತಹ ಪ್ರಶ್ನೆಯನ್ನು ನನಗೆ ಕೇಳಬೇಡಿ. ನಾನು ಒಬ್ಬ ಕ್ರಿಕೆಟ್ ಅಭಿಮಾನಿ. ಇಂತಹ ಪ್ರಶ್ನೆಗಳನ್ನು ನನ್ನ ಬಳಿ ಕೇಳಬೇಡಿ. ನಾನು ಸಹ ಬಾಬರ್ ಆಜಂ ಅವರನ್ನು ಇಷ್ಟಪಡುತ್ತೇನೆ. ಆತ ಪಾಕಿಸ್ತಾನ್ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಆದರೆ ಇಂತಹ ಹೋಲಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿರೂಪಕಿಯನ್ನು ಹಬೀಬ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts