More

    ಸಂದೇಶ್​ಖಾಲಿ ಪ್ರಕರಣ; ಪ್ರಧಾನಿ ಮೋದಿ ಭೇಟಿ ಬಳಿಕ ಸಂತ್ರಸ್ತರು ಹೇಳಿದ್ದೇನು?

    ಕಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ನ ಪ್ರಭಾವಿ ನಾಯಕ ಶೇಖ್​ ಶಹಜಹಾನ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಸಂದೇಶ್​ಖಾಲಿಯ ಸಂತ್ರಸ್ತರನ್ನು ಪ್ರಧಾನಿ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಬಾರಾಸತ್‌ನಲ್ಲಿ ನಡೆದ ‘ನಾರಿ ಶಕ್ತಿ ವಂದನ ಅಭಿನಂದನ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಂತ್ರಸ್ತ ಮಹಿಳೆಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಪ್ರಧಾನಿ ಮೋದಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಂತ್ರಸ್ತ ಮಹಿಳೆ, ನಮ್ಮನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ. ನಾವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿ ಬಳಿ ಬಹಿರಂಗವಾಗಿ ಹೇಳಿದ್ದೇವೆ. ನಮ್ಮ ಮಾತುಗಳನ್ನು ಆಲಿಸಿದ ಪ್ರಧಾನಿ ಮೋದಿ ಸಹಾಯ ಮಾಡುವ ಭರವಸೆ ನೀಡಿದರು.

    ಇದನ್ನೂ ಓದಿ: ಸನಾತನ ಧರ್ಮದ ಕುರಿತು ಹೇಳಿಕೆ; ಸಚಿವ ಉದಯನಿಧಿ ಸ್ಟಾಲಿನ್​ಗೆ ರಿಲೀಫ್​ ನೀಡಿದ ಹೈಕೋರ್ಟ್​

    ನಾವು ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಅವರು ನಮ್ಮೊಂದಿಗೆ ಮಾತನಾಡದೆ ಅವಮಾನಿಸಿದ್ದಾರೆ. ರಾಜ್ಯದಲ್ಲಿ ಟಿಎಂಸಿ ಸರ್ಕಾರದ ಮೇಲೆ ನಂಬಿಕೆಯಿಲ್ಲದ ಕಾರಣ ಕೇಂದ್ರದ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಮೋದಿ ಬಳಿ ವಿನಂತಿಸಿದ್ದೇವೆ. ನಮಗೆ ಅವರ ಮೇಲೆ ಭರವಸೆ ಇದೆ. ಟಿಎಂಸಿಯ ನಾಯಕ ಶಹಜಹಾನ್‌ ಶೇಖ್‌ ಮತ್ತು ಆತನ ಬೆಂಬಲಿಗರ ಗುಂಪು ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ಇದರೊಟ್ಟಿಗೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪ್ರಧಾನಿ ಮೋದಿ ಭೇಟಿ ಬಳಿಕ ಆರೋಪಿಸಿದ್ದಾರೆ.

    ಫೆಬ್ರವರಿ 29ರಂದು ಟಿಎಂಸಿ ನಾಯಕ ಶಹಜಹಾನ್​ ಅವರನ್ನು ಬಂಧಿಸಿರುವ ಪೊಲೀಸರು ಕಲ್ಕತ್ತಾ ಹೈಕೋರ್ಟ್​ ಆದೇಶದ ಬಳಿಕ ಮಂಗಳವಾರ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದಾರೆ. ಟಿಎಂಸಿ ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಿದೆ. ಹಲವಾರು ಗ್ರಾಮಸ್ಥರು ಶಹಜಹಾನ್​ ಮತ್ತು ಅವನ ಸಹಚರರಿಂದ ಭೂಕಬಳಿಕೆ ಆರೋಪ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts