More

    ಮಗು ಹೆರಬೇಕೆಂದರೆ ತಿಂಗಳಿಗೆ 2.5 ಕೋಟಿ ರೂ. ಕೊಡು ಎಂದು ಡಿಮ್ಯಾಂಡ್​ ಮಾಡಿದ ಪತ್ನಿ

    ನವದೆಹಲಿ: ಮದುವೆಯಾದ ಮೇಲೆ ಮಕ್ಕಳನ್ನು ಮಾಡಿಕೊಳ್ಳುವುದು ಪತಿ ಹಾಗೂ ಪತ್ನಿ ನಡುವಿನ ವೈಯಕ್ತಿಕ ವಿಚಾರಕ್ಕೆ ಬಿಟ್ಟದ್ದು. ಆದರೆ, ಚಿಕ್ಕ ಮಕ್ಕಳ ಪಾಲನೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗಲೇ ಮಹಿಳೆಯೊಬ್ಬರು ತಾನು ಹೆರಬೇಕಾದರೆ ತಿಂಗಳಿಗೆ 2.5 ಕೋಟಿ ರೂಪಾಯಿ ನೀಡಬೇಕೆಂದು ಪತಿಯ ಬಳಿ ಬೇಡಿಕೆ ಇಟ್ಟಿರುವ ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ.

    ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಹೆರವುದು ಕೂಡ ಒಂದು ವ್ಯವಹಾರ ಆಗಿಬಿಟ್ಟಿದೆ. ಮಕ್ಕಳಾಗದವರು, ಶ್ರೀಮಂತರು, ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುವುದು ಸಾಮಾನ್ಯ ಎನಿಸಿದೆ. ಆದರೆ ಐಷಾರಾಮಿ ಜೀವನಕ್ಕೆ ಹೆಸರಾದ ದುಬೈನಲ್ಲಿ ಶ್ರೀಮಂತ ವ್ಯಕ್ತಿಯೊರ್ವನ ಪತ್ನಿಯೇ ತಾನು ಗರ್ಭಿಣಿಯಾಗಿ ಮಗುವನ್ನು ಹೆರಬೇಕಾದರೆ ತಿಂಗಳಿಗೆ 2.5 ಕೋಟಿ ಹಣ ನೀಡಬೇಕು ಎಂದು ಗಂಡನಿಗೆ ಬೇಡಿಕೆ ಇರಿಸಿದ್ದಾಳೆ.  

    ದುಬೈನ ಖ್ಯಾತ ಮಿಲೇನಿಯರ್​ನ ಪತ್ನಿ ಒಬ್ಬಳು ಈ ರೀತಿಯ ಬೇಡಿಕೆಯನ್ನು ಇಟ್ಟಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿರುವ ಸೂದಿ ಎಂಬ ಮಹಿಳೆ ಮಗುವನ್ನು ಹೆರಬೇಕಾದರೆ ತಿಂಗಳಿಗೆ 2.5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದು, ಇದರ ಹೊರತಾಗಿ ಹೊಸ ಕಾರು ಮತ್ತು ಅದೇ ಬಣ್ಣದ ಹರ್ಮ್ಸ್ ಬಿರ್ಕಿನ್ ಹ್ಯಾಂಡ್‌ಬ್ಯಾಗ್ ನೀಡುವಂತೆ ಬೇಡಿಕೆ ಇರಿಸಿರುವುದಾಗಿ ತಿಳಿದು ಬಂದಿದೆ.

    ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಸೂದಿ, ನಾನು ಗರ್ಭಿಣಿಯಾಗುವುದಕ್ಕೂ ಮೊದಲು ನನ್ನ ಪತಿ ಜೊತೆ ಚರ್ಚೆ ನಡೆಸಿದ ವಿಚಾರವಿದು. ನಾನು ನೇರವಾಗಿ ನಿಮ್ಮ ಬಳಿ ವಿಚಾರ ಹಂಚಿಕೊಳ್ಳುತ್ತೇನೆ. ನಾನು ಉಚಿತವಾಗಿ ನನ್ನ ದೇಹವನ್ನು ಅಷ್ಟೊಂದು ನೋವಿಗೆ ಒಡ್ಡಿಕೊಳ್ಳುವ ಮಾತೇ ಇಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ಒಂದು ವೇಳೆ ಮಗು ಗಂಡಾದರೆ ನೀಲಿ ಬಣ್ಣದ ಐಷಾರಾಮಿ ಬಿರ್ಕಿನ್ ಬ್ಯಾಗ್ ಹಾಗೂ ಹೆಣ್ಣು ಮಗುವಾದರೆ ಪಿಂಕ್ ಬಣ್ಣದ ಬಿರ್ಕಿನ್ ಬ್ಯಾಗ್ ನೀಡಬೇಕು ಎಂದು ಕೇಳಿದ್ದೇನೆ.

    Dubai Sodhi

    ಇದನ್ನೂ ಓದಿ: ಏಕಾಏಕಿ ಕಚೇರಿಯೊಳಗೆ ನುಗ್ಗಿದ ಚಿರತೆ; ಬಾಲಕನ ಸಮಯಪ್ರಜ್ಞೆಯಿಂದ ತಪ್ಪಿತ್ತು ಭಾರೀ ಅವಾಂತರ

    ಇದರ ಜೊತೆಗೆ ಮಗುವಿನ ಡೆಲಿವರಿ ಟೈಮ್‌ನಲ್ಲಿ ಆಕೆಯ ಜೊತೆಗೆ ಮೇಕಪ್ ಟೀಮ್ ಹಾಗೂ ಕೇಶ ವಿನ್ಯಾಶಕರ ಟೀಮ್ ಕೂಡ ಬೇಕು ಎಂದು ಆಕೆ ಕೇಳಿದ್ದಾಳೆ. ಅಲ್ಲದೇ ತನ್ನ ಒಳ್ಳೆಯ ದಿನಕ್ಕಾಗಿ  ತುಂಬಾ ಚೆನ್ನಾಗಿ ತಾನು ಕಾಣಿಸಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ಇದರ ಜೊತೆ ತಿಂಗಳಿಗೆ 2.5 ಕೋಟಿ ರೂಪಾಯಿ ವೇತನ ನೀಡಬೇಕು ಇದು ಮಗುವಿನ ಮೂಲ ಅಗತ್ಯಗಳಿಗಾಗಿ ಬಳಕೆಯಾಗುತ್ತದೆ. ಒಂದು ವೇಳೆ ಇಬ್ಬರು ಮಕ್ಕಳಾದರೆ ಈ ಮೊತ್ತ ಡಬ್ಬಲ್ ಆಗುವುದು ಎಂದು ಆಕೆ ಹೇಳಿದ್ದಾಳೆ.

    ಅಲ್ಲದೇ ಮಗುವಾದ ಸಮಯದಲ್ಲಿ ತನ್ನ ನಿದ್ದೆ ಹಾಳಾಗಬಾರದು ಎಂದು ಮನೆಯ ಕೆಲಸದಾಳುಗಳನ್ನು ಹೆಚ್ಚಳ ಮಾಡಬೇಕು ರಾತ್ರಿ ಮಗುವನ್ನು ನೋಡಿಕೊಳ್ಳಲು ನರ್ಸ್ ಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ಬಾಣಾಂತನದ ಸಮಯದಲ್ಲಿ ಪತಿ ಜಮಾಲ್ ಸಂಪೂರ್ಣ ತಾಯಿಯ ಹೊಣೆ ಹೊರಬೇಕು ಹೀಗೆ ಹೇಳುತ್ತಾ ಹೋಗಿದ್ದು, ಆಕೆಯ ಬೇಡಿಕೆಯ ಸರಣಿ ಮುಂದುವರೆದಿದೆ. 

    ಈ ಎಲ್ಲಾ ವಿಚಾರಗಳನ್ನು ತಾನು ವಿವಾಹಕ್ಕೂ ಮೊದಲು ಪತಿ ಜಮಾಲ್ ಜೊತೆ ಚರ್ಚಿಸಿದ್ದಾಗಿ ಆಕೆ ಹೇಳಿದ್ದಾಳೆ. ಆದರೆ ಈಕೆಯ ಈ ಬೇಡಿಕೆ ಕೇಳಿ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ. ಕೆಲವರು ಇದೊಂದು ಜೋಕ್ ಎಂದರೆ ಮತ್ತೆ ಕೆಲವರು ಅಮ್ಮನಾಗುವುದು ಸುಲಭವಲ್ಲ ಎಂದು ನೆಟ್ಟಿಗರು ಆಕೆಯ ಪೋಸ್ಟ್​ಗೆ ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts