More

    ಏಕಾಏಕಿ ಕಚೇರಿಯೊಳಗೆ ನುಗ್ಗಿದ ಚಿರತೆ; ಬಾಲಕನ ಸಮಯಪ್ರಜ್ಞೆಯಿಂದ ತಪ್ಪಿತ್ತು ಭಾರೀ ಅವಾಂತರ

    ನಾಸಿಕ್: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದೀಗ ಚಿರತೆಯೊಂದು ಆಹಾರ ಅರಸಿ ಬಂಧಿಯಾದ ಘಟನೆ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯ ಮಾಲೆಗಾಂವ್ ನಗರದಲ್ಲಿ ನಡೆದಿದೆ.

    ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಬಾಲಕನ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ್ದಾರೆ.

    ನಾಸಿಕ್​ ಜಿಲ್ಲೆಯ ಮಾಲೆಗಾಂವ್-ನಂಪುರ್ ರಸ್ತೆಯಲ್ಲಿರುವ ಸಾಯಿ ಸೆಲೆಬ್ರೇಷನ್ ಮದುವೆ ಮಂಟಪದಲ್ಲಿ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದ್ದು, ಈ ವೇಳೆ ಮಂಟಪದ ಬುಕಿಂಗ್ ರೂಮಿನಲ್ಲಿ ಬಾಲಕ ಮೊಬೈಲ್​​ನಲ್ಲಿ ಆಟವಾಡುತ್ತಿರುವುದನ್ನುವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ವಲ್ಪ ಹೊತ್ತಿನಲ್ಲಿ ಚಿರತೆ ಕಚೇರಿಯ ಒಳಗೆ ಪ್ರವೇಶಿಸುತ್ತದೆ, ಇದನ್ನು ಗಮನಿಸಿದ ಬಾಲಕ ಕೂಡಲೇ ಚಿರತೆಯನ್ನು ಕೊಠಡಿಯೊಳಗೆ ಕೂಡಿಹಾಕಿ ಹೊರಹೋಗುವುದನ್ನು ನೋಡಬಹುದಾಗಿದೆ.

    ಇದನ್ನೂ ಓದಿ: ಕರಿಮಣಿ ಮಾಲೀಕ ಯಾರೆಂದು ರಿವೀಲ್​ ಮಾಡಿದ ದೀಪಿಕಾ ದಾಸ್; ಸೀಕ್ರೆಟ್​ ಮದುವೆಗೆ ಕಾರಣ ಹೀಗಿದೆ

    ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕ ಮೋಹಿತ್ ಅಹಿರೆ, ಚಿರತೆ ತುಂಬಾ ಹತ್ತಿರದಲ್ಲಿತ್ತು. ನನ್ನ ಮುಂದೆಯೇ ಕ್ಯಾಬಿನ್‌ಗೆ ಕಾಲಿಟ್ಟಿದ್ದನ್ನು ಕಂಡು ನನಗೆ ಭಯವಾಯಿತು, ಆದರೆ ನಾನು ಸದ್ದಿಲ್ಲದೆ ಸೋಫಾದಿಂದ ಇಳಿದು ಹೊರಗೆ ಓಡಿ ಬಾಗಿಲು ಮುಚ್ಚಿದೆ. ಆ ನಂತರ ಪೋಷಕರಿಗೆ ತಿಳಿಸಿದೆ ಎಂದು ಬಾಲಕ ಮೋಹಿತ್​ ಅಹಿರೆ ಮಾಧ್ಯಮಗಳಿಗೆ ಹೇಳಿದ್ದಾನೆ.

    ಇತ್ತ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಅದರ ಪ್ರಜ್ಞೆ ತಪ್ಪಿಸಿ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಬಾಲಕನ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದ್ದು, ಆತನ ಧೈರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts