More

    ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರ ನಿರ್ಣಯದ ಮೇರೆಗೆ ಸ್ಪರ್ಧೆ

    ಬಾದಾಮಿ: ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರ ನಿರ್ಣಯದ ಮೇರೆಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸಂಯುಕ್ತಾ ಪಾಟೀಲ ಹೇಳಿದರು.

    ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಬಾದಾಮಿ ಕಾಂಗ್ರೆಸ್ ಬೂತ್ ಮಟ್ಟದ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಶನಿವಾರ ಅವರು ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ರಿಸ್ಪಾನ್ಸ್ ನೀವೇ ನೋಡ್ತಿದಿರಿ. ರಿಸ್ಪಾನ್ಸ್ ನನಗಲ್ಲ ಪಕ್ಷಕ್ಕೆ ಅಂತ ನಾ ನಂಬಿದಿನಿ. ಪಕ್ಷದ ನಾಯಕರು ಹಿರಿಯರು ಮಾಡಿದ ಕಾರ್ಯಕ್ಕೆ ಒಳ್ಳೆಯ ರಿಸ್ಪಾನ್ಸ್ ಸಿಗುತ್ತಿದೆ ಎಂದರು.

    ವೀಣಾ ಕಾಶಪ್ಪನವರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಖಂಡಿತವಾಗಿ ನಾನು ಅವರನ್ನು ಭೇಟಿ ಆಗ್ತಿನಿ. ನಮ್ಮ ಶಾಸಕರು, ಹಿರಿಯರು ಎಲ್ಲರೂ ಅವರ ಸಂಪರ್ಕದಲ್ಲಿದ್ದಾರೆ. ಅವರು ನಮ್ಮ ಪಕ್ಷದ ಕುಟುಂಬದವರು. ಅವರು ನಿರಂತರವಾಗಿ ಕಾಂಗ್ರೆಸ್ಸಿಗರಾಗಿ ಉಳಿದಿದ್ದಾರೆ. ಅವರು ಯಾವತ್ತಿದ್ದರೂ ಪಕ್ಷದ ಹಿತದೃಷ್ಟಿಯಿಂದಲೇ ನಿರ್ಧಾರ ಕೈಗೊಳ್ಳುತ್ತಾರೆ. ಅಕ್ಕಾ (ವೀಣಾ) ಯಾವತ್ತು ಹಾರ್ಡ್ ವಕಿರ್ಂಗ್. ಅವರು ನಿರಂತರವಾಗಿ ಪಕ್ಷಕ್ಕೋಸ್ಕರ, ಜನರಿಗೋಸ್ಕರ ಶ್ರಮ ಪಟ್ಟಿದ್ದಾರೆ. ಆದರೆ ಏನೇ ಆಗಲಿ ವೀಣಾ ಅವರಿಗೆ ಪಕ್ಷದಲ್ಲಿ ದೊಡ್ಡ ಭವಿಷ್ಯವಿದೆ. ಅವರು ನಮ್ಮವರು, ಅವರನ್ನು ಯಾವತ್ತಿದ್ದರೂ ಬಿಟ್ಟು ಕೊಡೋದಿಲ್ಲ. ಅವರ ವಿಶ್ವಾಸ ತೆಗೆದುಕೊಳ್ಳದೆ ಹೇಗೆ ಎಲೆಕ್ಷನ್ ಮಾಡೋಕೆ ಆಗುತ್ತದೆ ಎಂದರು.

    ಶಿವಾನಂದ ಪಾಟೀಲ ಅವರು ನಮಗೆ ಧಮಕಿ ಹಾಕ್ತಿದಾರೆ ಎಂದು ವಿಜಯಾನಂದ ಕಾಶಪ್ಪನವರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲ ಇಲ್ಲ ನಾವು ಯಾರಿಗೂ ಧಮಕಿ ಹಾಕ್ತಿಲ್ಲ. ಟಿಕೆಟ್ ತಪ್ಪಿದ ಸಂದರ್ಭದಲ್ಲಿ ದುಃಖ ಆಗಿರುತ್ತದೆ ಅದು ಬಹಳ ಸಹಜ. ಅವರು ನಮ್ಮ ಕುಟುಂಬವರು, ಇವತ್ತಲ್ಲ ನಾಳೆ ಅವರಿಗೆ ಮನವೊಲಿಸ್ತಿವಿ. ಪರಜಿಲ್ಲೆ ಆರೋಪಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷ ಯಾರಿಗೆ ಜವಾಬ್ದಾರಿ ಕೊಡುತ್ತದೋ ಅದನ್ನು ನಿಷ್ಟಾವಂತರಾಗಿ ನಿಭಾಯಿಸಬೇಕು ಎಂದರು.

    ಬಾಗಲಕೋಟೆ ಕ್ಷೇತ್ರ ಪವರ್‌ಪುಲ್ ಕ್ಷೇತ್ರ. ಕ್ಷೇತ್ರದಲ್ಲಿ ಉನ್ನತ ವ್ಯಕ್ತಿಗಳು ಆಯ್ಕೆಯಾಗಿದ್ದಾರೆ. ನನ್ನ ಸುದೈವ ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ. ವೀಣಾ ಅವರಿಗೂ ಮುಂದೆ ದೊಡ್ಡ ಭವಿಷ್ಯವಿದೆ. ನಾವೆಲ್ಲರೂ ಸೇರಿ ಅವರಿಗೆ ಆಗ ಸಹಕರಿಸುತ್ತೇವೆ. ನನ್ನ ರಾಜಕೀಯದ ಭಾಗ್ಯದ ಬಾಗಿಲು ತೆರೆಯುತ್ತದೆ. ನಾನು 1994 ರಲ್ಲಿ ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೀನಿ. ನಾನು ಎಲ್ಲರಿಗಿಂತ ಸ್ಟ್ರಾಂಗ್ ಇದ್ದೀನಿ ಎಂದರು.

    1994 ರಲ್ಲಿ ನಮ್ಮ ತಂದೆ ಮೊದಲಬಾರಿಗೆ ಶಾಸಕರಾದರು. ನಾನು ಈಗ ಇಲ್ಲಿದೆ ಬಂದಿನಿ ಅಂದರೆ ಆ ಯೋಗವನ್ನು ಬಾಗಲಕೋಟೆಗೆ ತಂದು ಕೊಡ್ತೀನಿ. ಎಲ್ಲ ಅಸಮಾಧಾನವನ್ನು ಹೈಕಮಾಂಡ್ ಸರಿ ಮಾಡುತ್ತದೆ. ಸಾವಿರಾರು ಜನ, ಲಕ್ಷಾಂತರ ಜನ ಇರುವ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಹಜ. ಅಕ್ಕ ನಮ್ಮವರು ಅವರನ್ನು ನಾವು ಬಿಟ್ಟು ಕೊಡೋದಿಲ್ಲ ಎಂದರು.

    ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಮುಖಂಡ ಶಿವಾನಂದ ಕುಳಗೇರಿ, ಮಹಾಂತೇಶ ಹಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts