More

    ನಾಯಕನಾಗಿ ಶುಭಮಾನ್ ಗಿಲ್ ಜಯದ ಆರಂಭ: ಹಾರ್ದಿಕ್ ಪಾಂಡ್ಯಗೆ ಮುಖಭಂಗ

    ಅಹಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಹಾಲಿ ರನ್ನರ್‌ಅಪ್ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ 6 ರನ್‌ಗಳಿಂದ ಸೋಲುಣಿಸಿದೆ. ಇದರೊಂದಿಗೆ ಮುಂಬೈ ನಾಯಕರಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಮಾಜಿ ತಂಡದ ಎದುರು ಮುಖಭಂಗ ಎದುರಿಸಿದರು. ಇದರೊಂದಿಗೆ ಟೂರ್ನಿಯ ಆರಂಭಿಕ 5 ಪಂದ್ಯಗಳಲ್ಲೂ ಆತಿಥೇಯ ತಂಡವೇ ಗೆಲುವು ಸಾಧಿಸಿದಂತಾಗಿದೆ.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್, ವೇಗಿ ಜಸ್‌ಪ್ರೀತ್ ಬುಮ್ರಾ (12ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ (45 ರನ್, 39 ಎಸೆತ, 3 ಬೌಂಡರಿ, 1 ಸಿಕ್ಸರ್) ಆಸರೆಯಲ್ಲಿ 6 ವಿಕೆಟ್‌ಗೆ 168 ರನ್ ಕಲೆಹಾಕಿತು. ಪ್ರತಿಯಾಗಿ ಚೇಸಿಂಗ್‌ನಲ್ಲಿ ರೋಹಿತ್ ಶರ್ಮ (43) ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಡಿವಾಲ್ಡ್ ಬ್ರೆವಿಸ್ (46) ಪ್ರತಿರೋಧದ ಹೊರತಾಗಿಯೂ ಮುಂಬೈ 9 ವಿಕೆಟ್‌ಗೆ 162 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಆರಂಭಿಕ ಇಶಾನ್ ಕಿಶನ್ (0), ನಮನ್ ಧೀರ್ (20) ವಿಕೆಟ್ ಬೇಗನೆ ಕಳೆದುಕೊಂಡ ಮುಂಬೈಗೆ ರೋಹಿತ್ ಶರ್ಮ (43) ಹಾಗೂ ಡಿವಾಲ್ಡ್ ಬ್ರೆವಿಸ್ ಆಸರೆಯಾದರು. ಇವರಿಬ್ಬರು 4ನೇ ವಿಕೆಟ್‌ಗೆ 55 ಎಸೆತದಲ್ಲಿ 77 ರನ್‌ಗಳಿಸಿ ಬಲ ತುಂಬಿದರು. ಇವರಿಬ್ಬರ ವಿಕೆಟ್ ಪಡೆದ ಗುಜರಾತ್ ಕಂಬ್ಯಾಕ್ ಮಾಡಿತು. 12 ಎಸೆತದಲ್ಲಿ 27 ರನ್ ಅಗತ್ಯದ್ದಾಗ ತಿಲಕ್ ವರ್ಮ (25) ಹಾಗೂ ಹಾರ್ದಿಕ್ ಪಾಂಡ್ಯ (11) ಗೆಲುವಿನ ದಡ ಸೇರಿಸುವಲ್ಲಿ ವಿಲರಾದರು. ಅಂತಿಮ ಓವರ್‌ನಲ್ಲಿ 19 ರನ್ ಅಗತ್ಯವಿದ್ದಾಗ ಮೊದಲೆರಡು ಎಸೆತವನ್ನು ಸಿಕ್ಸರ್, ಬೌಂಡರಿಗೆ ಅಟ್ಟಿದ ಪಾಂಡ್ಯ ಮರು ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮುಂಬೈ ಗೆಲುವಿನ ಆಸೆ ಕೈಚೆಲ್ಲಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts