More

    ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಯುಕ್ತಾ ಪಾಟೀಲ ಭೇಟಿ

    ಮಹಾಲಿಂಗಪುರ: ಸಿದ್ದರಾಮಯ್ಯ ಸರ್ಕಾರ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಚಾಚೂ ತಪ್ಪದೆ ಜಾರಿಗೆ ತಂದಿದ್ದು, ಪದವೀಧರರು, ನಿರುದ್ಯೋಗಿಗಳು, ರೈತರು, ಬಡವರು ಹಾಗೂ ಮಹಿಳೆಯರಿಗೆ ವರದಾನವಾಗಿವೆ ಎಂದು ಬಾಗಲಕೋಟೆ ಲೋಕಸಭಾ ಚುನಾವಣೆಯ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

    ಸ್ಥಳೀಯ ಗುರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಶನಿವಾರ ಭೇಟಿ ನೀಡಿ ಮಹಾಲಿಂಗೇಶ್ವರ ಶ್ರೀಗಳ ಆಶೀರ್ವಾದ ಪಡೆದ ನಂತರ ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಕಾಂಗ್ರೆಸ್ ಪಕ್ಷ ನನ್ನಲ್ಲಿರುವ ಕ್ರಿಯಾಶೀಲತೆಯನ್ನು ಪರಿಗಣಿಸಿ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಆದ್ದರಿಂದ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಅಣತಿಯಂತೆ ಕಾರ್ಯ ನಿರ್ವಹಿಸುತ್ತೇನೆ. ನಮ್ಮಲ್ಲಿ ಯಾವುದೇ ತಾರತಮ್ಯವಿಲ್ಲ. ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ. ನಾನು ನಿಮ್ಮ ಮನೆ ಮಗಳೆಂದು ಆಶೀರ್ವಾದ ಮಾಡಿ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದೇನೆ ಎಂದರು.

    ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ವೇದಾ ಬಿಳ್ಳೂರ, ಯಲ್ಲನಗೌಡ ಪಾಟೀಲ, ಈಶ್ವರ ಚಮಕೇರಿ, ಲಕ್ಷ್ಮಣ ದೇಸಾರಟ್ಟಿ, ಬಸವರಾಜ ರಾಯರ, ಬಲವಂತಗೌಡ ಪಾಟೀಲ, ಮಲ್ಲಪ್ಪ ಸಿಂಗಾಡಿ, ಸುನೀಲಗೌಡ ಪಾಟೀಲ, ಮಲ್ಲು ಕುಳ್ಳೋಳ್ಳಿ, ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ಚನ್ನು ದೇಸಾಯಿ, ವಿಠ್ಠಲ ಸಂಶಿ, ಸಿದ್ದು ಬೆನ್ನೂರ, ಭೀಮಶಿ ಸಸಾಲಟ್ಟಿ, ಭರಮು ಉಳ್ಳಾಗಡ್ಡಿ, ಮಹಾದೇವ ಕಡಬಲ್ಲವರ, ಅಶೋಕ ಅಂಗಡಿ, ಗಿರೀಶ ಅಂಕಲಗಿ, ವಿಜುಗೌಡ ಪಾಟೀಲ, ಮಹಾಲಿಂಗ ಮಾಳಿ, ಪಾಪಾ ನಾಲಬಂದ, ರಾಜು ಬಗನಾಳ, ಅನೀಲ ದೇಸಾಯಿ, ಸಿದ್ದು ಸಾಂಗಲೀಕರ, ಕೃಷ್ಣಗೌಡ ಪಾಟೀಲ, ಸದುಗೌಡ ಪಾಟೀಲ, ಪ್ರಭು ಮಲಾಬಾದಿ, ಪ್ರಕಾಶ ಉಳ್ಳೇಗಡ್ಡಿ, ವಿನಯ ಹೆಗ್ಗಳಗಿ, ಪರಪ್ಪ ಉರಬಿನ್ನವರ, ಆನಂದ ಬುರುಡ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts