More

    ಸನಾತನ ಧರ್ಮದ ಕುರಿತು ಹೇಳಿಕೆ; ಸಚಿವ ಉದಯನಿಧಿ ಸ್ಟಾಲಿನ್​ಗೆ ರಿಲೀಫ್​ ನೀಡಿದ ಹೈಕೋರ್ಟ್​

    ಚೆನ್ನೈ: ಕಳೆದ ವರ್ಷ ಸನಾತನ ಧರ್ಮಸನಾತನ ಧರ್ಮ ಡೆಂಗ್ಯೂ ಹಾಗೂ ಮಲೇರಿಯಾ ಇದ್ದಂತೆ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿದ್ದ ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ ವಜಾಗೊಳಿಸಿದೆ.

    ಅರ್ಜಿ ವಿಚಾರಣೆ ನಡೆಸಿದ ಅನಿತಾ ಸುಮಂತ್​, ಸಚಿವ ಶೇಖರ್​ ಬಾಬು, ಸಂಸದ ಎ. ರಾಜಾ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದ್ದಾರೆ. ಮೂವರ ವಿರುದ್ಧ ಯಾವುದೇ ಕಾರಣಕ್ಕೂ ಕ್ವೋ ವಾರೆಂಟ್​ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

    Sanatan Trio

    ಇದನ್ನೂ ಓದಿ: ಟೀಮ್​ ಇಂಡಿಯಾ ಮಾಜಿ ಕೋಚ್​ ಮನೆಯಲ್ಲಿ 1 ಕೋಟಿ ರೂ. ನಗದು ಪತ್ತೆ

    ಸನಾತನ ಧರ್ಮವನ್ನು ಎಚ್‌ಐವಿ, ಏಡ್ಸ್, ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿ ನೀಡಿರುವ ಹೇಳಿಕೆಗಳು ವಿಕೃತ, ವಿಭಜಕ, ಸಾಂವಿಧಾನಿಕ ತತ್ವಗಳು ಮತ್ತು ಆಲೋಚನೆಗಳಿಗೆ ವಿರುದ್ಧವಾಗಿವೆ ಮತ್ತು ಸಂಪೂರ್ಣ ತಪ್ಪು ಮಾಹಿತಿಗೆ ಸಮಾನವಾಗಿವೆ. ಸ್ಟಾಲಿನ್‌ ಅವರು ಈ ರೀತಿ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ. ಆದರೆ ಇದುವರೆಗೆ ಯಾವುದೇ ನ್ಯಾಯಾಲಯದಿಂದ ಅವರು ಶಿಕ್ಷೆಗೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿ ನ್ಯಾಯಧೀಶರು ಅರ್ಜಿಯನ್ನು ವಜಾ ಮಾಡಿದ್ದಾರೆ.

    ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಹಿಂದೂ ಮುನ್ನಾನಿ ಸದಸ್ಯರು ಸಚಿವರಾದ ಉದಯನಿಧಿ ಸ್ಟಾಲಿನ್, ಶೇಖರ್ ಬಾಬು ಹಾಗೂ ಸಂಸದ ಎ. ರಾಜಾ ವಿರುದ್ಧ ಕಠಿಣ ಕ್ರಮ ಕಯಗೊಳ್ಳುವಂತೆ ಆಗ್ರಹಿಸಿ ಮದ್ರಾಸ್​ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts