More

    100ನೇ ಟೆಸ್ಟ್​ ಪಂದ್ಯ ಆಡಲಿರುವ ಆರ್​. ಅಶ್ವಿನ್​ ವಿರುದ್ಧ ಗುಡುಗಿದ ಮಾಜಿ ಕ್ರಿಕೆಟಿಗ!

    ನವದೆಹಲಿ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್​ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಲಿದ್ದು, ಈಗಾಗಲೇ ಆಟಗಾರರು ತಯಾರಿ ಆರಂಭಿಸಿದ್ದಾರೆ.

    ಇನ್ನು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆರ್​. ಅಶ್ವಿನ್​ ಎಲ್ಲರ ಗಮನ ಸೆಳೆದಿದ್ದು, ಹಾಲಿ ಹಾಗೂ ಮಾಜಿ ಆಟಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾರ್ಚ್​ 07ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಅಶ್ವಿನ್‌ ತಮ್ಮ ವೃತ್ತಿಬದುಕಿನ 100ನೇ ಟೆಸ್ಟ್‌ ಆಡಲು ಎದುರು ನೋಡುತ್ತಿದ್ದಾರೆ. 

    ಮಹತ್ವದ ಟೆಸ್ಟ್‌ ಆಡಲು ಆರ್‌ ಅಶ್ವಿನ್‌ ಎದುರು ನೋಡುತ್ತಿರುವ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಸ್ಪಿನ್‌ ದಿಗ್ಗಜ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಆರ್​. ಅಶ್ವಿನ್​ ವಿರುದ್ಧ ಕಟುವಾಗಿ ಟೀಕೆ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.

    Capture

    ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣ; ಬಾಂಬರ್ ಸುಳಿವು ನೀಡಿದವರಿಗೆ ಭರ್ಜರಿ ಬಹುಮಾನ ಘೋಷಿಸಿದ NIA

    100ನೇ ಟೆಸ್ಟ್ ಪಂದ್ಯ ಆಡಲು ಎದುರು ನೋಡುತ್ತಿರುವ ಆರ್‌ ಅಶ್ವಿನ್‌ ಅವರಿಗೆ ಕೆಲ ಬಾರಿ ಫೋನ್‌ ಕರೆ ಮಾಡಿದ್ದೇನೆ. ಆತ ನನ್ನ ಕರೆಗಳನ್ನು ಕಟ್‌ ಮಾಡಿದ್ದಷ್ಟೇ ಅಲ್ಲ. ಒಂದು ಸಂದೇಶ ಕೂಡ ಕಳಿಸಿಲ್ಲ. ನಾನೇ ಖುದ್ದಾಗಿ ಕಳಿಸಿದ ಸಂದೇಶಕ್ಕೂ ಆತ ಉತ್ತರ ಬರೆದಿಲ್ಲ. ಮಾಜಿ ಕ್ರಿಕೆಟಿಗರಿಗೆ ಇಂತಹ ಆಟಗಾರರಿಂದ ಸಿಗುವ ಗೌರವ ಇಷ್ಟೇ ನೋಡಿ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ಮಾಜಿ ಕ್ರಿಕೆಟಿಗ ಲಕ್ಷ್ಮಣ್​ ಶಿವರಾಮಕೃಷ್ಣನ್​ ಅವರ ಪೋಸ್ಟ್ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ವೃತ್ತಿಜೀವನದ ಉತ್ತುಂಗದಲ್ಲಿರುವ ಆಟಗಾರನ ಮೇಲೆ ಈ ರೀತಿಯ ಆರೋಪಗಳು ಮಾಡುವುದು ಸಹಜ ಸುಮ್ಮನೆ ಜನರ ಗಮನ ಸೆಳೆಯಲು ಈ ರೀತಿ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದ್ದಾರೆ. ಭಾರತದ ಪರ ಪರ 9 ಟೆಸ್ಟ್‌ ಮತ್ತು 16 ಒಡಿಐ ಪಂದ್ಯಗಳನ್ನು ಆಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts