ಕಿಚ್ಚ ಸುದೀಪ್​ 47ನೇ ಚಿತ್ರಕ್ಕೆ ನಾಯಕಿಯಾದ 'ಕೆಜಿಎಫ್​' ಸುಂದರಿ ಶ್ರೀನಿಧಿ ಶೆಟ್ಟಿ

Srinidhi Shetty (4)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಕೆಜಿಎ್ ಚಾಪ್ಟರ್ 2’ ಹಾಗೂ ‘ಕೋಬ್ರಾ’ ಚಿತ್ರಗಳ ಬಳಿಕ ನಟಿ ಶ್ರೀನಿಧಿ ಶೆಟ್ಟಿ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಇದೀಗ ಒಂದೂವರೆ ವರ್ಷದ ಬಳಿಕ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತೆಲುಗು ನಟ ಸಿದ್ದು ನಾಯಕನಾಗಿರುವ ‘ತೆಲುಸು ಕದ’ ಚಿತ್ರ ಅನೌನ್ಸ್ ಆಗಿತ್ತು. ಆ ಚಿತ್ರದಲ್ಲಿ ರಾಶಿ ಖನ್ನಾ ಮತ್ತು ಶ್ರೀನಿಧಿ ಶೆಟ್ಟಿ ಇಬ್ಬರು ನಾಯಕಿಯರು.

ಅದರ ಬೆನ್ನಲ್ಲೇ ಶನಿವಾರ (ಅ.21) ಶ್ರೀನಿಧಿ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಕಿಚ್ಚ ಸುದೀಪ್ ನಾಯಕನಾಗಿರುವ 47ನೇ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸುದೀಪ್ ಮತ್ತು ತಮಿಳು ನಿರ್ದೇಶಕ ಚೇರನ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ತಮಿಳಿನ ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿದೆ.

ಈ ಹಿಂದೆ ಚೇರನ್ ‘ಆಟೋಗ್ರಾಫ್​’ ಚಿತ್ರ ನಿರ್ದೇಶಿಸಿ, ನಟಿಸಿದ್ದರು. ಸುದೀಪ್ ಅದೇ ಚಿತ್ರವನ್ನು ಕನ್ನಡದಲ್ಲಿ ‘ಮೈ ಆಟೋಗ್ರಾಫ್’ ಟೈಟಲ್‌ನಲ್ಲಿ ನಟಿಸಿ, ನಿರ್ದೇಶಿಸಿದ್ದರು. ಸದ್ಯ ಸುದೀಪ್ ತಮಿಳು ಚಿತ್ರತಂಡದ ಜತೆ ‘ಮ್ಯಾಕ್ಸ್’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಿದ್ದು, ಆ ಬಳಿಕ ‘ಕಿಚ್ಚ 47’ ಸೆಟ್ಟೇರಲಿದೆ ಎನ್ನಲಾಗಿದೆ. ವಿಶೇಷ ಅಂದರೆ ‘ಕಿಚ್ಚ 47’ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net