More

    ಉಪಾಧ್ಯಕ್ಷ ಚಿಕ್ಕಣ್ಣನಿಗೆ ದುನಿಯ ವಿಜಯ್, ನೆನಪಿರಲಿ ಪ್ರೇಮ್, ಅಭಿಷೇಕ್​ ಅಂಬರೀಶ್​, ಪ್ರಥಮ್, ಧನ್ವೀರ್ ಸಾಥ್

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಹಾಸ್ಯ ನಟ ಚಿಕ್ಕಣ್ಣ ನಾಯಕನಾಗಿರುವ, ಅನಿಲ್ ಕುಮಾರ್ ನಿರ್ದೇಶನದ ಚಿತ್ರ ‘ಉಪಾಧ್ಯಕ್ಷ’. 2014ರಲ್ಲಿ ರಿಲೀಸ್ ಆದ ‘ಅಧ್ಯಕ್ಷ’ ಚಿತ್ರದ ಮುಂದುವರಿದ ಭಾಗವಿದು. ಇತ್ತೀಚೆಗಷ್ಟೆ ದುನಿಯಾ ವಿಜಯ್, ‘ನೆನಪಿರಲಿ’ ಪ್ರೇಮ್, ಅಭಿಷೇಕ್ ಅಂಬರೀಶ್, ಧನ್ವೀರ್, ಪ್ರಥಮ್ ಹಾಗೂ ಅದಿತಿ ಪ್ರಭುದೇವ ಚಿತ್ರದ ಟೀಸರ್ ರಿಲೀಸ್ ಮಾಡಿ ‘ಉಪಾಧ್ಯಕ್ಷ’ನಿಗೆ ಶುಭಹಾರೈಸಿದರು.

    ಇದನ್ನೂ ಓದಿ : ಸಿನಿಮಾ ಆಗಲಿದೆ ಪರ್ವ ; ಎಸ್.ಎಲ್. ಭೈರಪ್ಪನವರ ಕಾದಂಬರಿಗೆ ‘ಕಾಶ್ಮೀರ್ ಫೈಲ್ಸ್’ ನಿರ್ದೇಶಕನಿಂದ ಹೊಸ ರೂಪ

    ಉಪಾಧ್ಯಕ್ಷ ಚಿಕ್ಕಣ್ಣನಿಗೆ ದುನಿಯ ವಿಜಯ್, ನೆನಪಿರಲಿ ಪ್ರೇಮ್, ಅಭಿಷೇಕ್​ ಅಂಬರೀಶ್​, ಪ್ರಥಮ್, ಧನ್ವೀರ್ ಸಾಥ್

    ನಾಯಕ ಚಿಕ್ಕಣ್ಣ, ‘ನಾನು 13 ವರ್ಷಗಳಿಂದ ನೋಡಿರದ ಕಷ್ಟವನ್ನು ‘ಉಪಾಧ್ಯಕ್ಷ’ ಚಿತ್ರದ ನಾಯಕನಾದ ಕ್ಷಣದಿಂದ ನೋಡಿದ್ದೇನೆ. ನಾನು ಈ ಸಿನಿಮಾ ಹೀರೋ ಅಂದ ಕೂಡಲೇ ಹಲವಾರು ಮಂದಿ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ. ಜತೆಯಲ್ಲಿ ಇರುವವರೇ ಏನೇನೋ ಮಾತನಾಡಿದ್ದಾರೆ. ತುಂಬ ಶ್ರಮಪಟ್ಟು ಮಾಡಿರುವ ಚಿತ್ರ’ ಎಂದು ಭಾವುಕರಾದರು. ನಿರ್ದೇಶಕ ಅನಿಲ್ ಕುಮಾರ್, ‘ನಾನು ಹೆಚ್ಚೇನೂ ಹೇಳುವುದಿಲ್ಲ. ನನ್ನ ಇಡೀ ತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ’ ಎಂದರು.

    ಇದನ್ನೂ ಓದಿ : ಶಂಕರನ ಟೀಸರ್ ಸಪ್ಲೈ! ನಿಶ್ಚಿತ್ ಕರೋಡಿ, ದೀಪಿಕಾ ಆರಾಧ್ಯ ನಟಿಸಿರುವ ಚಿತ್ರ

    ಉಪಾಧ್ಯಕ್ಷ ಚಿಕ್ಕಣ್ಣನಿಗೆ ದುನಿಯ ವಿಜಯ್, ನೆನಪಿರಲಿ ಪ್ರೇಮ್, ಅಭಿಷೇಕ್​ ಅಂಬರೀಶ್​, ಪ್ರಥಮ್, ಧನ್ವೀರ್ ಸಾಥ್

    ನಾಯಕಿ ಮಲೈಕಾ, ‘ಟೀಸರ್ ನೋಡುವಾಗ ಭಾವುಕಳಾದೆ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಾನು ‘ಉಪಾಧ್ಯಕ್ಷ’ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ’ ಎಂದರು. ಚಿಕ್ಕಣ್ಣ, ಮಲೈಕಾ ಜತೆ ರವಿಶಂಕರ್, ಅರಸು ಮಹಾರಾಜ್, ಕರಿ ಸುಬ್ಬು, ಸಾಧು ಕೋಕಿಲ, ಕೀರ್ತಿರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಜತೆಗೆ ‘ಅಧ್ಯಕ್ಷ’ನಾಗಿ ಶರಣ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts