

ಕಾರು ಚಲಾಯಿಸುವುದಷ್ಟೇ ಅಲ್ಲ, ಅದನ್ನು ಸರಿಯಾಗಿ ಪಾರ್ಕ್ ಮಾಡುವುದು ಕೂಡ ಕೌಶಲವೇ. ವಿಶಾಲ ಜಾಗ, ಡ್ರೈವ್ ವೇ ಇದ್ದಲ್ಲಿ ಕಾರನ್ನು ನಿಲ್ಲಿಸುವುದು ಅಂಥ ಸಮಸ್ಯೆಯೇನಲ್ಲ. ಆದರೆ, ರಸ್ತೆ ಪಕ್ಕದಲ್ಲಿ ಕಾರಿಗಿಂತಲೂ ಉದ್ದಕ್ಕಿಂತ ಚಿಕ್ಕದಾದ ಜಾಗದಲ್ಲಿ ನಿಲ್ಲಿಸಬೇಕೆಂದರೆ ಸಾಹಸವನ್ನೇ ಮಾಡಬೇಕು. ಜತೆಗೆ ಅದಕ್ಕೆ ಕೌಶಲವೂ ಬೇಕು..!
ಈಗಂತೂ ಕಾರುಗಳಿಗೆ ಹಿಂಬದಿ ಕ್ಯಾಮರಾ ಸೆನ್ಸರ್ಗಳು ಬಂದಿವೆ. ಇವು ಕಾರು ನಿಲ್ಲಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ, ಅದ್ಯಾವುದು ಇಲ್ಲದ ಕಾರನ್ನು ರಸ್ತೆ ಪಕ್ಕದ ಚರಂಡಿ ಮೇಲಿನ ಕಾಂಕ್ರೀಟ್ ಸ್ಲ್ಯಾಬ್ನಲ್ಲಿ ನಿಲ್ಲಿಸಬೇಕೆಂದರೆ ಧೈರ್ಯವೂ ಬೇಕು ಎಂಬುದು ಈ ವಿಡಿಯೋವನ್ನು ನೋಡಿದರೆ ತಿಳಿಯುತ್ತದೆ.
ಈ ಕೇರಳಿಗನ ಸಾಹಸಕ್ಕೆ ನೆಟ್ಟಿಗರು ಫಿಧಾ ಆಗಿದ್ದಾರೆ. ಈತನನ್ನು ಕಿಂಗ್ ಆಫ್ ಪ್ಯಾರಲಲ್ ಪಾರ್ಕಿಂಗ್ ಎಂಬ ಬಿರುದನ್ನು ನೀಡಿದ್ದಾರೆ. ಒಮದೇ ದಿನದಲ್ಲಿ ಈ ವಿಡಿಯೋ ಚಾಲಕನಿಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದೆ.