More

    ಸೋಂಕಿನ ಕೇಂದ್ರಗಳಾಗುತ್ತಿವೆ ಢಾಬಾಗಳು; 90 ಸಿಬ್ಬಂದಿಗೆ ಕೋವಿಡ್​; 10 ಸಾವಿರಕ್ಕೂ ಅಧಿಕ ಜನರಿಗೆ​ ಆತಂಕ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಢಾಬಾಗಳು ಕರೊನಾ ಹಾಟ್​ ಸ್ಪಾಟ್​ಗಳಾಗುತ್ತಿವೆ. ಈ ಢಾಬಾಗಗಳಿಗೆ ಭೇಟಿ ನೀಡಿದ 10 ಸಾವಿರಕ್ಕೂ ಅಧಿಕ ಜನರು ಸೋಂಕಿನ ಭೀತಿಗೆ ಒಳಗಾಗಿದ್ದಾರೆ.

    ಹರಿಯಾಣ- ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುರ್ಥಾಲ್​ನ ಸುಖದೇವ್​ ಢಾಬಾದ 55 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಪಕ್ಕದ ಇನ್ನೊಂದು ಢಾಬಾದ 10 ಜನರಲ್ಲಿ ಕೋವಿಡ್​ ಖಚಿತವಾಗಿತ್ತು. ಇದೀಗ ಕೋವಿಡ್​ನಿಂದಾಗಿ ಮತ್ತೆ ನಾಲ್ಕು ಢಾಬಾಗಳನ್ನು ಮುಚ್ಚಲಾಗಿದೆ. ಈ ಹೋಟೆಲ್​ಗಳ 14 ಜನರಿಗೆ ಕರೊನಾ ಪಾಸಿಟಿವ್ ಎಂದು ಗೊತ್ತಾದ ಕಾರಣ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ಒಂದೇ ಢಾಬಾದ 65 ಸಿಬ್ಬಂದಿಗೆ ಕರೊನಾ ಸೋಂಕು….! ಸೂಪರ್​ಸ್ಪ್ರೆಡರ್​ ಆಗುವ ಆತಂಕ 

    ಈ ಢಾಬಾಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತವೆ. ಕೋವಿಡ್​ ಭೀತಿಯ ಹೊರತಾಗಿಯೂ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಇಲ್ಲಿನ ಢಾಬಾಗಳ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಲೇ ಇದೆ. ಹೀಗಾಗಿ ಕನಿಷ್ಠ 10 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ವ್ಯಾಪಿಸಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

    ಮೊದಲಿಗೆ ಸುಖದೇವ್​ ಢಾಬಾದ 56 ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದರು. ಇದನ್ನು ಬಂದ್​ ಮಾಡಿ ಸೋಮಕು ನಿವಾರಕ ಸಿಂಪಡಿಸಲಾಗಿತ್ತು. ನಂತರ ಪಕ್ಕದಲ್ಲೇ ಇದ್ದ ಮತ್ತೊಂದು ಢಾಬಾದ 10 ಜನರಲ್ಲೂ ಕೋವಿಡ್​ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ನಾಲ್ಕು ಢಾಬಾಗಳ 14 ಜನರಲ್ಲಿ ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ.

    ದಿನೇದಿನೆ ಈ ಸಂಖ್ಯೆ ಹೆಚ್ಚುತ್ತಿರುವುದು ಅಧಿಕಾರಿಗಳನ್ನು ಕಂಗೆಡಿಸಿದೆ. ಜತೆಗೆ, ಈ ಢಾಬಾಗಳಲ್ಲಿ ವ್ಯಕ್ತಿಗತ ಅಂತರ ಪಾಲಿಸದೆ ಜನರು ಕಿಕ್ಕಿರಿದು ಸೇರಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

    ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts