More

    ತೋರಿಸಲೇಬೇಕಾ…? 50ರ ಸುಂದರಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್!

    ಮುಂಬೈ: ‘ಚಯ್ಯಾ ಚಯ್ಯಾ’ ಹಾಡಿನಿಂದಲೇ ಸಿನಿಪ್ರಿಯರ ಮನಗೆದ್ದ ಬಾಲಿವುಡ್​ನ ನಟಿ, 50 ವರ್ಷದ ಬೆಡಗಿ ಮಲೈಕಾ ಅರೋರಾ ಸದ್ಯ ಬಿಟೌನ್​ನಲ್ಲಿ ಒಂದಲ್ಲ ಒಂದು ವಿಷಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಕಳೆದ ಬಾರಿ ತಮ್ಮ ಪ್ರಿಯಕರ ನಟ ಅರ್ಜುನ್ ಕಪೂರ್​ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೆಲ್ಲಾ ಮೀರಿ ಹೊರಬಂದ ನಟಿ ಇದೀಗ ಮತ್ತೊಮ್ಮೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದು, ಮೊದಲು ಸಭ್ಯತೆ ತೋರುವುದನ್ನು ಕಲಿಯಿರಿ ಎಂದು ಹೇಳಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮ.ಬೆಟ್ಟ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು

    ಬಾಲಿವುಡ್​ನ ಹಿರಿಯ ನಟಿ ಎಂದು ಕರೆಸಿಕೊಳ್ಳಬೇಕಾದ ಮಲೈಕಾ, ಇಂದಿಗೂ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿರುವ ಕಾರಣ, ಅಭಿಮಾನಿಗಳು ಅವರನ್ನು ಬಿಟೌನ್​ನ ಹಾಟ್​ ಬೆಡಗಿ ಎಂದು ಕರೆಯಲು ಇಷ್ಟಪಡುತ್ತಾರೆ. ಅದ್ದೂರಿ ಬಟ್ಟೆ ತೊಡುವ ಅರೋರಾ, ಫ್ಯಾಶನ್ ಐಕಾನ್ ಆಗಿ ಕಾಣಿಸಿಕೊಳ್ಳುವುದನ್ನು ನಾವೆಲ್ಲಾ ನೋಡಿದ್ದೇವೆ. ಈ ಬಾರಿಯೂ ಅದೇ ರೀತಿ ಗ್ರ್ಯಾಂಡ್ ಆಗಿ ವೇದಿಕೆ ಮೇಲೆ ಬಂದ ನಟಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇತ್ತೀಚೆಗೆ ಉತ್ತರಪ್ರದೇಶದ ನಾಥದ್ವಾರದಲ್ಲಿ ನಡೆದ ಫ್ಯಾಶನ್​ ಕಾರ್ಯಕ್ರಮವೊಂದಕ್ಕೆ ಮಿಂಚಿನ ಉಡುಗೆಯಲ್ಲಿ ವೇದಿಕೆಗೆ ಆಗಮಿಸಿದ ಮಲೈಕಾ, ಇತರೆ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಂಡರು. ಪ್ರೇಕ್ಷಕರೊಂದಿಗೆ ಹೆಚ್ಚು ಸಮಯ ಸಂವಾದ ಕೂಡ ನಡೆಸಿದರು. ನಟಿಯ ಸ್ಟೈಲಿಶ್ ಔಟ್​ಫಿಟ್​ ನೋಡಿ ಕೆಲವರು ಫಿದಾ ಆದ್ರೆ, ಇನ್ನೂ ಕೆಲವರು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಹೀಗೆ ಮೈ-ಕೈ ತೋರಿಸಲೇಬೇಕಾ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಗುಂಡ್ಲು ನದಿ ಪುನಶ್ಚೇತನಕ್ಕೆ ದಿನಗಣನೆ

    ‘ಇಂತಹ ಧಾರ್ಮಿಕ ಸ್ಥಳಕ್ಕೆ ಬರುತ್ತೀರಿ ಎಂಬುದು ಮೊದಲೇ ಗೊತ್ತಿರುವಾಗ ಏಕೆ ಎದೆ ಕಾಣುವಂತ ಉಡುಗೆಯನ್ನು ತೊಡುತ್ತೀರಿ’? ‘ಮೈ ತೋರಿಸುವುದು ಕಡ್ಡಾಯವೇನಾದರೂ ಆಗಿದ್ಯಾ’? ಎಂದು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಸದ್ಯ ನಟಿಯ ಫೋಟೋಗೆ ನೆಟ್ಟಿಗರು ಭಾರೀ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts