ಹೈದರಾಬಾದ್: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ನಟ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದಲ್ಲಿ ಗಮನಸೆಳೆದ ಕಲಾವಿದರ ಪೈಕಿ ದಾಕ್ಷಾಯಿಣಿ ಪಾತ್ರ ಮಾಡಿರುವ ಅನಸೂಯ ಭಾರದ್ವಾಜ್ ಸಹ ಒಬ್ಬರು. ಮೂಲತಃ ನಟಿ-ನಿರೂಪಕಿಯಾಗಿರುವ ಅನಸೂಯ ತಮ್ಮ ಗ್ಲಾಮರಸ್ನಿಂದಲೇ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲೂ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ವಿವಾದಗಳನ್ನು ಹುಟ್ಟುಹಾಕುವುದರಲ್ಲೂ ಅನಸೂಯಾ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅನಸೂಯಾ, ತಮ್ಮ ಬೋಲ್ಡ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ.
ಇದೀಗ ಅನಸೂಯ ಅವರು ಹಾಡ್ ಉಡುಗೆಯಲ್ಲಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಅನಸೂಯ ಭಾರಧ್ವಜ್ ಅವರು ಸದ್ಯ ಶೂಟಿಂಗ್‌ನಿಂದ ಬಿಡುವು ಪಡೆದು ವಿಶ್ರಾಂತಿಯಲ್ಲಿದ್ದಾರೆ. ಇತ್ತೀಚೆಗೆ ಕುಟುಂಬ ಸಮೇತ ವಿಹಾರಕ್ಕೆ ತೆರಳಿದ್ದಾರೆ. ಸಿಕ್ಕಿಂನ ನೈಸರ್ಗಿಕ ಸೌಂದರ್ಯವನ್ನು ಅನಸೂಯ ಸವಿಯುತ್ತಿದ್ದಾರೆ. ಬುಡಕಟ್ಟು ಜನರು ವಾಸಿಸುವ ಬೆಟ್ಟಗಳಲ್ಲಿ ಮೀನುಗಾರಿಕೆ ಮತ್ತು ಚಾರಣವನ್ನು ಆನಂದಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅನಸೂಯ, ಇನ್ನೊಂದು ದಿನ.. ಮತ್ತೊಂದು ಟ್ರೆಕ್.. ಮತ್ತೊಂದು ಸುಂದರವಾದ ಮೌಂಟೇನ್ ಫಾರೆಸ್ಟ್ ಫಾಲ್ಸ್ ಮತ್ತು ಸ್ಟ್ರೀಮ್ ಹಾಗೂ ಮತ್ತೊಂದು ನೆನಪುಗಳ ಗುಚ್ಛ ಎಂದು ಬರೆದುಕೊಂಡಿದ್ದಾರೆ.
ಪತಿ ಸುಶಾಂಕ್ ಭಾರಧ್ವಜ್ ಹಾಗೂ ತಮ್ಮ ಇಬ್ಬರು ಪುತ್ರರೊಂದಿಗೆ ಅನುಸೂಯ ಅವರು ಜಲಪಾತದ ನೀರಿನಲ್ಲಿ ಆನಂದಿಸುತ್ತಿರುವ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಅನಸೂಯಾ ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಟೈಟ್ ಶಾರ್ಟ್ ಡ್ರೆಸ್ನಲ್ಲಿ ಅನಸೂಯ ಅವರ ಸೌಂದರ್ಯವನ್ನು ನೋಡಿ ಅಭಿಮಾನಿಗಳು ಹಾಗೂ ನೆಟ್ಟಿಗರು ಮನಸೋತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅನಸೂಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ಗೊತ್ತೇ ಇದೆ. ತಮ್ಮ ಸಿನಿಮಾಗಳ ಜೊತೆಗೆ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಫೋಟೋಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ರಜಾಕಾರ್ ಸಿನಿಮಾದಲ್ಲಿ ಪೋಚಮ್ಮನಾಗಿ ಇಂಪ್ರೆಸ್ ಮಾಡಿದ್ದ ಅನಸೂಯ, ಪುಷ್ಪ 2ರಲ್ಲಿ ದಾಕ್ಷಾಯಣಿಯಾಗಿ ರಂಜಿಸಲು ಸಿದ್ಧವಾಗುತ್ತಿದ್ದು, ಮೊದಲ ಭಾಗದಲ್ಲಿ ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದ ಅನಸೂಯ ಎರಡನೇ ಭಾಗದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯಲಿದ್ದಾರೆ. (ಏಜೆನ್ಸೀಸ್)
ಆರ್ಸಿಬಿ ಸೋಲಿಗೆ ಆ ರಾತ್ರಿ ನಡೆದ ಘಟನೆಯೇ ಕಾರಣ… ಸ್ಫೋಟಕ ಹೇಳಿಕೆ ನೀಡಿದ ಯಶ್ ದಯಾಳ್ ತಂದೆ!
ಮಂಜುಮ್ಮೇಲ್ ಬಾಯ್ಸ್: ಆ ಡೇಂಜರಸ್ ದೃಶ್ಯದ ಹಿಂದಿದೆ ‘ಒರಿಯೋ ಬಿಸ್ಕೆಟ್’ ಮಹಿಮೆ! ಇದು ಚಿದಂಬರಂ ರಹಸ್ಯ
ಅಯ್ಯೋ ದುರ್ವಿಧಿಯೇ! ತಂದೆ ಮಾಡಿದ ತಪ್ಪಿಗೆ ಮಗನ IAS ಕನಸು ಛಿದ್ರ, ತಾಯಿಯ ನರಳಾಟ ಕಂಡು ಕಣ್ಣೀರಿಟ್ಟ ಜನ