More

    ಆರ್​ಸಿಬಿ ಸೋಲಿಗೆ ಆ ರಾತ್ರಿ ನಡೆದ ಘಟನೆಯೇ ಕಾರಣ… ಸ್ಫೋಟಕ ಹೇಳಿಕೆ ನೀಡಿದ ಯಶ್​ ದಯಾಳ್​ ತಂದೆ!

    ನವದೆಹಲಿ: ಪ್ರಸಕ್ತ ಐಪಿಎಲ್​ ಸೀಸನ್​ನಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕಪ್​ ಗೆಲ್ಲುವ ಕನಸು ಭಗ್ನವಾಗಿದೆ. ಮೇ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್​ 4 ವಿಕೆಟ್‌ಗಳಿಂದ ಜಯಗಳಿಸಿತು. ಈ ಸೋಲಿನೊಂದಿಗೆ ಈ ಸೀಸನ್​ನಲ್ಲಿ ಆರ್​ಸಿಬಿ ಆಳ್ವಿಕೆ ಅಂತ್ಯಗೊಂಡಿತು.

    ಲೀಗ್ ಹಂತದಲ್ಲಿ ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಬಹುತೇಕ ಟೂರ್ನಿಯಿಂದ ಹೊರಗುಳಿದಿದ್ದ ಆರ್​ಸಿಬಿ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡು ಸತತ 6ರಲ್ಲಿ ಗೆದ್ದು ಪ್ಲೇ ಆಫ್ ತಲುಪಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಮತ್ತೊಂದೆಡೆ ಲೀಗ್​ನ ಆರಂಭಿಕ ಹಂತದಲ್ಲಿ ಅಮೋಘ ಆಟವಾಡಿದ ರಾಜಸ್ಥಾನ ರಾಯಲ್ಸ್, ನಂತರ ಸತತ 4 ಪಂದ್ಯಗಳಲ್ಲಿ ಸೋತು ಪ್ಲೇ ಆಫ್ ತಲುಪಿತ್ತು. ಆದರೆ, ನಿರ್ಣಾಯಕ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ ಮೇಲುಗೈ ಸಾಧಿಸಿದ ಆರ್​ಆರ್​ ಕ್ವಾಲಿಫೈಯರ್ -2 ಗೆ ಅರ್ಹತೆ ಪಡೆದರು. ಇದೀಗ ಆರ್‌ಸಿಬಿ ತಂಡದ ವೇಗಿ ಯಶ್‌ ದಯಾಳ್‌ ಅವರ ತಂದೆ ಚಂದ್ರಪಾಲ್‌, ಆರ್‌ಆರ್‌ ವಿರುದ್ಧ ಆರ್​ಸಿಬಿ ಸೋಲಿಗೆ ಕಾರಣ ನೀಡಿದ್ದಾರೆ. ಚೆನ್ನೈ ವಿರುದ್ಧ ಗೆದ್ದ ನಂತರ ಆರ್‌ಸಿಬಿ ಆಟಗಾರರು ಮಾಡಿದ ತಪ್ಪಿನಿಂದಾಗಿ ತಂಡ ಸೋತಿತು ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

    ಚೆನ್ನೈ ವಿರುದ್ಧ ಅಮೋಘ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್​ಸಿಬಿಗೆ ರಾಜಸ್ಥಾನ ರಾಯಲ್ಸ್ ಶಾಕ್ ನೀಡಿದ್ದು ಗೊತ್ತೇ ಇದೆ. ರಾಜಸ್ಥಾನ ವಿರುದ್ಧ ಸೋಲಲು ಆರ್‌ಸಿಬಿ ಆಟಗಾರರ ಸ್ವಯಂ ಪ್ರೇರಿತ ಕ್ರಮವೇ ಕಾರಣ ಎನ್ನುತ್ತಾರೆ ಆರ್‌ಸಿಬಿ ವೇಗಿ ಯಶ್ ದಯಾಳ್ ತಂದೆ ಚಂದ್ರಪಾಲ್. ಚೆನ್ನೈ ವಿರುದ್ಧದ ಗೆಲುವಿನ ನಂತರ ಆರ್‌ಸಿಬಿ ಆಟಗಾರರು ನೈಟ್ ಪಾರ್ಟಿ ಮಾಡಿದ್ದಾರೆ ಎಂಬ ಸ್ಫೋಟಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಚೆನ್ನೈ ವಿರುದ್ಧದ ಗೆಲುವಿನ ನಂತರ ಆರ್​ಸಿಬಿ ಆಟಗಾರರು ರಾತ್ರಿಯಿಡೀ ಪಾರ್ಟಿ ಮಾಡಿದ್ದಾರೆ. ಬೆಳಗಿನ ಜಾವ 5 ಗಂಟೆಯವರೆಗೂ ಪಾರ್ಟಿ ಮಾಡಿದರು. ಈ ವಿಷಯವನ್ನು ಯಶ್ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾರೆ. ರಾತ್ರಿ ಪಾರ್ಟಿ ಮಾಡಿ ತುಂಬಾ ಖುಷಿಯಾಗಿದ್ದೇವೆ ಎಂದು ತಾಯಿಗೆ ತಿಳಿಸಿದ್ದರು. ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಿದ್ದಂತೆ ತಮ್ಮ ಸಂತಸವನ್ನು ಹೀಗೆ ಆಚರಿಸಿಕೊಂಡರು ಎಂದು ಅಂದು ರಾತ್ರಿ ನಡೆದ ಸಂಗತಿಗಳನ್ನು ಯಶ್​ ದಯಾಳ್​ ತಂದೆ ಬಹಿರಂಗಪಡಿಸಿದರು.

    ರಾತ್ರಿ ಪಾರ್ಟಿಯನ್ನು ಸಂಪೂರ್ಣ ಎಂಜಾಯ್ ಮಾಡಿದ ಅರ್​ಸಿಬಿ ಆಟಗಾರರು ವಿಶ್ರಾಂತಿಯ ಕೊರತೆಯಿಂದ ದೈಹಿಕವಾಗಿ ಸುಸ್ತಾಗಿದ್ದರು. ಇದರಿಂದಾಗಿ ರಾಜಸ್ಥಾನ ವಿರುದ್ಧ ಸೋತಿದೆ ಎಂದು ಯಶ್ ದಯಾಳ್ ತಂದೆ ಹೇಳಿದ್ದಾರೆ. (ಏಜೆನ್ಸೀಸ್​​)

    ಮಂಜುಮ್ಮೇಲ್​ ಬಾಯ್ಸ್​: ಆ ಡೇಂಜರಸ್ ದೃಶ್ಯದ ಹಿಂದಿದೆ ‘ಒರಿಯೋ ಬಿಸ್ಕೆಟ್’ ಮಹಿಮೆ! ಇದು ಚಿದಂಬರಂ ರಹಸ್ಯ​

    ಸುಹಾನಾಳ ಜತೆ ಡೇಟಿಂಗ್​ ಮಾಡಲು 7 ಷರತ್ತುಗಳನ್ನಿಟ್ಟ ಎಸ್​ಆರ್​ಕೆ! ಬಾಯ್​ಫ್ರೆಂಡ್​ ಕತೆ ಅಷ್ಟೇ ಅಂದ್ರು ನೆಟ್ಟಿಗರು

    ನಾನ್​ ರೆಡಿ ಇದ್ದೇನೆ… ಬ್ರೇಕಪ್​ ಬಗ್ಗೆ ಕೇಳಿದ್ದಕ್ಕೆ ಶ್ರುತಿ ಕೊಟ್ರು ಶಾಕಿಂಗ್​ ಹೇಳಿಕೆ, ದಂಗಾದ್ರೂ ಫ್ಯಾನ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts