More

  ನಾನ್​ ರೆಡಿ ಇದ್ದೇನೆ… ಬ್ರೇಕಪ್​ ಬಗ್ಗೆ ಕೇಳಿದ್ದಕ್ಕೆ ಶ್ರುತಿ ಕೊಟ್ರು ಶಾಕಿಂಗ್​ ಹೇಳಿಕೆ, ದಂಗಾದ್ರೂ ಫ್ಯಾನ್ಸ್​!

  ಚೆನ್ನೈ: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸುದ್ದಿಯಾಗಿದ್ದಾರೆ. ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಬಳಿಕ ಶಂತನು ಹಜಾರಿಕಾ ಜತೆ ಡೇಟಿಂಗ್​ ಮಾಡುತ್ತಿದ್ದರು. ಆತನ ಜತೆಯೂ ಸಂಬಂಧ ಮುರಿದುಕೊಂಡಿರುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ.

  ತಮ್ಮ ಬ್ರೇಕಪ್ ವದಂತಿಗಳಿಗೆ ಶ್ರುತಿ ಹಾಸನ್ ಆಗಲಿ ಅಥವಾ ಶಂತನು ಆಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ, ಮೊದಲ ಬಾರಿಗೆ, ಶ್ರುತಿ ಹಾಸನ್​ ಪ್ರತಿಕ್ರಿಯೆ ನೀಡಿದ್ದಾರೆ.

  ಶ್ರುತಿ ಮತ್ತು ಶಾಂತನು ತಮ್ಮ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದು, ಬ್ರೇಕಪ್​ ಸುದ್ದಿಗೆ ಹೆಚ್ಚು ಪುಷ್ಠಿ ನೀಡಿತು. ಅಲ್ಲದೇ ಕೆಲವು ದಿನಗಳಿಂದ ಶ್ರುತಿ ಏಕಾಂಗಿಯಾಗಿ ಸಿನಿಮಾ ಕಾರ್ಯಕ್ರಮಗಳು, ಪಾರ್ಟಿಗಳಿಗೆ ಹಾಜರಾಗುತ್ತಿದ್ದು, ಈ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಆದರೆ, ಇದುವರೆಗೂ ಇಬ್ಬರೂ ತಮ್ಮ ಬ್ರೇಕಪ್ ಬಗ್ಗೆ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಶಂತನು ಈ ಹಿಂದೆ ತಮ್ಮ ಬ್ರೇಕಪ್ ಬಗ್ಗೆ ಮಾತನಾಡಲು ನಿರಾಕರಿಸಿದರು. ಇದೀಗ ಶ್ರುತಿ ಹಾಸನ್ ಸ್ಪಷ್ಟನೆ ನೀಡಿದ್ದಾರೆ.

  ಈ ಚೆಲುವೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಇನ್‌ಸ್ಟಾ ಲೈವ್‌ನಲ್ಲಿ ಭಾಗವಹಿಸಿದ್ದ ಶ್ರುತಿ, ತಮ್ಮ ಅಭಿಮಾನಿಗಳೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ನೆಟ್ಟಿಗರೊಬ್ಬರು ನೀವು ಒಂಟಿಯಾಗಿದ್ದೀರಾ ಅಥವಾ ಕಮಿಟ್ ಆಗಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರುತಿ, ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಇಷ್ಟವಿಲ್ಲ. ಆದರೆ ನಾನೀಗ ಒಬ್ಬಳೆ. ಆದ್ರೆ ಮಿಂಗಲ್​ ಆಗಲು ರೆಡಿ ಇದ್ದೇನೆ. ಕೆಲಸ ಮಾಡುತ್ತಾ ಉಳಿದ ನನ್ನ ಜೀವನವನ್ನು ಆನಂದಿಸುತ್ತಿದ್ದೇನೆ ಎಂದು ಶ್ರುತಿ ಹಾಸನ್​ ಹೇಳಿದ್ದಾರೆ.

  ಶೃತಿ ಹಾಸನ್ ಅವರ ಈ ಹೇಳಿಕೆ ಕೇಳಿ ಶಂತನು ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ಏನೇ ಆಗಲಿ ಶ್ರುತಿ ತಮ್ಮ ಸಿನಿಮಾ ಕರಿಯರ್ ಅನ್ನು ಸರಿಯಾಗಿ ಪ್ಲಾನ್ ಮಾಡುತ್ತಿದ್ದಾರೆಯೇ ಹೊರತು ತಮ್ಮ ಪರ್ಸನಲ್ ಲೈಫ್ ಅನ್ನು ಸರಿಯಾಗಿ ಪ್ಲಾನ್ ಮಾಡುತ್ತಿಲ್ಲ ಎಂಬುದು ನೆಟ್ಟುಗರ ಅಭಿಪ್ರಾಯವಾಗಿದೆ.

  ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಡಿವಿ ಶೇಷ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾಗೆ ಶ್ರುತಿ ಸಹಿ ಮಾಡಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಆದರೆ, ಈ ಸಿನಿಮಾ ಟೈಟಲ್​ ಇನ್ನೂ ಘೋಷಣೆಯಾಗಿಲ್ಲ. ಮೇಜರ್​ ಬಳಿಕ ಅಡಿವಿ ಶೇಷ ಅವರ ಎರಡನೇ ಹಿಂದಿ ಸಿನಿಮಾ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ದಿ ಐ ಹೆಸರಿನ ಹಾಲಿವುಡ್​ ಸಿನಿಮಾದಲ್ಲೂ ಶ್ರುತಿ ನಟಿಸುತ್ತಿದ್ದಾರೆ ಎಂದು ಕೇಳಿಬಂದಿದೆ. (ಏಜೆನ್ಸೀಸ್​)

  ಸುಹಾನಾಳ ಜತೆ ಡೇಟಿಂಗ್​ ಮಾಡಲು 7 ಷರತ್ತುಗಳನ್ನಿಟ್ಟ ಎಸ್​ಆರ್​ಕೆ! ಬಾಯ್​ಫ್ರೆಂಡ್​ ಕತೆ ಅಷ್ಟೇ ಅಂದ್ರು ನೆಟ್ಟಿಗರು

  ಒಂದಲ್ಲ ಎರಡಲ್ಲ 4 ಬಾರಿ… ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್ ಟೇಲರ್!

  ರೇವ್​ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎನ್ನುತ್ತಿರುವ ನಟಿ ಹೇಮಾಗೆ ಬಿಗ್​ ಶಾಕ್​! ಮತ್ತೊಂದು ಸಾಕ್ಷಿ ಬಹಿರಂಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts