More

    ಮಂಜುಮ್ಮೇಲ್​ ಬಾಯ್ಸ್​: ಆ ಡೇಂಜರಸ್ ದೃಶ್ಯದ ಹಿಂದಿದೆ ‘ಒರಿಯೋ ಬಿಸ್ಕೆಟ್’ ಮಹಿಮೆ! ಇದು ಚಿದಂಬರಂ ರಹಸ್ಯ​

    ತಿರುವನಂತಪುರಂ: ಇತ್ತೀಚೆಗೆ ಸಾಲು ಸಾಲು ಹಿಟ್‌ ಸಿನಿಮಾಗಳ ಮೂಲಕ ಮಲಯಾಳಂ ಸಿನಿ ಉದ್ಯಮವು ಇತರೆ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಬಿಗ್ ಬಜೆಟ್ ಮತ್ತು ಸ್ಟಾರ್ ಹೀರೋಗಳ ಚಿತ್ರಗಳಷ್ಟೇ ಅಲ್ಲ, ಯಾವುದೇ ನಿರೀಕ್ಷೆಗಳಿಲ್ಲದೆ ಚಿತ್ರಮಂದಿರಕ್ಕೆ ಲಗ್ಗೆಯಿಟ್ಟ ಸಣ್ಣ ಚಿತ್ರಗಳು ಕೂಡ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿವೆ. ಅವುಗಳಲ್ಲಿ ಮಂಜುಮ್ಮೇಲ್​ ಬಾಯ್ಸ್ ಸಿನಿಮಾ ಕೂಡ ಒಂದು.

    ಪರವ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸೌಬಿನ್ ಶಾಹಿರ್, ಬಾಬು ಶಾಹಿರ್ ಮತ್ತು ಶಾನ್ ಆಂಟೋನಿ ನಿರ್ಮಿಸಿರುವ ಈ ಚಿತ್ರಕ್ಕೆ ಚಿದಂಬರಂ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾಲಿವುಡ್‌ನಲ್ಲಿ ಫೆಬ್ರವರಿ 22ರಂದು ಬಿಡುಗಡೆಯಾಗಿ ಸಿಕ್ಕಾಪಟ್ಟೆ ಹಿಟ್​ ಆಯಿತು. ಅಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತು.

    ಈ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್, ದೀಪಕ್ ಪರಂಬೋಲ್ ನಟಿಸಿದ್ದಾರೆ. ಒಟಿಟಿಯಲ್ಲೂ ರಿಲೀಸ್​ ಆಗಿದ್ದು, ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಬರೋಬ್ಬರಿ 250 ಕೋಟಿ ರೂ. ಲೂಟಿ ಮಾಡಿದೆ.

    ಈ ಚಿತ್ರವು 2006ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಕೊಚ್ಚಿಯ ಮಂಜುಮ್ಮೇಲ್​ ಗ್ರಾಮದ 10 ಹುಡುಗರು ತಮಿಳುನಾಡಿನ ಕೊಡೈಕೆನಾಲ್‌ಗೆ ವಿಹಾರಕ್ಕೆ ಹೋಗುತ್ತಾರೆ. ಅವರು ಅಲ್ಲಿನ ಅತ್ಯಂತ ಪ್ರಸಿದ್ಧವಾದ ಗುಣ ಗುಹೆಗಳಿಗೆ ಭೇಟಿ ನೀಡುತ್ತಾರೆ. ಈ ಪ್ರದೇಶ ನಿಷೇಧಿತ ಪ್ರದೇಶ ಎಂದು ಗೊತ್ತಿದ್ದರೂ ಅಲ್ಲಿಗೆ ಹೋಗುತ್ತಾರೆ. ಈ ವೇಳೆ ಅನಿರೀಕ್ಷಿತವಾಗಿ ಸುಭಾಷ್ ಎಂಬ ಸ್ನೇಹಿತ ಆಳವಾದ ಕಣಿವೆಗೆ ಬೀಳುತ್ತಾನೆ. ಬಳಿಕ ಸಾಕಷ್ಟು ಪ್ರಯತ್ನ ಮಾಡಿ ಅವನನ್ನು ಹೊರಗೆ ಕರೆತರುವುದೇ ಈ ಸಿನಿಮಾ ಕತೆ. ಚಿತ್ರಕತೆಯಂತೂ ಸಖತ್ತಾಗಿ ಮೂಡಿಬಂದಿದೆ. ಹೀಗಾಗಿ ಎಲ್ಲೆಡೆ ಮಂಜುಮ್ಮೇಲ್​ ಬಾಯ್ಸ್​ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

    ಇದರ ನಡುವೆ ನಿರ್ದೇಶಕ ಚಿದಂಬರಂ ಈ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಓರಿಯೊ ಬಿಸ್ಕೆಟ್ ಬಳಸಿದ್ದಾಗಿ ತಿಳಿಸಿದ್ದಾರೆ.

    ಈ ಸಿನಿಮಾದಲ್ಲಿ ಸುಭಾಷ್ ಪಾತ್ರದಲ್ಲಿ ಶ್ರೀನಾಥ್ ಭಾಸಿ ನಟಿಸಿದ್ದಾರೆ. ಕಣಿವೆ ಒಳಗೆ ಬಿದ್ದಾಗ ಗಾಯಗಳು ಗಂಭೀರವಾಗಿ ಕಾಣುವಂತೆ ಮಾಡಲು ಓರಿಯೊ ಬಿಸ್ಕತ್ತುಗಳನ್ನು ಬಳಸಲಾಯಿತು ಎಂದಿದ್ದಾರೆ. ಓರಿಯೊ ಬಿಸ್ಕೆಟ್‌ನಲ್ಲಿದ್ದ ಕ್ರೀಮ್‌ನಿಂದ ಸುಭಾಷ್‌ಗೆ ಮೇಕಪ್ ಮಾಡಲಾಗಿತ್ತು. ಈ ಎಲ್ಲ ತಂತ್ರವನ್ನು ಮೇಕಪ್ ಮ್ಯಾನ್ ರೋನೆಕ್ಸ್ ಕ್ಸೇವಿಯರ್ ಮಾಡಿದ್ದಾರೆ. ಈ ಶ್ರೇಯ ಅವರಿಗೆ ಸಲ್ಲುತ್ತದೆ. ಈ ಮೇಕಪ್​ನಿಂದ ಶ್ರೀನಾಥ್ ಭಾಸಿ ತುಂಬಾ ಮುಜುಗರಕ್ಕೊಳಗಾಗಿದ್ದರು. ಬಿಸ್ಕೆಟ್ ಕ್ರೀಂನ ವಾಸನೆಗೆ ಇರುವೆಗಳು ಅವನ ಸುತ್ತಲೂ ಸುತ್ತಿಕೊಂಡವು. ಈ ದೃಶ್ಯವನ್ನು ಚಿತ್ರೀಕರಿಸುವಾಗ, ಇರುವೆಗಳು ಕಚ್ಚಲು ಪ್ರಾರಂಭಿಸಿದವು. ಆದ್ರೂ ಅದರ ಬಗ್ಗೆ ಯೋಚಿಸದೇ ಆ ದೃಶ್ಯದಲ್ಲಿ ಶ್ರೀನಾಥ್​ ಚೆನ್ನಾಗಿ ನಟಿಸಿದ್ದಾರೆ ಎಂದು ನಿರ್ದೇಶಕ ಚಿದಂಬರಂ ಹೊಗಳಿದರು. (ಏಜೆನ್ಸೀಸ್​)

    ಮಂಜುಮ್ಮೇಲ್​​​ ಬಾಯ್ಸ್​ಗೆ ಶಾಕ್​ ಕೊಟ್ಟ ಇಳಯರಾಜ! ಆದ್ರೆ ನಿಜವಾದ ಟ್ವಿಸ್ಟ್ ಚಿತ್ರದ ಕತೆಯಷ್ಟೇ ರೋಚಕ

    ಅಯ್ಯೋ ದುರ್ವಿಧಿಯೇ! ತಂದೆ ಮಾಡಿದ ತಪ್ಪಿಗೆ ಮಗನ IAS ಕನಸು ಛಿದ್ರ, ತಾಯಿಯ ನರಳಾಟ ಕಂಡು ಕಣ್ಣೀರಿಟ್ಟ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts