More

    ಮಂಜುಮ್ಮೇಲ್​​​ ಬಾಯ್ಸ್​ಗೆ ಶಾಕ್​ ಕೊಟ್ಟ ಇಳಯರಾಜ! ಆದ್ರೆ ನಿಜವಾದ ಟ್ವಿಸ್ಟ್ ಚಿತ್ರದ ಕತೆಯಷ್ಟೇ ರೋಚಕ

    ಚೆನ್ನೈ: ಮಲಯಾಳಂನ “ಮಂಜುಮ್ಮೇಲ್​ ಬಾಯ್ಸ್” ಸಿನಿಮಾ ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಯಶಸ್ಸು ಕಂಡಿತು. ಯಶಸ್ಸು ಮಾತ್ರವಲ್ಲದೆ, ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ನೈಜ ಕಥೆಯನ್ನು ಆಧರಿಸಿದ ಈ ಸಿನಿಮಾ ಫೆಬ್ರವರಿ 22 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಿ 200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿಕ್ಕಾಪಟ್ಟೆ ಸದ್ದು ಮಾಡಿರುವ ಈ ಸಿನಿಮಾ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

    ಮಂಜುಮ್ಮೇಲ್​ ಬಾಯ್ಸ್ ಮಲಯಾಳಂ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನಲ್ಲೂ ಹಿಟ್ ಆಗಿದೆ. ಆದರೆ, ಈ ಚಿತ್ರ ಈಗ ದೊಡ್ಡ ಸಂಕಷ್ಟದಲ್ಲಿದೆ. ಕಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಮಂಜುಮ್ಮೇಲ್ ಬಾಯ್ಸ್ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಏಕೆಂದರೆ, 1991ರಲ್ಲಿ ತೆರೆಕಂಡ ಕಮಲ್ ಹಾಸನ್ ಅಭಿನಯದ ‘ಗುಣ’ ಸಿನಿಮಾದ ‘ಕಣ್ಮಣಿ ಅನ್ಬೋದು’ ಹಾಡನ್ನು ಈ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಬಳಸಿಕೊಳ್ಳಲಾಗಿದೆ. ಗುಣ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ಹಾಡು ಈಗ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಮೇಲಾಗಿ ಈ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲೂ ಟ್ರೆಂಡಿಂಗ್ ಆಗಿದೆ. ಆದರೆ, ಅನುಮತಿ ಇಲ್ಲದೆ ಹಾಡನ್ನು ಬಳಸಿದ್ದಕ್ಕಾಗಿ ಇಳಯರಾಜ ಪರ ವಕೀಲ ಸರವಣನ್ ಚಿತ್ರ ನಿರ್ಮಾಣ ಸಂಸ್ಥೆಗೆ ನೋಟಿಸ್ ಕಳುಹಿಸಿದ್ದಾರೆ.

    ಕಾಪಿರೈಟ್ ಕಾನೂನಿನ ಪ್ರಕಾರ ಈ ಹಾಡನ್ನು ಬಳಸಿಕೊಳ್ಳಲು ಅನುಮತಿ ಪಡೆದುಕೊಳ್ಳಬೇಕು. ಅಲ್ಲದೆ, ಬಳಸಿಕೊಳ್ಳಲು ಸೂಕ್ತ ಪರಿಹಾರ ಸಹ ನೀಡಬೇಕು. ಇಲ್ಲದಿದ್ದರೆ, ಹಕ್ಕುಸ್ವಾಮ್ಯದ ಉದ್ದೇಶಪೂರ್ವಕ ಉಲ್ಲಂಘನೆಯಾಗಿ ಕಾನೂನು ಕ್ರಿಮಿನಲ್ ಕ್ರಮವನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ಇಳಯರಾಜ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೂಲಿ ಚಿತ್ರದ ಟೀಸರ್​ನಲ್ಲಿ ಅನುಮತಿ ಇಲ್ಲದೇ ತಮ್ಮ ಸಂಗೀತ ಬಳಸಿದ್ದಕ್ಕೆ ಸನ್ ಪಿಕ್ಚರ್ಸ್ ಸಂಸ್ಥೆಗೆ ನೋಟಿಸ್ ಕಳುಹಿಸಿರುವುದು ಗೊತ್ತೇ ಇದೆ. ಆದರೆ ಇದೀಗ ಮಂಜುಮ್ಮೇಲ್ ಬಾಯ್ಸ್ ಚಿತ್ರಕ್ಕೆ ನೋಟಿಸ್ ಬಂದಿರುವುದು ಹಾಟ್ ಟಾಪಿಕ್ ಆಗಿದೆ.

    ಆದರೆ ಇಲ್ಲಿ ನಿಜವಾದ ಟ್ವಿಸ್ಟ್ ಏನೆಂದರೆ ಮಂಜುಮ್ಮೇಲ್ ಬಾಯ್ಸ್ ನಿರ್ಮಾಪಕರು ಈಗಾಗಲೇ ಗುಣ ಚಿತ್ರದ ಆಡಿಯೋ ಹಕ್ಕುಗಳನ್ನು ಹೊಂದಿರುವ ಸಂಗೀತ ಕಂಪನಿಯಿಂದ ಅನುಮತಿ ಪಡೆದಿದ್ದಾರೆ. ಜೊತೆಗೆ ಸಂಗೀತದ ಹಕ್ಕುಗಳನ್ನೂ ಖರೀದಿಸಲಾಗಿದೆ. ಈ ಸಂಬಂಧ ಚಿತ್ರದ ನಿರ್ದೇಶಕರು ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಡಿಯೋ ತುಣುಕು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ ಚಿತ್ರದ ಆರಂಭದಲ್ಲಿ ಇಳಯರಾಜ ಮತ್ತು ಕಮಲ್ ಹಾಸನ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿ ಕ್ರೆಡಿಟ್‌ಗಳನ್ನು ನೀಡಲಾಗಿದೆ. ಇಷ್ಟೆಲ್ಲ ಮಾಡಿದ ನಂತರವೂ ಇಳಯರಾಜ ಕಡೆಯಿಂದ ನೋಟಿಸ್ ರವಾನೆಯಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. (ಏಜೆನ್ಸೀಸ್​)

    ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ಆತನೊಬ್ಬನೇ ಕಾರಣ! ಅಭಿಮಾನಿಗಳಿಂದ ಹಿಡಿಶಾಪ

    ಆರ್​ಸಿಬಿ ಸೋತ ಬೆನ್ನಲ್ಲೇ ಡಿವಿಲಿಯರ್ಸ್​ ಬಿಚ್ಚುಮಾತು! ಟೀಕಾಕಾರರ ಬಾಯಿ ಮುಚ್ಚಿಸಿದ ಮಿಸ್ಟರ್. 360

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts