More

    ಅಯ್ಯೋ ದುರ್ವಿಧಿಯೇ! ತಂದೆ ಮಾಡಿದ ತಪ್ಪಿಗೆ ಮಗನ IAS ಕನಸು ಛಿದ್ರ, ತಾಯಿಯ ನರಳಾಟ ಕಂಡು ಕಣ್ಣೀರಿಟ್ಟ ಜನ

    ಹೈದರಾಬಾದ್​: ಪ್ರತಿದಿನ ಹತ್ತಾರು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ಅವಘಡಗಳಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವು ಕುಟುಂಬಗಳು ರಸ್ತೆಗೆ ಬೀಳುತ್ತಿವೆ. ನಿದ್ದೆಯ ಕೊರತೆ, ಅರಿವಿನ ಕೊರತೆ, ನಿರ್ಲಕ್ಷ್ಯದ ಚಾಲನೆ, ಅತಿಯಾದ ವೇಗ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಅಧಿಕಾರಿಗಳು. ಇಲ್ಲೊಬ್ಬ ವಿದ್ಯಾರ್ಥಿ ದೊಡ್ಡವನಾದಾಗ ಕಲೆಕ್ಟರ್ ಆಗುವ ಕನಸು ಕಂಡಿದ್ದ. ಅದಕ್ಕಾಗಿ ಬಾಲ್ಯದಿಂದಲೂ ತುಂಬಾ ಕಷ್ಟಪಟ್ಟು ಓದುತ್ತಿದ್ದ. ನಿನ್ನೆಯ ಇಂಟರ್​ ಪರೀಕ್ಷೆಯಲ್ಲೂ ಒಳ್ಳೆಯ ಅಂಕ ಗಳಿಸಿದ್ದ. ಆದರೆ, ತಂದೆ ಮಾಡಿದ ತಪ್ಪಿಗೆ ಮಗನ ಕನಸು ದುರಂತ ಅಂತ್ಯ ಕಂಡಿದೆ.

    ತೆಲಂಗಾಣದ ಮೆಟ್ಪಲ್ಲಿಯ ಚೈತನ್ಯನಗರದ ಮಹಾಜನ್ ಶಿವರಾಮಕೃಷ್ಣ, ಸಿರಿಶಾ ದಂಪತಿಗೆ ಇಬ್ಬರು ಪುತ್ರರು. ಅವರ ಹೆಸರು ಮಹಾಜನ್ ಅಕ್ಷಯ್ (18) ಮತ್ತು ರಿಶ್ವಂತ್ ಸಾಯಿ. ಶಿವರಾಮಕೃಷ್ಣ ಪೇಂಟಿಂಗ್ ವ್ಯಾಪಾರ ಮಾಡುತ್ತಿದ್ದಾರೆ. ಹಿರಿಯ ಮಗ ಅಕ್ಷಯ್ ಇತ್ತೀಚೆಗೆ ಇಂಟರ್​ ಪರೀಕ್ಷೆಯ ಫಲಿತಾಂಶದಲ್ಲಿ 951 ಅಂಕಗಳನ್ನು ಗಳಿಸಿದ್ದ. ಈ ಹಿನ್ನೆಲೆಯಲ್ಲಿ ಅಕ್ಷಯ್​ಗೆ ಆರ್ಯ ವೈಶ್ಯ ಸಂಗಮ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಅಕ್ಷಯ್​ ಇಂಜಿನಿಯರಿಂಗ್ ಓದಲು ನಿರ್ಧರಿಸಿದ್ದ. ತಂದೆ ಶಿವರಾಮಕೃಷ್ಣ ಅವರು ಕಾಲೇಜಿಗೆ ಅಡ್ಮಿಷನ್​ ಮಾಡಲು ಮಗನ ಜತೆ ಬುಧವಾರ ಕಾರಿನಲ್ಲಿ ತೆರಳಿದ್ದರು. ಕೆಲಸ ಮುಗಿಸಿ ಬುಧವಾರ ರಾತ್ರಿ ಮೆಟ್ಪಲ್ಲಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಶಿವರಾಮಕೃಷ್ಣ ಅವರು ಸ್ವಲ್ಪ ಹೊತ್ತು ನಿದ್ದೆ ಮಾಡಲೆಂದು ಕಾರನ್ನು ಪಕ್ಕದಲ್ಲಿ ನಿಲ್ಲಿಸಿ, ಮಲಗಿದ್ದರು. ಸ್ವಲ್ಪ ಹೊತ್ತಿನ ನಂತರ ಬೇಗ ಮನೆಗೆ ತಲುಪುವ ಉದ್ದೇಶದಿಂದ ನಿದ್ರೆಯ ಮಂಪರಿನಲ್ಲಿ ಕಾರು ಚಲಾಯಿಸತೊಡಗಿದರು.

    ಅಷ್ಟರಲ್ಲಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅಕ್ಷಯ್ ಸೀಟ್ ಬೆಲ್ಟ್ ಹಾಕಿಕೊಳ್ಳಲು ಮರೆತಿದ್ದ. ಶಿವರಾಮೃಷ್ಣ ಸೀಟ್ ಬೆಲ್ಟ್ ಹಾಕಿಕೊಂಡಿದ್ದರು. ಮೆಟ್ಪಲ್ಲಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ರಾಜಸ್ವರರಾವ್ ಪೇಟಾದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕಾರು ಚಲಿಸುತ್ತಿದ್ದಾಗ ಎದುರಿಗೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.

    ಎಡಬದಿಯಲ್ಲಿ ಕುಳಿತಿದ್ದ ಅಕ್ಷಯ್ ಸೀಟ್ ಬೆಲ್ಟ್ ಧರಿಸದ ಕಾರಣ ಕಾರಿನ ಕನ್ನಡಿ ಆತನ ತಲೆಗೆ ಬಲವಾಗಿ ಬಡಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ. ಶಿವರಾಮಕೃಷ್ಣ ಸೀಟ್ ಬೆಲ್ಟ್ ಧರಿಸಿದ್ದರಿಂದ ಬಲೂನ್ ತೆರೆದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಷಯ್​ನನ್ನು ಮೆಟ್ಪಲ್ಲಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದರಿಂದ ಕೂಡಲೇ ಆತನನ್ನು ನಿಜಾಮಾಬಾದ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಗಲೇ ಅಕ್ಷಯ್ ಪ್ರಾಣ ಕಳೆದುಕೊಂಡಿದ್ದ. ಮಗನ ಶವದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ತಾಯಿಯನ್ನು ಕಂಡು ಅಲ್ಲಿದ್ದವರ ಕಣ್ಣಲ್ಲಿ ನೀರು ತುಂಬಿಕೊಂಡಿತು. (ಏಜೆನ್ಸೀಸ್​)

    ಅರ್ಧಕ್ಕೆ ನಿಂತ ರಣಬೀರ್​ ಕಪೂರ್​ ಅಭಿನಯದ ರಾಮಾಯಣ ಸಿನಿಮಾ! ಕಾರಣ ಹೀಗಿದೆ…

    ನಾನ್​ ರೆಡಿ ಇದ್ದೇನೆ… ಬ್ರೇಕಪ್​ ಬಗ್ಗೆ ಕೇಳಿದ್ದಕ್ಕೆ ಶ್ರುತಿ ಕೊಟ್ರು ಶಾಕಿಂಗ್​ ಹೇಳಿಕೆ, ದಂಗಾದ್ರೂ ಫ್ಯಾನ್ಸ್​!

    ಸುಹಾನಾಳ ಜತೆ ಡೇಟಿಂಗ್​ ಮಾಡಲು 7 ಷರತ್ತುಗಳನ್ನಿಟ್ಟ ಎಸ್​ಆರ್​ಕೆ! ಬಾಯ್​ಫ್ರೆಂಡ್​ ಕತೆ ಅಷ್ಟೇ ಅಂದ್ರು ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts