More

    ಅರ್ಧಕ್ಕೆ ನಿಂತ ರಣಬೀರ್​ ಕಪೂರ್​ ಅಭಿನಯದ ರಾಮಾಯಣ ಸಿನಿಮಾ! ಕಾರಣ ಹೀಗಿದೆ…

    ಮುಂಬೈ: ರಾಮಾಯಣವನ್ನು ಆಧರಿಸಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿದ್ದ ಬಾಲಿವುಡ್​ನ ಬಿಗ್​ ಬಜೆಟ್​ ಚಲನಚಿತ್ರವು ದುರದೃಷ್ಟವಶಾತ್ 2 ತಿಂಗಳ ಚಿತ್ರೀಕರಣದ ಬಳಿಕ ನಿಂತು ಹೋಗಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿ ಭಾರಿ ಸುದ್ದಿಯಾಗಿತ್ತು.

    ನಿತೇಶ್​ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಮಾಯಣ ಚಿತ್ರದ ವಿರುದ್ಧ ಕಾಪಿರೈಟ್​ ಪ್ರಕರಣ ದಾಖಲಾಗಿರುವುದರಿಂದ ಸದ್ಯಕ್ಕೆ ಯೋಜನೆಯನ್ನು ಕೈಬಿಡಲಾಗಿದೆ. ಮುಂದಿನ ವರ್ಷದ ದೀಪಾವಳಿಗೆ ಚಿತ್ರದ ಮೊದಲ ಭಾಗವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದರು. ಆದರೆ, ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ.

    ಈ ಚಿತ್ರದ ಬಜೆಟ್ 700 ಕೋಟಿ ರೂ.ಗೂ ಹೆಚ್ಚು ಎನ್ನಲಾಗಿದೆ. ಇದರ ಮೊದಲ ನಿರ್ಮಾಪಕ ಮಧು ಮಂಟೇನಾ ಈ ಸಿನಿಮಾದಿಂದ ಹಿಂದೆ ಸರಿದಿದ್ದು, ಅವರಿಗೆ ಕೊಡಬೇಕಾದ ಹಣವನ್ನು ನೀಡದೆ ಚಿತ್ರೀಕರಣ ಮುಂದುವರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಕಾರಣದಿಂದ ಚಿತ್ರದ ಶೂಟಿಂಗ್ ನಿಲ್ಲಿಸುವಂತೆ ನೋಟಿಸ್ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಚಿತ್ರತಂಡ ನೋಟಿಸ್‌ನ ವಿವರಗಳನ್ನು ಪರಿಶೀಲಿಸುತ್ತಿದೆ ಮತ್ತು ಕೆಲವೇ ವಾರಗಳಲ್ಲಿ ಚಿತ್ರೀಕರಣ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಸಿನಿಮಾ ಮೂಲಗಳು ತಿಳಿಸಿವೆ.

    ಇನ್ನು ಶೂಟಿಂಗ್​ ನಿಂತಿರುವುದರಿಂದ ಕಲಾವಿದರ ವೇಳಾಪಟ್ಟಿಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಈ ವರ್ಷದ ಕೊನೆಯಲ್ಲಿ ಲವ್ ಅಂಡ್ ವಾರ್ ಚಿತ್ರಕ್ಕಾಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ರಣಬೀರ್ ಕಪೂರ್ ಡೇಟ್ಸ್ ನೀಡಿದ್ದರು. ಈ ಚಿತ್ರದಲ್ಲಿ ಹನುಮಾನ್ ಪಾತ್ರದಲ್ಲಿ ನಟಿಸುತ್ತಿರುವ ಸನ್ನಿ ಡಿಯೋಲ್ ಕೂಡ ವರ್ಷಾಂತ್ಯದಲ್ಲಿ ತಮ್ಮ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ರಣಬೀರ್‌ನ ರಾಮ್‌ ಪಾತ್ರಕ್ಕೆ ರಾವಣನಾಗಿ ಕನ್ನಡದ ಸೂಪರ್‌ಸ್ಟಾರ್ ಯಶ್ ಬಣ್ಣ ಹಚ್ಚಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ದೇಶದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಕನ್ನಡದ ಸೂಪರ್ ಸ್ಟಾರ್ ಯಶ್ ಅವರ ಮಾನ್ಸ್ಟರ್ ಮೈನ್ಸ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸಿನಿಮಾವನ್ನು 3 ಭಾಗಗಳಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ. ಬಾಲಿವುಡ್‌ನ ನಟರು ಮಾತ್ರವಲ್ಲದೆ ಇತರ ಉದ್ಯಮಗಳಿಂದಲೂ ಸ್ಟಾರ್​ ನಟರು ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಸನ್ನಿ ಡಿಯೋಲ್, ಲಾರಾ ದತ್ತಾ, ರಾಕುಲ್ ಪ್ರೀತ್ ಸಿಂಗ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ನಾನ್​ ರೆಡಿ ಇದ್ದೇನೆ… ಬ್ರೇಕಪ್​ ಬಗ್ಗೆ ಕೇಳಿದ್ದಕ್ಕೆ ಶ್ರುತಿ ಕೊಟ್ರು ಶಾಕಿಂಗ್​ ಹೇಳಿಕೆ, ದಂಗಾದ್ರೂ ಫ್ಯಾನ್ಸ್​!

    ಸುಹಾನಾಳ ಜತೆ ಡೇಟಿಂಗ್​ ಮಾಡಲು 7 ಷರತ್ತುಗಳನ್ನಿಟ್ಟ ಎಸ್​ಆರ್​ಕೆ! ಬಾಯ್​ಫ್ರೆಂಡ್​ ಕತೆ ಅಷ್ಟೇ ಅಂದ್ರು ನೆಟ್ಟಿಗರು

    ಇದೇ ಮೊದಲ ಬಾರಿಗೆ ತಮ್ಮ ಲವ್​ ಸ್ಟೋರಿ ಹೇಳಿದ್ರು ಸಿಎಂ ಸಿದ್ದು: ಈ ಕಾರಣಕ್ಕೆ ಲವ್​ ಫೇಲ್ಯೂರ್​ ಆಯ್ತಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts