ಸ್ಟಾರ್​​ ಹೋಟೆಲ್​ನಲ್ಲಿ ಅಭಿಮಾನಿಗಳಿಗೆ ಪಾರ್ಟಿ ಕೊಡಿಸಿದ ನಟಿ ಕೀರ್ತಿ ಸುರೇಶ್! ಸೌತ್​ ಬ್ಯೂಟಿಗೆ ನೆಟ್ಟಿಗರ ಮೆಚ್ಚುಗೆ​

Keerti
Published on

ಚೆನ್ನೈ: ಬ್ಯೂಟಿ ಕ್ವೀನ್​​ ಕೀರ್ತಿ ಸುರೇಶ್,​ ಸೌತ್​ ಸಿನಿರಂಗದ ಬಹುಬೇಡಿಕೆಯ, ಬಹುಭಾಷಾ ನಟಿ. ಕೆಲವು ದಿನಗಳ ಹಿಂದಷ್ಟೇ ಕಾಲಿವುಡ್​ ಬ್ಯೂಟಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿಸುವುದರ ಜೊತೆಗೆ ಕೀರ್ತಿ ಸುರೇಶ್​ ಅವರ ಹೆಸರನ್ನು ಇಡೀ ದಿನ ಟ್ರೆಂಡಿಂಗ್​ನಲ್ಲಿ ಇಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳಿಗೆ ಪಾರ್ಟಿ ನೀಡುವ ಮೂಲಕ ಕೀರ್ತಿ ಸುರೇಶ್​ ವಿಶೇಷ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ಇತರೆ ನಟಿಯರಿಗಿಂತ ಅಭಿಮಾನಿಗಳ ವಿಚಾರದಲ್ಲಿ ವಿಭಿನ್ನ ನಿಂತಿದ್ದಾರೆ.

ಚೆನ್ನೈನ ಸ್ಟಾರ್​ ಹೋಟೆಲ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಪಾರ್ಟಿ ನೀಡಿದ ಕೀರ್ತಿ ಸುರೇಶ್​, ಕೆಲ ಕಾಲ ಅವರೊಂದಿಗೆ ಸಂವಾದ ಸಹ ನಡೆಸಿದರು. ಅಲ್ಲದೆ, ಸೆಲ್ಫಿ ಮತ್ತು ವಿಡಿಯೋಗಳಿಗೆ ಪೋಸ್​ ನೀಡಿದರು. ಅಭಿಮಾನಿಗಳ ಜೊತೆ ಕೇಕ್​ ಕತ್ತರಿಸಿದ ಬಳಿಕ ತಾವು ಸಹ ಅಭಿಮಾನಿಗಳ ಜೊತೆ ಕುಳಿತು ಭೋಜನ ಸವಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಕೀರ್ತಿ ಸುರೇಶ್​ ಅವರು ನೆಟ್ಟಿಗರ ಮನ ಗೆದ್ದಿದ್ದಾರೆ.

ಇದುವರೆಗೂ ನಾಯಕ ನಟರು ಮಾತ್ರ ಇಂತಹ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಓರ್ವ ನಟಿ ತನ್ನ ಅಭಿಮಾನಿಗಳಿಗೆ ಪಾರ್ಟಿ ಆಯೋಜಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕೀರ್ತಿ ಸುರೇಶ್​ ಪ್ರಸ್ತುತ ಐ ಸಿರೆನ್​ ಹೆಸರಿನ ಸಿನಿಮಾದಲ್ಲಿ ಜಯಂ ರವಿ ಜೊತೆ ನಟಿಸುತ್ತಿದ್ದಾರೆ. ಅವರ ಬಹುಭಾಷ ಸಿನಿಮಾ "ದಸರಾ" ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ತೆಲುಗು ನಟ ನಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net