More

    ಗುರೂಜಿ ಆಕೆಯನ್ನಷ್ಟೇ ಹೊಗಳುತ್ತಿದ್ದರು; ಪ್ರಿಯಾಂಕಾ ನನಗಿಂತ ಉತ್ತಮ ಡಾನ್ಸರ್ ಎಂದ ಕತ್ರಿನಾ

    ಬಾಲಿವುಡ್ ನಟಿ ಕತ್ರಿನಾ ಕೈಫ್, ಮತ್ತೊಬ್ಬ ನಟಿ ಪ್ರಿಯಾಂಕಾ ಚೋಪ್ರಾರನ್ನು ಹೊಗಳಿದ್ದಾರೆ. ಅವರು ನನಗಿಂತ ಉತ್ತಮ ಡ್ಯಾನ್ಸರ್ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಜತೆಗಿನ ಗೆಳೆತನದ ಬಗ್ಗೆ ಮಾತನಾಡುತ್ತಾ ಕತ್ರಿನಾ, ‘ನನಗಾಗ ಸುಮಾರು 18 ವರ್ಷವಿರಬಹುದು. ಚಿತ್ರರಂಗದ ಕನಸು ಹೊತ್ತು ಮುಂಬೈಗೆ ಬಂದಿದ್ದೆ. ನಾನು ಮತ್ತು ಪ್ರಿಯಾಂಕಾ ಇಬ್ಬರೂ, ಒಬ್ಬರೇ ಗುರೂಜಿ ಬಳಿ ಕಥಕ್ ಕಲಿಯುತ್ತಿದ್ದೆವು. ಆಕೆ ನನಗಿಂತ ಕೆಲವು ತಿಂಗಳು ಸೀನಿಯರ್ ಆಗಿದ್ದರು.

    ಕಥಕ್ ಕ್ಲಾಸ್​ಗೆ ಬಂದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಎಲ್ಲರೂ ಒಂದು ಮೂಲೆಯಲ್ಲಿ ನಿಲ್ಲುತ್ತಿದ್ದೆವು. ಗುರೂಜಿ ಒಬ್ಬೊಬ್ಬರನ್ನೇ ಕರೆದು ಕೊಠಡಿಯ ಮಧ್ಯದಲ್ಲಿ ಡ್ಯಾನ್ಸ್ ಮಾಡಲು ಹೇಳುತ್ತಿದ್ದರು. ಪ್ರಿಯಾಂಕಾ ಸರದಿ ಬಂದಾಗ ಬೆಂಕಿಯಂತಿರುತ್ತಿದ್ದರು. ಅವರ ಡ್ಯಾನ್ಸ್ ನೋಡಿ ಗುರೂಜಿ ವಾಹ್ ಎಂದು ಉದ್ಘರಿಸುತ್ತಿದ್ದರು. ನನ್ನ ಸರದಿ ಬಂದಾಗ ನಾನು ತಲೆ ಅಲ್ಲಾಡಿಸುತ್ತಾ ಹೋಗಿ ಡ್ಯಾನ್ಸ್ ಮಾಡುತ್ತಿದ್ದೆ. ಆಗ ಗುರೂಜಿ ಕೆಲವು ಸ್ಟೆಪ್ಸ್ ಆಗುತ್ತಲೇ ನಿಲ್ಲಿಸಿ, ನೀನು ಹೋಗಮ್ಮಾ ಎಂದಷ್ಟೇ ಹೇಳುತ್ತಿದ್ದರು. ಆಗ ನಾನೂ ಒಂದು ದಿನ ಪ್ರಿಯಾಂಕಾಳಂತೆಯೇ ಡ್ಯಾನ್ಸ್ ಮಾಡಬೇಕು ಅಂತಂದುಕೊಳ್ಳುತ್ತಿದ್ದೆ. ಆಗಿನಿಂದಲೂ ಇಬ್ಬರೂ ಪರಿಚಿತರು’ ಎಂದು ಹೇಳಿಕೊಂಡಿದ್ದಾರೆ ಕತ್ರಿನಾ ಕೈಫ್.

    ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ಕತ್ರಿನಾ ಕೈಫ್ ನಟಿಸಿರುವ ‘ಫೋನ್ ಭೂತ್’ ಇದೇ ನ. 4ರಂದು ಬಿಡುಗಡೆಯಾಗಲಿದೆ. ನಂತರ ‘ಮೆರ್ರಿ ಕ್ರಿಸ್ಮಸ್’ ಹಾಗೂ ‘ಟೈಗರ್ 3’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಪ್ರಿಯಾಂಕಾ ಚೋಪ್ರಾ ‘ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮೀ’ ಎಂಬ ಹಾಲಿವುಡ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಬಳಿಕ ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಹಾಗೂ ಆಲಿಯಾ ಭಟ್ ಮೂವರೂ ‘ಜೀಲೇ ಜರಾ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. – ಏಜೆನ್ಸೀಸ್

    ಮಗಳು ಅವೆಲ್ಲ ಅರ್ಥವಾಗದಷ್ಟು ಚಿಕ್ಕವಳು: ಕೊಹ್ಲಿ ಆಟಕ್ಕೆ ಸಂಭ್ರಮಿಸಿ ಅನುಷ್ಕಾ ಪ್ರತಿಕ್ರಿಯಿಸಿದ್ದು ಹೀಗೆ..

    ದೀಪಾವಳಿ ಸಂದರ್ಭ ಬೈಗುಳಕ್ಕೆ ಒಳಗಾಗ್ತಿದ್ದ ಕೊಹ್ಲಿಗೆ ಈ ಬಾರಿ ಭರ್ಜರಿ ಪ್ರಶಂಸೆ; ಬೈದವರೇ ಹೊಗಳುತ್ತಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts