ಗಯಾನಾ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ವೆಸ್ಟ್ ಇಂಡೀಸ್ ತಂಡವು ಉಗಾಂಡದ ಎದುರು 134 ರನ್ಗಳ ಭರ್ಜರಿ ಜಯಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡವು, ಜಾನ್ಸನ್ ಚಾರ್ಲ್ಸ್ (44 ರನ್, 42 ಎಸೆತ, 4 ಬೌಂಡರಿ, 2 ಸಿಕ್ಸರ್), ಆ್ಯಂಡ್ರೆ ರಸೆಲ್ (30 ರನ್, 17 ಎಸೆತ, 6 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು.
174 ರನ್ಗಳ ಬೆನ್ನತ್ತಿದ್ದ ಉಗಾಂಡ ತಂಡವನ್ನು ಇನ್ನಿಲ್ಲದಂತೆ ಕಾಡಿದ ವಿಂಡೀಸ್ ಬೌಲರ್ಗಳು ಎದುರಾಳಿ ತಂಡವನ್ನು 39 ರನ್ಗಳಿಗೆ ಕಟ್ಟಿಹಾಕುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ ಪರ ಅಕೀಲ್ ಹೊಸೇನ್ (4-0-11-5), ಅಲ್ಜಾರಿ ಜೋಸೆಫ್ (3-0-6-2), ರೊಮಾರಿಯೋ ಶೆಫರ್ಡ್ (2-0-9-1), ಆ್ಯಂಡ್ರೆ ರಸೆಲ್ (1-0-4-1), ಗುಡಕೇಶ್ ಮೋಟಿ (2-0-6-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.