More

  ಕಂಪ್ರೆಸರ್​ ಸ್ಟಾಲ್​ನಲ್ಲಿ ಬೆಂಕಿ; 389 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ

  ನವದೆಹಲಿ: ಟೊರಂಟೋದಿಂದ ಪ್ಯಾರಿಸ್​ನತ್ತ ಹೊರಟಿದ್ದ ಏರ್​ ಕೆನೆಡಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಂಪನಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.

  ಬೋಯಿಂಗ್ 777-300 ವಿಮಾನವು ವಿಮಾನ ನಿಲ್ದಾಣದಿಂದ ಟೇಕಾಫ್ ಆಗುತ್ತಿದ್ದಂತೆ ಅದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಅರಿತ ಪೈಲಟ್​ ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ಈ ವೇಳೆ ವಿಮಾನದಲ್ಲಿ 389 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

  ಈ ಕುರಿತು ಪ್ರಕಟಣೆ ಒಂದನ್ನು ಬಿಡುಗೆ ಮಾಡಿರುವ ಏರ್​ ಕೆನೆಡಾ, ಜೂನ್​ 05ರಂದು ಟೊರಂಟೋದಿಂದ ಪ್ಯಾರಿಸ್​ನತ್ತ ಹೊರಟಿದ್ದ AC872 ವಿಮಾನದ ಕಂಪ್ರೆಸರ್​ ಸ್ಟಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ 389 ಪ್ರಯಾಣಿಕರು ಮತ್ತು 13 ಸಿಬ್ಬಂದಿಗೆ ಪ್ರಯಾಣಿಕರಿಗೆ ಬದಲಿ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಏರ್​ ಕೆನೆಡಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  ಇದನ್ನೂ ಓದಿ: ಪಾಕ್​ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾಗೆ ಶಾಕ್​; ಗಾಯಕ್ಕೆ ತುತ್ತಾದ ಪ್ರಮುಖ ಆಟಗಾರ

  ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, 389 ಪ್ರಯಾಣಿಕರನ್ನು ಹೊತ್ತು ಟೊರಂಟೋದಿಂದ ಪ್ಯಾರಿಸ್​ನತ್ತ ಹೊರಟಿದ್ದ ವಿಮಾನವು ಟೇಕಾಫ್‌ ಆಗಿತ್ತು. ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಕಂಪ್ರೆಸರ್​ ಸ್ಟಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ ಮಾಹಿತಿ ನೀಡಿದ ಪೈಲೆಟ್‌ಗಳು, ತುರ್ತು ಲ್ಯಾಂಡಿಂಗ್‌ಗೆ ಮನವಿ ಮಾಡಿದ್ದಾರೆ. ಬಳಿಕ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಅಧಿಕಾರಿಗಳು, ವಿಮಾನ ಲ್ಯಾಂಡಿಂಗ್‌ ಮಾಡಲು ಅವಕಾಶ ನೀಡಿದ ಮಾಡಿಕೊಟ್ಟಿದ್ದಾರೆ.

  ಬಳಿಕ ಸಂಭವನೀಯ ಅನಾಹುತ ತಡೆಯಲು ಮೂರು ಅಗ್ನಿ ಶಾಮಕ ವಾಹನಗಳನ್ನು ಸಜ್ಜುಗೊಳಿಸಿದರು. ವಿಮಾನದಲ್ಲಿದ್ದ ಎಲ್ಲಾ 389 ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವಿಮಾನದ ಮೂಲಕ ಪ್ಯಾರಿಸ್​ಗೆ ಕಳುಹಿಸಲು ವ್ಯವಸ್ಥೆ ಮಾಡಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts