

Reel Craze: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಓಟದಲ್ಲಿ ಜನರು ಇತ್ತೀಚಿಗೆ ತಮ್ಮ ಪ್ರಾಣಕ್ಕೆ ಕತ್ತು ತಂದುಕೊಳ್ಳುತ್ತಿದ್ದಾರೆ. ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡ್ತಾ, ಹೆಚ್ಚೆಚ್ಚು ಫೇಮಸ್ ಆಗುವುದು ಇಂದಿನ ಯುವ ಜನರ ಅಭ್ಯಾಸವಾಗಿದೆ. ಅದೇ ರೀತಿಯಾಗಿ ಇಲ್ಲೊಂದು ಮಹಿಳೆಯ ರೀಲ್ಸ್ ಕ್ರೇಜ್ ನೋಡಿದ್ರೆ ನೀವು ಅಚ್ಚರಿ ಪಡುವುದು ಖಂಡಿತ. ಈಕೆಗೆ ಇರುವ ರೀಲ್ಸ್ ಹುಚ್ಚು ನೆಲದ ಮೇಲಲ್ಲ, ಬದಲಿಗೆ ಮರದ ಮೇಲೆ.
ಹೌದು, ಇತ್ತೀಚಿಗೆ ವೈರಲ್ ಆದ ವಿಡಿಯೋದಲ್ಲಿ ಯುವತಿಯೂ ಮರವನ್ನೇರಿ ಡಾನ್ಸ್ ಮಾಡಿದ್ದಾಳೆ. ಈ ರೀಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಫೇಮಸ್ ಆಗಿ ನೆಟ್ಟಿಗರು ಕಾಮೆಂಟ್ ಮಳೆಸುರಿಸಿದ್ದಾರೆ.
ವೈರಲ್ ವಿಡಿಯೋ
ಕಾಶ್ಮೀರದ ಉಷಾ ನಾಗವಂಶಿ ಎಂಬ ಮಹಿಳೆಯೂ ಈ ಅಪಾಯಕಾರಿ ಮತ್ತು ಆಕರ್ಷಕವಾದ ನೃತ್ಯ ವಿಡಿಯೋದ ಮೂಲಕ ಸಾಮಾಜಿಕ ಮಾಧ್ಯಮವನ್ನು ಬಿರುಗಾಳಿ ಎಬ್ಬಿಸಿದ್ದಾರೆ.
'ಇಷಕ್‌ಜಾದೆ' ಚಿತ್ರದ ಜನಪ್ರಿಯ 'ಝಲ್ಲಾ ವಲ್ಲಾಹ್' ಹಾಡಿಗೆ ಎತ್ತರದ ಮರವನ್ನೇರಿ ಉಷಾ ನಾಗವಂಶಿ ರೀಲ್ಸ್ ಮಾಡಿದ್ದಾರೆ. ಮರದ ನೃತ್ಯದ ಸಾಹಸವು ಅವರ ರೋಮಾಂಚನ ಮತ್ತು ಜೀವದ ಅಪಾಯದ ಎಚ್ಚರಿಸುವ ರೀತಿಯಲ್ಲಿದೆ.
ಕೇವಲ ಏಳು ದಿನಗಳ ಹಿಂದೆ 'ushanagvanshi31' ಎಂಬ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ, 23.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಬಹು ಬೇಗನೆ ಗಮನ ಸೆಳೆಯುತ್ತಿದ್ದಂತೆ ನೆಟ್ಟಿಗರ ಪ್ರತಿಕ್ರಿಯೆಗಳು ಹರಿದು ಬಂದಿವೆ. ಕೆಲವು ಬಳಕೆದಾರರು ಇದರ ಅಪಾಯಕಾರಿ ಸ್ವರೂಪವನ್ನು ಎತ್ತಿ ತೋರಿಸಿದರೆ, ಇನ್ನು ಕೆಲವರು ನಗುವಿನ ಎಮೋಜಿಗಳಿಂದ ಪೋಸ್ಟ್ಅನ್ನು ತುಂಬಿಸಿದ್ದಾರೆ.
ಒಬ್ಬ ನೆಟ್ಟಿಗ "ಒಂದು ದಿನ ಅವಳು ಪೋಸ್ಟ್ ಮಾಡುವುದನ್ನು ನಿಲ್ಲಿಸುತ್ತಾಳೆ, ಮತ್ತು ನಮಗೆಲ್ಲರಿಗೂ ಏಕೆ ಎಂದು ತಿಳಿದಿದೆ" ಎಂದು ಹೇಳಿದ್ದಾರೆ.
ಆದರೆ ಉಷಾ ಈ ರೀತಿಯಾಗಿ ವಿಡಿಯೋ ಮಾಡುವುದು ಹೊಸದಲ್ಲ, ಅವಳು ಆತ್ಮವಿಶ್ವಾಸದಿಂದ ಛಾವಣಿಗಳು, ಟೆರೇಸ್‌ಗಳು ಮತ್ತು ವಿದ್ಯುತ್ ಅಥವಾ ನೆಟ್‌ವರ್ಕ್ ಟವರ್‌ಗಳ ಮೇಲೆ ರೀಲ್ಸ್ ಮಾಡಿದ್ದಾಳೆ. ಪ್ರತಿ ಬಾರಿಯೂ ಉಷಾಳ ರೀಲ್ಸ್ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸುತ್ತದೆ. (ಏಜೆನ್ಸೀಸ್)